ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆಯಲ್ಲಿ (Gold Prices in India) ಇಳಿಕೆಯ ಟ್ರೆಂಡ್ ಮುಂದುವರಿಯುತ್ತಿದೆ. 10 ಗ್ರಾಮ್ಗೆ ಇನ್ನಷ್ಟು 100 ರುಪಾಯಿ ಅಗ್ಗವಾಗಿದೆ ಚಿನ್ನ. ಬೆಳ್ಳಿ ಬೆಲೆಯೂ ಒಂದು ಕಿಲೋಗೆ 100ರುಪಾಯಿಯಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಈಗ 22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ 50,900 ರೂ ಇದೆ. 24 ಕ್ಯಾರಟ್ ಚಿನ್ನದ ಬೆಲೆ 55,530 ರೂ ಇದೆ. ಬೆಂಗಳೂರಿನಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ. ನಗರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ನಿನ್ನೆ 10 ಗ್ರಾಮ್ಗೆ 650 ರೂನಷ್ಟು ಕಡಿಮೆ ಆಗಿತ್ತು. ಈಗ 51,050 ರೂ ಇದ್ದ ಚಿನ್ನದ ಬೆಲೆ ಈಗ 50,950 ರುಪಾಯಿ ಆಗಿದೆ. ಬಹುತೇಕ ಇತರ ದಕ್ಷಿಣ ರಾಜ್ಯಗಳಲ್ಲೂ ಇದೇ ಬೆಲೆ ಇದೆ. ಇನ್ನು, ನಿನ್ನೆ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. 100 ಗ್ರಾಮ್ ಬೆಳ್ಳಿಯ ಬೆಲೆ 10 ರುಪಾಯಿಯಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ 10 ಗ್ರಾಮ್ಗೆ 654.50 ರೂಪಾಯಿ ಇದೆ. ಬೆಂಗಳೂರು ಹಾಗೂ ಕೆಲ ನಗರಗಳಲ್ಲಿ 674 ರೂ ಆಗಿದೆ.
ವಿದೇಶಗಳ ಚಿನಿವಾರಪೇಟೆಗಳಲ್ಲಿ (Bullion Market) ಚಿನ್ನದ ಬೆಲೆ ಬಹುತೇಕ ಯಥಾಸ್ಥಿತಿ ಇದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಕಡಿಮೆ ಇದೆ. ಯುಎಇಯ ಭಾಗವಾಗಿರುವ ದುಬೈ, ಅಬುಧಾಬಿ ಮತ್ತು ಶಾರ್ಜಾ ನಗರಗಳಲ್ಲಿ ಬೆಲೆ ತುಸು ಇಳಿಕೆಯಾಗಿದೆ. ಉಳಿದ ಕಡೆ ಬಹುತೇಕ ನಿನ್ನೆಯ ಬೆಲೆಗಳೇ ಇವೆ. ಈ ಎಲ್ಲಾ ದೇಶಗಳಲ್ಲೂ 22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ 49 ಸಾವಿರ ರೂಗಿಂತ ಕಡಿಮೆ ಮಟ್ಟದಲ್ಲೇ ಇವೆ. ದುಬೈ ಮತ್ತು ಅಮೆರಿಕದಲ್ಲಿ 10 ಗ್ರಾಮ್ ಚಿನ್ನದ ಬೆಲೆ 46 ಸಾವಿರ ರೂ ಮಟ್ಟಕ್ಕಿಂತ ಕೆಳಗೆ ಇಳಿದಿವೆ. ಆದರೆ, ದಶಕಗಳ ಹಿಂದೆ ಈ ದೇಶಗಳು ಮತ್ತು ಭಾರತದ ಮಧ್ಯೆ ಚಿನ್ನದ ಬೆಲೆಯಲ್ಲಿ ಇದ್ದ ದೊಡ್ಡ ಅಂತರ ಈಗ ಉಳಿದಿಲ್ಲ.
ಡಾಲರ್ ಎಫೆಕ್ಟ್
ಅಮೆರಿಕದಲ್ಲಿ ಡಾಲರ್ ಕರೆನ್ಸಿ ಚೇತರಿಸಿಕೊಂಡಿರುವುದು ಈಗ ಚಿನ್ನದ ಮೇಲಿನ ಹೂಡಿಕೆಗೆ ಬೇಡಿಕೆ ಕಡಿಮೆ ಆಗಿದೆ ಎಂಬ ಅಭಿಪ್ರಾಯ ಇದೆ. ಅಲ್ಲದೇ ಅಮೆರಿಕದ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಮತ್ತೊಮ್ಮೆ ಏರಿಸುವ ಸುಳಿವು ನೀಡಿರುವುದೂ ಕೂಡ ಚಿನ್ನದ ಬದಲು ಡಾಲರ್ ಬಾಲ ಹಿಡಿಯುವತ್ತ ಹೂಡಿಕೆದಾರರು ಗಮನ ಕೊಡುತ್ತಿದ್ದಾರೆ. ಇದು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿರಬಹುದು..
ಇದನ್ನೂ ಓದಿ: BIG FD Rates: ಬೆಂಗಳೂರಿನ ರಿಯಲ್ ಎಸ್ಟೇಟ್ ಅನ್ನೂ ಮೀರಿಸುತ್ತದೆ ಈ ಜನ ಬ್ಯಾಂಕ್ನ ಎಫ್ಡಿ ರಿಟರ್ನ್ಸ್
ಭಾರತದಲ್ಲಿರುವ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 50,900 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,530 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 654.50 ರೂ
ಬೆಂಗಳೂರಿನಲ್ಲಿರುವ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 50,950 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,580 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 674 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 50,950 ರೂ
ಚೆನ್ನೈ: 51,550 ರೂ
ಮುಂಬೈ: 50,900 ರೂ
ದೆಹಲಿ: 51,050 ರೂ
ಕೋಲ್ಕತಾ: 50,900 ರೂ
ಕೇರಳ: 50,900 ರೂ
ಅಹ್ಮದಾಬಾದ್: 50,950 ರೂ
ಜೈಪುರ್: 51,050 ರೂ
ಲಕ್ನೋ: 51,050 ರೂ
ಭುವನೇಶ್ವರ್: 50,900 ರೂ
ಇದನ್ನೂ ಓದಿ: 7th Pay Commission: ಶೀಘ್ರದಲ್ಲೇ ಡಿಎ ಮತ್ತು ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ ಸಾಧ್ಯತೆ; ಏನಿದು ಫಿಟ್ಮೆಂಟ್ ಏರಿಕೆ?
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,630 ರಿಂಗಿಟ್ (47,657 ರುಪಾಯಿ)
ದುಬೈ: 2037.50 ಡಿರಾಮ್ (45,515 ರುಪಾಯಿ)
ಅಮೆರಿಕ: 560 ಡಾಲರ್ (45,972 ರುಪಾಯಿ)
ಸಿಂಗಾಪುರ: 763 ಸಿಂಗಾಪುರ್ ಡಾಲರ್ (46,215 ರುಪಾಯಿ)
ಕತಾರ್: 2,105 ಕತಾರಿ ರಿಯಾಲ್ (47,400 ರೂ)
ಓಮನ್: 223 ಒಮಾನಿ ರಿಯಾಲ್ (47,400 ರುಪಾಯಿ)
ಕುವೇತ್: 174.50 ಕುವೇತಿ ದಿನಾರ್ (46,546 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 6,740 ರೂ
ಚೆನ್ನೈ: 6,740 ರೂ
ಮುಂಬೈ: 6,545 ರೂ
ದೆಹಲಿ: 6,545 ರೂ
ಕೋಲ್ಕತಾ: 6,545 ರೂ
ಕೇರಳ: 6740 ರೂ
ಅಹ್ಮದಾಬಾದ್: 6,545 ರೂ
ಜೈಪುರ್: 6,545 ರೂ
ಲಕ್ನೋ: 6,545 ರೂ
ಭುವನೇಶ್ವರ್: 6740 ರೂ