BIG FD Rates: ಬೆಂಗಳೂರಿನ ರಿಯಲ್ ಎಸ್ಟೇಟ್ ಅನ್ನೂ ಮೀರಿಸುತ್ತದೆ ಈ ಜನ ಬ್ಯಾಂಕ್​ನ ಎಫ್​ಡಿ ರಿಟರ್ನ್ಸ್

Jana Small Finance Bank of Bengaluru: ಕೋರಮಂಗಲದಲ್ಲಿ ಮುಖ್ಯಕಚೇರಿ ಹೊಂದಿರುವ ಮತ್ತು ರಾಷ್ಟ್ರವ್ಯಾಪಿ ಶಾಖೆಗಳನ್ನು ಹೊಂದಿರುವ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ 5ನೇ ವಾರ್ಷಿಕೋತ್ಸವ ನಿಮಿತ್ತ ಆಕರ್ಷಕ ಎಫ್​ಡಿ ಸ್ಕೀಮ್ ಆರಂಭಿಸಿದೆ. ಅದರ ವಿವರ ಇಲ್ಲಿ ತಿಳಿಯಿರಿ....

BIG FD Rates: ಬೆಂಗಳೂರಿನ ರಿಯಲ್ ಎಸ್ಟೇಟ್ ಅನ್ನೂ ಮೀರಿಸುತ್ತದೆ ಈ ಜನ ಬ್ಯಾಂಕ್​ನ ಎಫ್​ಡಿ ರಿಟರ್ನ್ಸ್
ಜನ ಫೈನಾನ್ಸ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 09, 2023 | 4:47 PM

ಬೆಂಗಳೂರು: ನಿಶ್ಚಿತ ಠೇವಣಿಗಳಿಗೆ ಅಧಿಕ ಬಡ್ಡಿ ದರ (FD Interest Rates) ನೀಡುವುದರಲ್ಲಿ ಬ್ಯಾಂಕುಗಳು ಪೈಪೋಟಿಗೆ ಬಿದ್ದಿರುವಂತಿದೆ. ಬಹಳಷ್ಟು ಬ್ಯಾಂಕುಗಳು ಈಗ ಶೇ. 7ಕ್ಕಿಂತ ಹೆಚ್ಚು ಬಡ್ಡಿಯನ್ನು ಎಫ್​ಡಿಗಳಿಗೆ ನೀಡುತ್ತಿವೆ. ಕೆಲ ಬ್ಯಾಂಕುಗಳು ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿ ಆಫರ್ ಮಾಡುತ್ತಿವೆ. ಆದರೆ, ಬೆಂಗಳೂರಿನ ಸಣ್ಣ ಬ್ಯಾಂಕೊಂದು ತನ್ನಲ್ಲಿನ ನಿಶ್ಚಿತ ಠೇವಣಿಗಳಿಗೆ (Fixed Deposits) ಶೇ. 8.85ರವರೆಗೆ ಬಡ್ಡಿ ಕೊಡುವುದಾಗಿ ಹೇಳಿದೆ. ಆದರೆ, ಇದು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ವಿಶೇಷ ಆಫರ್ ಆಗಿದ್ದು ಮಾರ್ಚ್ 31ರವರೆಗೆ ಮಾತ್ರ ಲಭ್ಯ ಇದೆ.

ಬೆಂಗಳೂರಿನ ಕೋರಮಂಗಲದಲ್ಲಿ ಮುಖ್ಯಕಚೇರಿ ಹೊಂದಿರುವ ಜನ ಫೈನಾನ್ಸ್ ಬ್ಯಾಂಕ್​ಗೆ ಇದು 5ನೇ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ವಿಶೇಷ ಎಫ್​ಡಿ ಸ್ಕೀಮ್ ಪ್ರಕಟಿಸಿದೆ. ಮಾರ್ಚ್ 1ರಂದು ಶುರುವಾಗಿರುವ ಈ ಸ್ಕೀಮ್ ಮಾರ್ಚ್ 31ರವರೆಗೆ ಮಾತ್ರ ಇರಲಿದೆ. ಹಿರಿಯ ನಾಗರಿಕರಿಗೆ ಶೇ. 8.85ರವರೆಗೂ ಬಡ್ಡಿ ಕೊಡುತ್ತದೆ ಈ ಬ್ಯಾಂಕು. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇತರೆಲ್ಲಾ ಗ್ರಾಹಕರಿಗೂ ಸಿಗುವ ಬಡ್ಡಿ ಕಡಿಮೆ ಏನಿಲ್ಲ. ಇವರಿಗೆ ಶೇ. 8.15 ರವರೆಗೂ ಬಡ್ಡಿ ಸಿಗುತ್ತದೆ. ಈ ವಿಶೇಷ ಬಡ್ಡಿದರಗಳು ಮಾರ್ಚ್ 1ರಿಂದ ಮಾರ್ಚ್ 31ರೊಳಗೆ ಶುರುವಾಗುವ 500 ದಿನಗಳ ಅವಧಿ ಠೇವಣಿಗಳಿಗೆ ಅನ್ವಯ ಆಗುತ್ತದೆ.

2ರಿಂದ 3 ವರ್ಷ ಅವಧಿಯ ಠೇವಣಿಗಳಿಗೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ ದರ ಅನ್ವಯ ಆಗುತ್ತದೆ. 5 ವರ್ಷಕ್ಕಿಂತ ಮೇಲ್ಪಟ್ಟ ಅವಧಿಯ ಠೇವಣಿಗಳಿಗೆ ಸಿಗುವ ಬಡ್ಡಿ ಕಡಿಮೆ ಆಗುತ್ತಾ ಹೋಗುತ್ತದೆ.

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ವಾರ್ಷಿಕೋತ್ಸವ ಆಫರ್: ಅತಿ ಹೆಚ್ಚು ಬಡ್ಡಿ ಸಿಗುವ ಠೇವಣಿಗಳು

500 ದಿನದ ಎಫ್​ಡಿ: ಹಿರಿಯ ನಾಗರಿಕರಿಗೆ ಶೇ. 8.85, ಇತರರಿಗೆ ಶೇ. 8.15 ಬಡ್ಡಿ

2-3 ವರ್ಷದ ಎಫ್​ಡಿ: ಹಿರಿಯ ನಾಗರಿಕರಿಗೆ ಶೇ. 8.80, ಇತರರಿಗೆ ಶೇ. 8.10 ಬಡ್ಡಿ

3-5 ವರ್ಷದ ಎಫ್​ಡಿ: ಹಿರಿಯ ನಾಗರಿಕರಿಗೆ ಶೇ. 8.05, ಇತರರಿಗೆ ಶೇ. 7.35 ಬಡ್ಡಿ

1-2 ವರ್ಷದ ಎಫ್​ಡಿ: ಹಿರಿಯ ನಾಗರಿಕರಿಗೆ ಶೇ. 7.95, ಇತರರಿಗೆ ಶೇ. 7.25 ಬಡ್ಡಿ

5 ವರ್ಷದ ಎಫ್​ಡಿ: ಹಿರಿಯ ನಾಗರಿಕರಿಗೆ ಶೇ. 7.95, ಇತರರಿಗೆ ಶೇ. 7.25 ಬಡ್ಡಿ

ಇದನ್ನೂ ಓದಿGrow Money: ಎಫ್​ಡಿ, ಇನ್ಷೂರೆನ್ಸ್​ಗಿಂತ ಇವು ಎಷ್ಟೋ ಬೆಟರ್; ಹೆಚ್ಚು ರಿಸ್ಕ್ ಇಲ್ಲದ ಉತ್ತಮ ಹೂಡಿಕೆಗಳಿವು

ಭಾರತದಲ್ಲಿ ಯಾವ ಬ್ಯಾಂಕುಗಳೂ ಶೇ. 8.85ರ ದರದಲ್ಲಿ ಎಫ್​ಡಿಗೆ ಬಡ್ಡಿ ಕೊಡುತ್ತಿಲ್ಲ ಸದ್ಯಕ್ಕೆ. ಶ್ರೀರಾಮ್ ಫೈನಾನ್ಸ್ ಸಂಸ್ಥೆ ಶೇ. 9.05ರ ಬಡ್ಡಿ ದರವನ್ನು ಕೊಡುತ್ತದೆ ಎಂದು ಹೇಳಲಾದರೂ ಅದಿನ್ನೂ ದೃಢಪಟ್ಟಿಲ್ಲ. ಹಣ ಬೆಳೆಸಲು ಈ ಬಡ್ಡಿ ದರ ಬಹಳ ಸಹಕಾರಿಯಾಗುತ್ತದೆ. ಬೆಂಗಳೂರಿನಲ್ಲಿ ಒಂದು ನಿವೇಶನದ ಮೌಲ್ಯ ಸರಾಸರಿಯಾಗಿ ಒಂದು ವರ್ಷದಲ್ಲಿ ಶೇ. 6-9ರಷ್ಟು ಬೆಳೆಯುತ್ತದೆ ಎಂಬ ಅಂದಾಜು ಇದೆ. ಕೆಲ ಕಡೆ ಗರಿಷ್ಠ ಶೇ. 12ರವರೆಗೂ ಭೂಮಿಯ ಬೆಲೆ ಬೆಳೆಯಬಹುದು. ಈ ಹಿನ್ನೆಲೆಯಲ್ಲಿ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಎಫ್​ಡಿ ಬಡ್ಡಿದರಗಳು ಆಕರ್ಷಕ ಎನಿಸುತ್ತವೆ.

ಆರ್​ಡಿ ದರಗಳೂ ಉತ್ತಮ

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಆರ್​ಡಿ ದರಗಳೂ ಉತ್ತಮವಾಗಿವೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 8.80ರವರೆಗೂ ಬಡ್ಡಿ ಕೊಡಲಾಗುತ್ತದೆ. ಇತರರಿಗೂ ಶೇ. 8.10ರವರೆಗೆ ಬಡ್ಡಿ ಸಿಗುತ್ತದೆ. 2-3 ವರ್ಷ ಅವಧಿಯ ಆರ್​ಡಿಗೆ ಗರಿಷ್ಠ ಬಡ್ಡಿ ಆಫರ್ ಇದೆ. 1-2 ವರ್ಷದ ಅವಧಿಯ ಆರ್​ಡಿಗೂ ಉತ್ತಮ ಬಡ್ಡಿ ದರ ಇದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ವಿಶೇಷ ಎಫ್​ಡಿ ಸ್ಕೀಮ್​ನಂತೆ ಆರ್​ಡಿ ದರಗಳು ವಾರ್ಷಿಕೋತ್ಸವ ಪ್ರಯುಕ್ತ ಮಾಡಿರುವ ಘೋಷಣೆಗಳಲ್ಲ. ಈ ಆರ್​ಡಿ ಬಡ್ಡಿ ದರಗಳು ಫೆಬ್ರುವರಿ 1ರಿಂದಲೇ ಜಾರಿಗೆ ಬಂದಿವೆ.

ಇದನ್ನೂ ಓದಿLIC Bima Ratna Policy: ಬಿಮಾ ರತ್ನ ಪಾಲಿಸಿಯಲ್ಲಿ ದಿನಕ್ಕೆ 138 ಕಟ್ಟಿ, 13.5 ಲಕ್ಷ ರೂ ರಿಟರ್ನ್ ಪಡೆಯಿರಿ

ಎಲ್ಲಿವೆ ಶಾಖೆಗಳು:

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐದು ವರ್ಷದಲ್ಲಿ ಬಹಳ ವೇಗವಾಗಿ ಬೆಳೆದುಹೋಗಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಈ ಬ್ಯಾಂಕ್​ನ ಶಾಖೆಗಳಿವೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಶಾಖೆಗಳಿವೆ. ಬೆಂಗಳೂರಿನಲ್ಲಿ ಬನಶಂಕರಿ, ಬೊಮ್ಮನಹಳ್ಳಿ, ಕೋರಮಂಗಲ, ಅಮೃತಹಳ್ಳಿ, ಕೆಂಗೇರಿ, ಮಲ್ಲೇಶ್ವರಂ ಇತ್ಯಾದಿ ಹಲವು ಏರಿಯಾಗಳಲ್ಲಿ ಈ ಬ್ಯಾಂಕ್​ನ ಬ್ರ್ಯಾಂಚ್​ಗಳನ್ನು ತೆರೆಯಲಾಗಿದೆ.

ಈ ಮುಂದಿನ ಲಿಂಕ್ ಕ್ಲಿಕ್ ಮಾಡಿದರೆ ಜನ ಫೈನಾನ್ಸ್ ಬ್ಯಾಂಕ್​ನ ವಿವಿಧ ಶಾಖೆಗಳ ಲೊಕೇಶನ್​ಗಳನ್ನು ನೋಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Thu, 9 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ