Grow Money: ಎಫ್​ಡಿ, ಇನ್ಷೂರೆನ್ಸ್​ಗಿಂತ ಇವು ಎಷ್ಟೋ ಬೆಟರ್; ಹೆಚ್ಚು ರಿಸ್ಕ್ ಇಲ್ಲದ ಉತ್ತಮ ಹೂಡಿಕೆಗಳಿವು

Investment Ideas: ಹಣ ಬೆಳೆಸುವುದು ಸುಮ್ಮನೆ ಅಲ್ಲ. ಯಾವುದೇ ಸಂಸ್ಥೆ ನಾವು ಒಂದು ವರ್ಷದಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇವೆ ಎಂದೆಲ್ಲಾ ಆಮಿಷಗಳನ್ನು, ಆಫರ್​ಗಳನ್ನು ಒಡ್ಡಿದರೆ ನಂಬಲು ಹೋಗಬೇಡಿ. ಅಂಥ ದಾರಿಗಳು ಯಾವುವೂ ಇಲ್ಲ.

Grow Money: ಎಫ್​ಡಿ, ಇನ್ಷೂರೆನ್ಸ್​ಗಿಂತ ಇವು ಎಷ್ಟೋ ಬೆಟರ್; ಹೆಚ್ಚು ರಿಸ್ಕ್ ಇಲ್ಲದ ಉತ್ತಮ ಹೂಡಿಕೆಗಳಿವು
ಹಣ ಬೆಳೆಸುವುದು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 08, 2023 | 7:01 PM

ಜೀವನದಲ್ಲಿ ಒಂದೋ ಜನಸಂಪಾದನೆ ಇರಬೇಕು, ಇಲ್ಲ ಹಣ ಸಂಪಾದನೆ ಇರಬೇಕು. ಎರಡೂ ಇಲ್ಲದವನದ್ದು ನತದೃಷ್ಟ ಜೀವನ ಎಂದು ಬುದ್ಧಿವಂತರು ಹೇಳುತ್ತಾರೆ. ಹಣ ಸಂಪಾದನೆ (Earning Money) ಮಾಡಿದಾಕ್ಷಣ ಜೀವನ ಉದ್ಧಾರ ಆಗಲ್ಲ. ಹಣ ಹಂಚಿಕೆ, ಹಣ ಉಳಿತಾಯ ಹೇಗೆ ಮಾಡಬೇಕು ಎಂಬ ಸೂಕ್ಷ್ಮತೆಯೂ ಗೊತ್ತಿರಬೇಕು. ಇಲ್ಲದಿದ್ದರೆ ಸಂಪಾದನೆ ಮಾಡುತ್ತಾ ಹೋದಂತೆ ಕೂಡಿಟ್ಟ ಹಣ ಕರಗುತ್ತಾ ಹೋಗುತ್ತದೆ. ಹಿಡಿಗಂಟು ಟೊಳ್ಳಾಗಿಹೋಗುತ್ತದೆ. ಹತ್ತಾರು ಕೋಟಿ ದುಡ್ಡಿಟ್ಟವ ಆರಾಮವಾಗಿ ಇರಬಹುದೇನೋ, ಅದರೆ ನಿರ್ದಿಷ್ಟ ಆದಾಯದ ಗುಂಪಿನ ಮಧ್ಯಮ ವರ್ಗದ ಮಂದಿಗೆ ಹಣ ಉಳಿತಾಯ ಬಿಟ್ಟರೆ ಭವಿಷ್ಯ ಬೆಳಗುವ ದಾರಿ ಬೇರೆ ಇರುವುದಿಲ್ಲ. ಆದ್ದರಿಂದ ಎಚ್ಚರ ಎಚ್ಚರ. ಹಣ ಸಂಪಾದಿಸುವ ಕಲೆ ಸಿದ್ಧಿಸಿಕೊಂಡರೂ ಅದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಕಲೆಯನ್ನೂ ಕಲಿತಿರಬೇಕು. ಅಂಥ ಕೆಲ ಟಿಪ್ಸ್ ಇಲ್ಲಿವೆ.

ನೀವು ಈಗ ಸಂಪಾದನೆ ಮಾಡುವ ಹಣದಲ್ಲಿ ಈಗಿನ ಅಗತ್ಯತೆಗಳನ್ನಷ್ಟೇ ಪೂರೈಸಲು ಉಪಯೋಗಿಸದೇ ಭವಿಷ್ಯದ ಭದ್ರತೆಗೂ ಎತ್ತಿಡಬೇಕು. ಅದಕ್ಕೆ ನೀವು ವೃತ್ತಿಜೀವನದ ಆರಂಭದಿಂದಲೇ ವಿವಿಧ ಹೂಡಿಕೆಗಳಿಗೆ ಹಣ ತೊಡಗಿಸಿಕೊಳ್ಳಬೇಕು. ಅಂದರೆ ಮೊದಲ ಬಾರಿ ಕೆಲಸಕ್ಕೆ ಸೇರುತ್ತಲೇ ಇನ್ವೆಸ್ಟ್​ಮೆಂಟ್ ಕ್ರಿಯೆ ಚಾಲೂ ಮಾಡಬೇಕು. ಝೀರೋಧ ಸಿಇಒ ನಿತಿನ್ ಕಾಮತ್ ಮೊದಲಾದವರು ಸತತವಾಗಿ ಹೇಳುತ್ತಿರುವ ಪಾಠ ಇದೆಯೇ.

ಎಫ್​ಡಿ, ಆರ್​ಡಿ, ಇನ್ಷೂರೆನ್ಸ್ ಬೇಡ

ನಮ್ಮ ದೇಶದಲ್ಲಿ ಹಣದುಬ್ಬರ ದರ ಶೇ. 5ರಿಂದ 10ರಷ್ಟು ಇರುತ್ತೆ. ಅಂದರೆ ಪ್ರತೀ ವರ್ಷ ಇಷ್ಟು ಪ್ರತಿಶತದಂತೆ ಬೆಲೆ ಏರುತ್ತಿರುತ್ತದೆ. ಅಂದರೆ ಹಣದ ನಿಜ ಮೌಲ್ಯ ಕಡಿಮೆ ಆಗುತ್ತಾ ಹೋಗುತ್ತದೆ. ನಾವು ಈಗ ಎಫ್​ಡಿ, ಆರ್​ಡಿ ಅಥವಾ ಇನ್ಷೂರೆನ್ಸ್​ಗಳಲ್ಲಿ ಹಣ ತೊಡಗಿಸಿದರೆ ಹೆಚ್ಚೆಂದರೆ ಶೇ. 7ರಷ್ಟು ಮಾತ್ರ ಹಣ ಬೆಳೆಯಬಹುದು.

ಚಿನ್ನ, ರಿಯಲ್ ಎಸ್ಟೇಟ್, ಎನ್​ಪಿಎಸ್, ಮ್ಯೂಚುವಲ್ ಫಂಡ್ ಎಸ್​ಐಪಿಗಳು ಉತ್ತಮ

ಚಿನ್ನಕ್ಕೆ ಯಾವತ್ತಿದ್ದರೂ ಚಿನ್ನದ ಬೆಲೆ. ಇದು ಕಷ್ಟಕಾಲಕ್ಕೆ ಆಗುವ ವಸ್ತು. ಇದರ ಬೆಲೆಯೂ ವರ್ಷದಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಬೆಳೆಯುತ್ತಲೇ ಹೋಗುತ್ತದೆ.

ಭೂಮಿಯೂ ಚಿನ್ನದಂತೆಯೇ. ಸರಿಯಾದ ಜಾಗ ನೋಡಿ ಭೂಮಿಯನ್ನು ಖರೀದಿಸಿದರೆ ಅದರ ಬೆಲೆ ಕೂಡ ವರ್ಷಕ್ಕೆ ಶೇ. 10ರಿಂದ 20ರಷ್ಟಾದರೂ ಹೆಚ್ಚುತ್ತಾ ಹೋಗುತ್ತದೆ. ರಿಯಲ್ ಎಸ್ಟೇಟ್​ನಲ್ಲಿ ಹಣ ಹಾಕಲು ದೊಡ್ಡ ಮೊತ್ತ ಇಲ್ಲದವರು ನ್ಯಾಷನಲ್ ಪೆನ್ಷನ್ ಸ್ಕೀಮ್, ಮ್ಯೂಚುವಲ್ ಫಂಡ್ ಎಸ್​ಐಪಿಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿCIBIL Tips: ಅತಿಯಾಗಿ ಕ್ರೆಡಿಟ್ ಕಾರ್ಡ್ ಉಪಯೋಗಿಸದಿರಿ: ಸಿಬಿಲ್ ಸ್ಕೋರ್ ಹೆಚ್ಚಿಸುವ 3 ಐಡಿಯಾಗಳು

ಎಸ್​ಐಪಿ ಅಥವಾ ಶಾರ್ಟ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳು ಶೇ. 12ರ ದರದಲ್ಲಿ ಹಣ ಬೆಳೆಯಲು ಸಹಾಯಕವಾಗುತ್ತವೆ. ಎನ್​ಪಿಎಸ್​ನಲ್ಲಿ ಹಣ ತೊಡಗಿಸಿದರೆ ಬಡ್ಡಿಯ ಜೊತೆಗೆ ಹಲವು ತೆರಿಗೆ ರಿಯಾಯಿತಿಗಳೂ ಸಿಗುತ್ತವೆ. ಇದರಿಂದ ನಿಮ್ಮ ಹೂಡಿಕೆ ಹಣ ವಾರ್ಷಿಕವಾಗಿ ಶೇ. 9ರಿಂದ 12ರಷ್ಟು ಬೆಳೆಯಬಹುದು.

ಎಫ್​ಡಿ ಮತ್ತು ಎಸ್​ಐಪಿ ಒಂದು ಹೋಲಿಕೆ:

ಈಗ ನೀವು ಇನ್ಷೂರೆನ್ಸ್ ಸ್ಕೀಮ್​ನಲ್ಲಿ ತಿಂಗಳಿಗೆ 20 ಸಾವಿರ ರೂನಂತೆ 30 ವರ್ಷ ಹೂಡಿಕೆ ಮಾಡುತ್ತೀರಿ. ಅದಕ್ಕೆ ವಾರ್ಷಿಕ ಬಡ್ಡಿ ದರ ಶೇ. 7 ಇರುತ್ತದೆ. 30 ವರ್ಷದ ಬಳಿಕ ನಿಮಗೆ 2.43 ಕೋಟಿ ರೂ ರಿಟರ್ನ್ ಸಿಗುತ್ತದೆ. ಅದೇ ನೀವು ಮ್ಯೂಚುವಲ್ ಫಂಡ್​ನ ಎಸ್​ಐಪಿಯಲ್ಲಿ ಅಷ್ಟೇ ಅವಧಿಗೆ ಅಷ್ಟೇ ಹಣ ತೊಡಗಿಸಿದರೆ 7 ಕೋಟಿ ರೂ ರಿಟರ್ನ್ ಬರುತ್ತದೆ. ಹಾಗಂತ ಹೂಡಿಕೆ ತಜ್ಞ ವಿಶಾಖ ಕಪೂರ್ ಅವರು ಉದಾಹರಣೆ ಸಹಿತ ವಿಶ್ಲೇಷಣೆ ಮಾಡಿದ್ದಾರೆ.

ಇದನ್ನೂ ಓದಿFD Rates: ಬಜಾಜ್ ಫೈನಾನ್ಸ್​ನಲ್ಲಿ ಠೇವಣಿಗಳಿಗೆ ಶೇ. 8.20ರವರೆಗೆ ಬಡ್ಡಿ; ಇಲ್ಲಿದೆ ವಿವರ

ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬಯಸುವವರು ಷೇರುಮಾರುಕಟ್ಟೆಯ ಇನ್​ಟ್ರಾ ಡೇ ವಹಿವಾಟು ನಡೆಸಬಹುದು. ಸ್ವಲ್ಪ ಅನುಭವ, ಎಚ್ಚರಿಕೆ ವಹಿಸಿದರೆ ಈ ವ್ಯವಹಾರದಲ್ಲಿ ಬಹಳ ಲಾಭ ಗಳಿಸಬಹುದು.

ಆಮಿಷಗಳಿಗೆ ಒಳಗಾಗದಿರಿ

ಹಣ ಬೆಳೆಸುವುದು ಸುಮ್ಮನೆ ಅಲ್ಲ. ಯಾವುದೇ ಸಂಸ್ಥೆ ನಾವು ಒಂದು ವರ್ಷದಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇವೆ ಎಂದೆಲ್ಲಾ ಆಮಿಷಗಳನ್ನು, ಆಫರ್​ಗಳನ್ನು ಒಡ್ಡಿದರೆ ನಂಬಲು ಹೋಗಬೇಡಿ. ಅಂಥ ದಾರಿಗಳು ಯಾವುವೂ ಇಲ್ಲ. ಇಲ್ಲದಿದ್ದರೆ ವಿನಿವಿಂಕ್, ಗುರುಟೀಕ್, ಐಎಂಎ ಇತ್ಯಾದಿಯಂತಹ ಸ್ಕ್ಯಾಮ್​ಗಳಿಗೆ ಬಲಿಯಾಗಿ ಇದ್ದಬದ್ದ ಹಣವನ್ನೆಲ್ಲಾ ಕಳೆದುಕೊಳ್ಳಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ