Gold Silver Rate Today | ಬೆಂಗಳೂರು: ಇಂದು ಎಲ್ಲೆಡೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ನೀವು ನಿಮ್ಮ ಸಹೋದರಿಗಾಗಿ ಏನಾದರೂ ಉಡುಗೊರೆ ನೀಡಲೇ ಬೇಕಲ್ಲವೇ? ಹಾಗಿರುವಾಗ ಚಿನ್ನಾಭರಣ ಕೊಳ್ಳುವ ಕುರಿತಾಗಿ ಯೋಚಿಸಿರಬಹುದು. ಇಂದು ನಿಮಗೆ ಖುಷಿ ನೀಡುವ ವಿಚಾರವೆಂದರೆ ಚಿನ್ನ, ಬೆಳ್ಳಿ ಆಭರಣಗಳೆರಡೂ ಬೆಲೆ ಇಳಿಕೆಯಾಗಿದೆ. ಪ್ರಮುಖ ನಗರಗಳಲ್ಲಿ ಎಷ್ಟಿದೆ ದರ ಎಂಬ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,150 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,41,500 ರೂಪಾಯಿಗೆ ಇಳಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,170 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,81,700 ರೂಪಾಯಿ ನಿಗದಿಯಾಗಿದೆ. ಸುಮಾರು 1,100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡಿದ್ದು ಕೆಜಿ ಬೆಳ್ಳಿಗೆ 61,700 ರೂಪಾಯಿ ನಿಗದಿಯಾಗಿದೆ. ಸುಮಾರು 500 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,650 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,46,500 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,710 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,87,100 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಸ್ಥಿರವಾಗಿಯೇ ಉಳಿದಿದೆ. ಬೆಳ್ಳಿ ದರದಲ್ಲಿ 400 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 66,600 ರೂಪಾಯಿ ನಿಗದಿಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,300 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,63,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,500 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ಬೆಲೆ 5,05,000 ರೂಪಾಯಿಗೆ ಇಳಿಕೆಯಾಗಿದೆ. ಸುಮಾರು 1,200 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿ ಬೆಲೆ 500 ರೂಪಾಯಿ ಇಳಿಕೆ ಬಳಿಕ 61,700 ರೂಪಾಯಿ ನಿಗದಿಯಾಗಿದೆ.
ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಳಿಕೆ ಕಂಡು ಬಂದಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಜೈಪುರ, ಕೇರಳ, ಹೈದರಾಬಾದ್ನಲ್ಲಿಯೂ ಸಹ ಆಭರಣಗಳ ಬೆಲೆ ಇಳಿಕೆಯಾಗಿದೆ. ಇದು ಚಿನ್ನಾಭರಣ ಖರೀದಿದಾರರಿಗೆ ಕೊಂಚ ಖುಷಿ ನೀಡುವ ವಿಚಾರ.
ಇದನ್ನೂ ಓದಿ:
Published On - 8:45 am, Sun, 22 August 21