Gold Price Today: ಚಿನ್ನ, ಬೆಳ್ಳಿ ದರ ಇಂದೂ ಹೆಚ್ಚಳ; ಇಲ್ಲಿದೆ ಬೆಂಗಳೂರು ಸೇರಿ ಪ್ರಮುಖ ನಗರಗಳ ದರ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನ, ಬೆಳ್ಳಿ ದರ ಇಂದೂ ಹೆಚ್ಚಳ; ಇಲ್ಲಿದೆ ಬೆಂಗಳೂರು ಸೇರಿ ಪ್ರಮುಖ ನಗರಗಳ ದರ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Edited By:

Updated on: Dec 11, 2022 | 5:03 AM

Gold Silver Price in Bangalore | ಬೆಂಗಳೂರು: ಚಿನ್ನ ಹಾಗೂ ಬೆಳ್ಳಿಯ ದರ ಮತ್ತೆ ಏರಿಕೆಯ ಹಾದಿ ಹಿಡಿದಿದ್ದು ಇಂದೂ ಸಹ ಮೇಲ್ಮುಖವಾಗಿ ಸಾಗಿವೆ. ಜಾಗತಿಕ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ದೇಶದಲ್ಲಿಯೂ ಬೆಲೆ ವ್ಯತ್ಯಾಸವಾಗುತ್ತಿದ್ದು, ಬೇಡಿಕೆ ಹೆಚ್ಚಳದ ನಿರೀಕ್ಷೆಯೊಂದಿಗೆ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಹೆಚ್ಚಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಚಿನ್ನ, ಬೆಳ್ಳಿ ದರ ಕ್ರಮವಾಗಿ 250 ರೂ. ಹಾಗೂ 1400 ರೂ. ಏರಿಕೆಯಾಗಿತ್ತು. ಇಂದೂ ಟ್ರೆಂಡ್ ಮುಂದುವರಿದಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 150 ರೂ. ಹೆಚ್ಚಾಗಿ 49,900 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 160 ರೂ. ಹೆಚ್ಚಾಗಿ 54,440 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂ. ಏರಿಕೆಯಾಗಿ 68,600 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ಇಂದು ದುಬಾರಿ; ಪ್ರಮುಖ ನಗರಗಳ ದರ ವಿವರ ಇಲ್ಲಿ ನೋಡಿ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 50,550 ರೂ. ಮುಂಬೈ- 49,900 ರೂ, ದೆಹಲಿ- 50,050 ರೂ, ಕೊಲ್ಕತ್ತಾ- 49,900 ರೂ, ಬೆಂಗಳೂರು- 49,950 ರೂ, ಹೈದರಾಬಾದ್- 49,900 ರೂ, ಕೇರಳ- 49,900 ರೂ, ಪುಣೆ- 49,900 ರೂ, ಮಂಗಳೂರು- 49,950 ರೂ, ಮೈಸೂರು- 49,950 ರೂ. ಆಗಿದೆ.

ಚೆನ್ನೈ- 55,150 ರೂ, ಮುಂಬೈ- 54,440 ರೂ, ದೆಹಲಿ- 54,590 ರೂ, ಕೊಲ್ಕತ್ತಾ- 54,440 ರೂ, ಬೆಂಗಳೂರು- 54,490 ರೂ, ಹೈದರಾಬಾದ್- 54,440 ರೂ, ಕೇರಳ- 54,440 ರೂ, ಪುಣೆ- 54,440 ರೂ, ಮಂಗಳೂರು- 54,490 ರೂ, ಮೈಸೂರು- 54,490 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 73,000 ರೂ, ಮೈಸೂರು- 73,000 ರೂ., ಮಂಗಳೂರು- 73,000 ರೂ., ಮುಂಬೈ- 68,100 ರೂ, ಚೆನ್ನೈ- 73,000 ರೂ, ದೆಹಲಿ- 68,100 ರೂ, ಹೈದರಾಬಾದ್- 73,000 ರೂ, ಕೊಲ್ಕತ್ತಾ- 68,000 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us