Gold Price Today: ಆಭರಣ ಪ್ರಿಯರಿಗೆ ಶಾಕ್; ಗಗನಕ್ಕೇರಿದ ಚಿನ್ನ, ಬೆಳ್ಳಿ ದರ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price in Bangalore | ಬೆಂಗಳೂರು: ಚಿನ್ನ (Gold Rate) ಹಾಗೂ ಬೆಳ್ಳಿಯ ದರ (Silver Price) ಮತ್ತೆ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಆಘಾತ ನೀಡಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಮಲ್ಟಿ ಕಮಾಡಿಟಿ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ದರ ಇಂದೂ ಸಹ ಕೆಲವೆಡೆ ಮತ್ತೆ ಏರಿಕೆಯಾಗಿದೆ. ಹೈದರಾಬಾದ್ನಲ್ಲಿಂದು ಚಿನ್ನದ ದರ ಗರಿಷ್ಠ ಮಟ್ಟ ತಲುಪಿದೆ. ಒಟ್ಟಾರೆಯಾಗಿ ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 600 ರೂ. ಹೆಚ್ಚಾದರೆ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 650 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 1400 ರೂ. ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 600 ರೂ. ಹೆಚ್ಚಾಗಿ 53,600 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 650 ರೂ. ಏರಿಕೆಯಾಗಿ 58,470 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 1400 ರೂ. ಏರಿಕೆಯಾಗಿ 74,700 ರೂ. ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ – 55,050 ರೂ.
- ಮುಂಬೈ- 53,600 ರೂ.
- ದೆಹಲಿ- 53,750 ರೂ.
- ಕೊಲ್ಕತ್ತಾ- 53,600 ರೂ.
- ಬೆಂಗಳೂರು- 53,650 ರೂ.
- ಹೈದರಾಬಾದ್- 53,600 ರೂ.
- ಕೇರಳ- 53,600 ರೂ.
- ಪುಣೆ- 53,600 ರೂ.
- ಮಂಗಳೂರು- 53,650 ರೂ.
- ಮೈಸೂರು- 53,650 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ- 60,050 ರೂ.
- ಮುಂಬೈ- 58,470 ರೂ.
- ದೆಹಲಿ- 58,610 ರೂ.
- ಕೊಲ್ಕತ್ತಾ- 58,470 ರೂ.
- ಬೆಂಗಳೂರು- 58,550 ರೂ.
- ಹೈದರಾಬಾದ್- 58,470 ರೂ.
- ಕೇರಳ- 58,470 ರೂ.
- ಪುಣೆ- 58,470 ರೂ.
- ಮಂಗಳೂರು- 58,510 ರೂ.
- ಮೈಸೂರು- 58,510 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
- ಬೆಂಗಳೂರು- 77,800 ರೂ.
- ಮೈಸೂರು- 77,800 ರೂ.
- ಮಂಗಳೂರು- 77,800 ರೂ.
- ಮುಂಬೈ- 74,700 ರೂ.
- ಚೆನ್ನೈ- 77,800 ರೂ.
- ದೆಹಲಿ- 74,700 ರೂ.
- ಹೈದರಾಬಾದ್- 77,800 ರೂ.
- ಕೊಲ್ಕತ್ತಾ- 77,800 ರೂ.