Gold Price Today: ಇಳಿಕೆಯಾಯ್ತು ಚಿನ್ನ, ಬೆಳ್ಳಿ ದರ; ಇಲ್ಲಿದೆ ವಿವರ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಇಳಿಕೆಯಾಯ್ತು ಚಿನ್ನ, ಬೆಳ್ಳಿ ದರ; ಇಲ್ಲಿದೆ ವಿವರ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Image Credit source: PTI
Edited By:

Updated on: Jan 07, 2023 | 12:00 AM

Gold Silver Price in Bangalore | ಬೆಂಗಳೂರು: ಚಿನ್ನದ ದರ ಏರಿಳಿಕೆಯ ಟ್ರೆಂಡ್ ಬುಲಿಯನ್ ಮಾರುಕಟ್ಟೆಯಲ್ಲಿ ಮುಂದುವರಿದಿದ್ದು, ಉಭಯ ಲೋಹಗಳ ದರ ಇಂದು ಕುಸಿದಿದೆ. ಆದಾಗ್ಯೂ, ಒಟ್ಟು ದರ ಲೆಕ್ಕಾಚಾರ ನೋಡಿದರೆ ಏರಿಕೆ ಕಾಣಿಸಿದೆ. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ  400 ರೂ. ಕುಸಿದಿದ್ದು, 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ದರ 430 ರೂ. ಕುಸಿದಿದೆ. ಕಳೆದ ಎರಡು ದಿನಗಳಿಂದ ತಟಸ್ಥವಾಗಿದ್ದ 1 ಕೆಜಿ ಬೆಳ್ಳಿ ದರ 1000 ರೂ. ಇಳಿಕೆಯಾಗಿ 71,000 ರೂ. ಆಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 400 ರೂ. ಕುಸಿದು 50,900 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 430 ರೂ. ಇಳಿಕೆಯಾಗಿ 55,530 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 1,000 ರೂ. ಇಳಿಕೆಯಾಗಿ 71,000 ರೂಪಾಯಿ ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 50,950 ರೂ.
  • ಮುಂಬೈ- 50,900 ರೂ.
  • ದೆಹಲಿ- 51,050 ರೂ.
  • ಕೊಲ್ಕತ್ತಾ- 50,900 ರೂ.
  • ಬೆಂಗಳೂರು- 51,950 ರೂ.
  • ಹೈದರಾಬಾದ್- 50,900 ರೂ.
  • ಕೇರಳ- 50,900 ರೂ.
  • ಪುಣೆ- 50,900 ರೂ.
  • ಮಂಗಳೂರು- 50,950 ರೂ.
  • ಮೈಸೂರು- 50,950 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 56,620 ರೂ.
  • ಮುಂಬೈ- 55,530 ರೂ.
  • ದೆಹಲಿ- 55,680 ರೂ.
  • ಕೊಲ್ಕತ್ತಾ- 55,530 ರೂ.
  • ಬೆಂಗಳೂರು- 55,580 ರೂ.
  • ಹೈದರಾಬಾದ್- 55,530 ರೂ.
  • ಕೇರಳ- 55,530 ರೂ.
  • ಪುಣೆ- 55,530 ರೂ.
  • ಮಂಗಳೂರು- 55,580 ರೂ.
  • ಮೈಸೂರು- 55,580 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 73,500 ರೂ.
  • ಮೈಸೂರು- 73,500 ರೂ.
  • ಮಂಗಳೂರು- 73,500 ರೂ.
  • ಮುಂಬೈ- 71,000 ರೂ.
  • ಚೆನ್ನೈ- 73,500 ರೂ.
  • ದೆಹಲಿ- 71,000 ರೂ.
  • ಹೈದರಾಬಾದ್- 73,500 ರೂ.
  • ಕೊಲ್ಕತ್ತಾ- 71,000 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Follow Us