Gold Rate Today: ಅಲ್ಪವೇ ಏರಿಕೆಯಾಗಿದೆ ಚಿನ್ನ, ಬೆಳ್ಳಿ ದರ; ಕೂಡಿಟ್ಟ ಹಣದಲ್ಲಿ ಆಭರಣ ಕೊಳ್ಳುವುದಾದರೆ ಯೋಚಿಸಿ

| Updated By: shruti hegde

Updated on: Aug 18, 2021 | 8:56 AM

Gold Price Today: ಚಿನ್ನ, ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ನೀವು ಕೂಡಿಟ್ಟ ಹಣದಲ್ಲಿ ಚಿನ್ನಾಭರಣ ಖರೀದಿಸಬೇಕು ಎಂದೆನಿಸಿದರೆ ಯೋಚಿಸಬಹುದು. ಪ್ರಮುಖ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಈ ಕೆಳಗಿನಂತಿದೆ.

Gold Rate Today: ಅಲ್ಪವೇ ಏರಿಕೆಯಾಗಿದೆ ಚಿನ್ನ, ಬೆಳ್ಳಿ ದರ; ಕೂಡಿಟ್ಟ ಹಣದಲ್ಲಿ ಆಭರಣ ಕೊಳ್ಳುವುದಾದರೆ ಯೋಚಿಸಿ
ಕನಿಷ್ಠ ಹೂಡಿಕೆ 1 ಗ್ರಾಂ ಚಿನ್ನ. ಚಂದಾದಾರಿಕೆಯ ಗರಿಷ್ಠ ಮಿತಿಯು ವಯಕ್ತಿಕ ಹೂಡಿಕೆದಾರರಿಗೆ 4 ಕೇಜಿ, ಹಿಂದೂ ಅವಿಭಜಿತ ಕುಟುಂಬಗಳಿಗೆ 4 ಕೇಜಿ, ಮತ್ತು ಟ್ರಸ್ಟ್‌ಗಳು ಹಾಗೂ ಅದೇ ರೀತಿಯ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ (ಏಪ್ರಿಲ್-ಮಾರ್ಚ್) ಗರಿಷ್ಠ 20 ಕೇಜಿ.
Follow us on

Gold Silver Rate Today | ಬೆಂಗಳೂರು: ಆಭರಣದ ದರ ದೈನಂದಿನ ದರ ಬದಲಾವಣೆಯಲ್ಲಿ ಏರಿಳಿತ ಕಾಣುತ್ತಿರುವುದು ಸಹಜ. ಕೆಲವು ದಿನಗಳ ಹಿಂದಿನಿಂದ ಚಿನ್ನದ ದರ ಅಲ್ವವೇ ಏರಿಕೆಯತ್ತ ಸಾಗುತ್ತಿದೆ. ನಿನ್ನೆ ಕೆಲವೆಡೆ ಚಿನ್ನದ ದರ (Gold Price) ಸ್ಥಿರವಾಗಿದ್ದರೆ ಇನ್ನು ಕೆಲವೆಡೆ ಕೆಲವೆಡೆ ಕೊಂಚ ಇಳಿಕೆಯಾಗಿತ್ತು. ಬೆಳ್ಳಿ ದರದಲ್ಲಿಯೂ (Silver Price) ಸಹ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿತ್ತು. ಆದರೆ ಇಂದು ( ಆಗಸ್ಟ್ 18, ಬುಧವಾರ) ಚಿನ್ನ, ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ನೀವು ಕೂಡಿಟ್ಟ ಹಣದಲ್ಲಿ ಚಿನ್ನಾಭರಣ ಖರೀದಿಸಬೇಕು ಎಂದೆನಿಸಿದರೆ ಯೋಚಿಸಬಹುದು. ಪ್ರಮುಖ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,200 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,42,000 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,900 ರೂಪಾಯಿ ಏರಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,220 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,82,200 ರೂಪಾಯಿ ಇದೆ. ಸುಮಾರು 2,100 ರೂಪಾಯಿಯಷ್ಟು ಏರಿಕೆ ಕಂಡಿದೆ. ಬೆಳ್ಳಿ ದರದಲ್ಲಿಯೂ ಸಹ ಕೊಂಚ ಏರಿಕೆಯಾಗಿದ್ದು ಕೆಜಿ ಬೆಳ್ಳಿಗೆ 63,600 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 900 ರೂಪಾಯಿ ಏರಿಕೆ ಕಂಡು ಬಂದಿದೆ.

ಆಭರಣ ಕೊಳ್ಳಬೇಕು ಎಂದೆನಿಸುವುದು ಸಹಜ. ಪೂಜೆಗಾಗಿ ದೇವರಿಗೆ ಅರ್ಪಿಸಲು ಬೆಳ್ಳಿ ಹಾಗೂ  ಚಿನ್ನದ ಆಭರಣಗಳನ್ನು ಖರೀದಿಸುವುದು ಈಗಿನ ಕಾಲದ ಸಂಪ್ರದಾಯವಲ್ಲ. ಅದರಲ್ಲಿಯೇ ಮಹಿಳೆಯರಿಗಂತೂ ಚಿನ್ನಾಭರಣ ಅಂದಾಕ್ಷಣ ಎಲ್ಲಿಲ್ಲದ ಸಂತೋಷ. ಹಾಗಾಗಿ ಚಿನ್ನದ ದರ ಎಷ್ಟಿದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಅಭರಣಗಳ ಬೆಲೆ ಎಷ್ಟಿದೆ ಎಂಬ ತಿಳಿಯುವ ಆಸೆ ನಿಮಗಿದ್ದರೆ ಇಂದಿನ ದರ ವಿವರ ಎಷ್ಟಿದೆ? ಯಾವ ಯಾವ ನಗರಗಳಲ್ಲಿ ಯಾವ ಬೆಲೆಯಿದೆ? ಎಂಬುದರ ಮಾಹಿತಿ ಇಲ್ಲಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,580 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,45,800 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನದ ದರ ಏರಿಕೆಯಲ್ಲಿ 1,000 ರೂಪಾಯಿ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 48,630 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,85,300 ರೂಪಾಯಿ ಇದೆ. ಸುಮಾರು 1,000 ರೂಪಾಯಿ ಏರಿಕೆ ಆಗಿದೆ. ಬೆಳ್ಳಿ ದರದಲ್ಲಿಯೂ ಸಹ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 400 ರೂಪಾಯಿ ಏರಿಕೆ ಬಳಿಕ 68,600 ರೂಪಾಯಿ ಏರಿಕೆಯಾಗಿದೆ.

ಕೊಯಮತ್ತೂರು (10 ಗ್ರಾಂ ಚಿನ್ನ ಹಾಗೂ ಕೆಜಿ ಬೆಳ್ಳಿ ಬೆಲೆ)
22 ಕ್ಯಾರೆಟ್ ಚಿನ್ನ ರೂ. 44,580
24 ಕ್ಯಾರೆಟ್ ಚಿನ್ನ ರೂ. 48,630
ಬೆಳ್ಳಿ ದರ: ರೂ. 68,600

ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,200
24 ಕ್ಯಾರೆಟ್ ಚಿನ್ನ ರೂ. 48,220
ಬೆಳ್ಳಿ ದರ: ರೂ. 68,600

ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,430
24 ಕ್ಯಾರೆಟ್ ಚಿನ್ನ ರೂ. 47,430
ಬೆಳ್ಳಿ ದರ: ರೂ. 63,600

ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,430
24 ಕ್ಯಾರೆಟ್ ಚಿನ್ನ ರೂ. 47,430
ಬೆಳ್ಳಿ ದರ: ರೂ. 63,600

ಪುಣೆ
22 ಕ್ಯಾರೆಟ್ ಚಿನ್ನ ರೂ. 45,520
24 ಕ್ಯಾರೆಟ್ ಚಿನ್ನ ರೂ. 48,740
ಬೆಳ್ಳಿ ದರ: ರೂ. 63,600

ಜೈಪುರ
22ಕ್ಯಾರೆಟ್ ಚಿನ್ನ ರೂ. 46,200
24 ಕ್ಯಾರೆಟ್ ಚಿನ್ನ ರೂ. 48,550
ಬೆಳ್ಳಿ ದರ: ರೂ. 63,600

ದೆಹಲಿ
22ಕ್ಯಾರೆಟ್ ಚಿನ್ನ ರೂ. 46,350
24 ಕ್ಯಾರೆಟ್ ಚಿನ್ನ ರೂ. 50,560
ಬೆಳ್ಳಿ ದರ: ರೂ. 63,600

ಇದನ್ನೂ ಓದಿ:

Gold Rate Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿನ ಆಭರಣ ದರ ವಿವರ ಮಾಹಿತಿ ಇಲ್ಲಿದೆ

Gold Rate Today: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

Published On - 8:42 am, Wed, 18 August 21