Grofers: ಬೆಂಗಳೂರು ಸೇರಿದಂತೆ 10 ನಗರಗಳಲ್ಲಿ 10 ನಿಮಿಷದೊಳಗೆ ಗ್ರೋಫರ್ಸ್​ನಿಂದ ಆನ್​ಲೈನ್ ದಿನಸಿ ಡೆಲಿವರಿ

ಗ್ರಾಹಕರ ಮನೆ ಬಾಗಿಲಿಗೆ 10 ನಿಮಿಷದಲ್ಲಿ ದಿನಸಿ ತಲುಪಿಸುವ ಆನ್​ಲೈನ್ ಡೆಲಿವರಿ ಸೇವೆಯನ್ನು 10 ನಗರಗಳಲ್ಲಿ ಆರಂಭಿಸಿರುವುದಾಗಿ ಗ್ರೋಫರ್ಸ್ ಹೇಳಿದೆ.

Grofers: ಬೆಂಗಳೂರು ಸೇರಿದಂತೆ 10 ನಗರಗಳಲ್ಲಿ 10 ನಿಮಿಷದೊಳಗೆ ಗ್ರೋಫರ್ಸ್​ನಿಂದ ಆನ್​ಲೈನ್ ದಿನಸಿ ಡೆಲಿವರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Aug 18, 2021 | 11:52 AM

ನೀವು ಆನ್​ಲೈನ್​ನಲ್ಲಿ ದಿನಸಿ ಆರ್ಡರ್ ಮಾಡಿದರೆ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬಂದಿರುತ್ತದೆ ಎನ್ನುತ್ತಿದೆ ಗ್ರೋಫರ್ಸ್ (Grofers). ಅಂದಹಾಗೆ ಗ್ರೋಫರ್ಸ್ ಎಂಬುದು ಆನ್​ಲೈನ್ ದಿನಸಿ ಡೆಲಿವರಿ ಸೇವೆ ಒದಗಿಸುತ್ತದೆ. 10 ನಗರಗಳಲ್ಲಿ ಈ ಸೇವೆಯನ್ನು ಆರಂಭಿಸಿದ್ದು, 10 ನಿಮಿಷದಲ್ಲಿ ಮನೆ ಬಾಗಿಲಿಗೆ ಆನ್​ಲೈನ್ ಡೆಲಿವರಿ ಮಾಡುವುದಾಗಿ ಹಾಗೂ ಭಾರತೀಯರಿಗೆ ಈ ಹಿಂದೆಂದೂ ದಕ್ಕದ ಅನುಭವ ಇದಾಗಿದೆ ಎಂದೂ ಹೇಳಿಕೊಂಡಿದೆ. ದಿನಬಳಕೆಯ 7000ಕ್ಕೂ ಹೆಚ್ಚು ವಸ್ತುಗಳನ್ನು ಗ್ರೋಫರ್ಸ್​ನಲ್ಲಿ ಗ್ರಾಹಕರು ಆರ್ಡರ್ ಮಾಡಬಹುದು. ಆದರೆ ಆರಂಭದಲ್ಲೇ ಹೇಳಿದಂತೆ ಇದು ಹತ್ತು ನಗರಗಳಿಗೆ ಸೀಮಿತ. ದೆಹಲಿ, ಗುರುಗ್ರಾಮ್, ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಜೈಪುರ್, ಗಾಜಿಯಾಬಾದ್, ನೋಯ್ಡಾ ಹಾಗೂ ಲಖನೌದಲ್ಲಿ ಈ ಸೇವೆಯು ದೊರೆಯಲಿದೆ.

“ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ದಿನಸಿ ಡೆಲಿವರ್ ಮಾಡುವ ಭರವಸೆಯೊಂದಿಗೆ ನಮ್ಮ ಸೇವೆಯನ್ನು 10ನೇ ನಗರದಲ್ಲಿ ಇಂದು ಆರಂಭಿಸಿದೆವು. ಸದ್ಯಕ್ಕೆ ನಮ್ಮ ಸರಾಸರಿ ಡೆಲಿವರಿ ಸಮಯವು ಹದಿನೈದು ನಿಮಿಷಗಳು ಆಜೂಬಾಜಿನಲ್ಲಿ ಹೊಯ್ದಾಡುತ್ತಿದೆ. ನಮ್ಮ ದೃಷ್ಟಿಕೋನದ ಪ್ರಕಾರ, 10 ನಿಮಿಷದ ಒಳಗಾಗಿ ಭಾರತದ ಪ್ರತಿ ಗ್ರಾಹಕರಿಗೂ ತಲುಪಿಸುವಂತಾಗಬೇಕು,” ಎಂದು ಬ್ಲಾಗ್​ಸ್ಪಾಟ್​ನಲ್ಲಿ ಮಂಗಳವಾರ ಈ ಹೈಪರ್​ಲೋಕಲ್ ಸ್ಟಾರ್ಟ್ ಅಪ್ ತಿಳಿಸಿದೆ. ಮುಂದಿನ 45 ದಿನಗಳೊಳಗಾಗಿ ಬಹುಪಾಲು ಗ್ರಾಹಕರಿಗೆ 10 ನಿಮಿಷಗಳ ಒಳಗಾಗಿ ಡೆಲಿವರಿ ನೀಡುವ ವಿಶ್ವಾಸ ಗ್ರೋಫರ್ಸ್​ಗೆ ಇದೆ.

ಗ್ರೋಫರ್ಸ್ ಸ್ಥಾಪಕ ಹಾಗೂ ಸಿಇಒ ಅಲ್ಬಿಂದರ್ ದಿಂಡ್ಸಾ ಕೂಡ ಈ ಸೇವೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಇ-ಕಾಮರ್ಸ್​ ವಹಿವಾಟಿನಲ್ಲಿ ಆನ್​ಲೈನ್​ ದಿನಸಿ ಕೂಡ ಒಂದು. ಭಾರತದಲ್ಲಿ ಡಿಜಿಟಲ್ ಬಳಕೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಇನ್ನಷ್ಟು ಬೆಳವಣಿಗೆ ಕಾಣುತ್ತಿದೆ. ಇನ್ನು ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಬಳಿಕ ಇ-ಕಾಮರ್ಸ್ ಬಳಸುವಂಥ ಗ್ರಾಹಕರ ಸಂಖ್ಯೆಯಲ್ಲಿ ಮತ್ತೂ ಏರಿಕೆಯಾಗಿದೆ. ಮನೆಯಲ್ಲೇ ಕುಳಿತು ಅನುಕೂಲವಾಗಿ ಹಾಗೂ ಸುರಕ್ಷಿತವಾಗಿ ಶಾಪಿಂಗ್ ಮಾಡಬಹುದು ಎಂಬ ಕಾರಣಕ್ಕೆ ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಗ್ರೋಫರ್ಸ್​ನಲ್ಲಿ ಶೇ 9.3ರಷ್ಟು ಷೇರಿನ ಪಾಲು ಖರೀದಿ ಮಾಡುವುದಕ್ಕೆ ಕಳೆದ ವಾರವಷ್ಟೇ ಝೊಮ್ಯಾಟೋಗೆ ಸಿಸಿಐ (ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ)ದಿಂದ ಅನುಮತಿ ನೀಡಿದೆ. ಕಳೆದ ತಿಂಗಳು ಝೊಮ್ಯಾಟೋದಿಂದ ಗ್ರೋಫರ್ಸ್​ನಲ್ಲಿ 745 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಲಾಗಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ನೀವು ಆರ್ಡರ್ ಮಾಡುವ ಪದಾರ್ಥಗಳನ್ನು ಜಿಪ್ ಎಲೆಕ್ಟ್ರಿಕ್ ಡೆಲಿವರಿ ಬಾಯ್​ಗಳು ಮನೆಗೆ ತಂದರೆ ಆಶ್ಚರ್ಯಪಡಬೇಡಿ!

(Grofers Announced Online Grocery Delivery To Customer Door Step Within 10 Minutes In 10 Cities)

Published On - 11:50 am, Wed, 18 August 21

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್