Gold Price Today: ಇಂದು ಮತ್ತೆ ಚಿನ್ನದ ಬೆಲೆ 820 ರೂ. ಕುಸಿತ; ಬೆಳ್ಳಿ ದರ ಕೊಂಚ ಏರಿಕೆ

| Updated By: ಸುಷ್ಮಾ ಚಕ್ರೆ

Updated on: Jul 08, 2022 | 6:03 AM

Silver Price Today: ಬೆಳ್ಳಿ ಬೆಲೆ ಇಂದು 100 ರೂ. ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ದಾಖಲೆಯ ಮಟ್ಟದಲ್ಲಿ ಇಳಿಕೆಯಾಗಿದೆ.

Gold Price Today: ಇಂದು ಮತ್ತೆ ಚಿನ್ನದ ಬೆಲೆ 820 ರೂ. ಕುಸಿತ; ಬೆಳ್ಳಿ ದರ ಕೊಂಚ ಏರಿಕೆ
ಚಿನ್ನದ ಬೆಲೆ
Follow us on

ಬೆಂಗಳೂರು: ಭಾರತದಲ್ಲಿ ನಿನ್ನೆ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ದಾಖಲೆಯ ಕುಸಿತ ಕಂಡಿದೆ. ಇಂದು ಒಂದೇ ದಿನದಲ್ಲಿ ಚಿನ್ನದ ಬೆಲೆ (Gold Rate) ಬರೋಬ್ಬರಿ 820 ರೂ. ಕಡಿಮೆಯಾಗಿದೆ. ಬೆಳ್ಳಿಯ ಬೆಲೆ (Silver Price) ನಿನ್ನೆ 2,000 ರೂ. ಇಳಿಕೆಯಾಗಿತ್ತು. ಆದರೆ, ಇಂದು 100 ರೂ. ಏರಿಕೆ ಕಂಡಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ದಾಖಲೆಯ ಮಟ್ಟದಲ್ಲಿ ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,600 ರೂ. ಇದ್ದುದು 46,850 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,930 ರೂ. ಇದ್ದುದು 51,110 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,720 ರೂ. ಮುಂಬೈ- 46,850 ರೂ, ದೆಹಲಿ- 46,850 ರೂ, ಕೊಲ್ಕತ್ತಾ- 46,850 ರೂ, ಬೆಂಗಳೂರು- 46,880 ರೂ, ಹೈದರಾಬಾದ್- 46,850 ರೂ, ಕೇರಳ- 46,850 ರೂ, ಪುಣೆ- 46,870 ರೂ, ಮಂಗಳೂರು- 46,880 ರೂ, ಮೈಸೂರು- 46,880 ರೂ. ಇದೆ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 200 ರೂ. ಕುಸಿತ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 50,970 ರೂ, ಮುಂಬೈ- 51,110 ರೂ, ದೆಹಲಿ- 51,110 ರೂ, ಕೊಲ್ಕತ್ತಾ- 51,110 ರೂ, ಬೆಂಗಳೂರು- 51,150 ರೂ, ಹೈದರಾಬಾದ್- 51,110 ರೂ, ಕೇರಳ- 51,110 ರೂ, ಪುಣೆ- 51,140 ರೂ, ಮಂಗಳೂರು- 51,150 ರೂ, ಮೈಸೂರು- 51,150 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು ಕೊಂಚ ಏರಿಕೆಯಾಗಿದೆ. ಇಂದು ಬೆಳ್ಳಿ ಬೆಲೆ 100 ರೂ. ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 56,900 ರೂ. ಇದ್ದುದು ಇಂದು 57,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,400 ರೂ, ಮೈಸೂರು- 62,400 ರೂ., ಮಂಗಳೂರು- 62,400 ರೂ., ಮುಂಬೈ- 57,000 ರೂ, ಚೆನ್ನೈ- 62,400 ರೂ, ದೆಹಲಿ- 57,000 ರೂ, ಹೈದರಾಬಾದ್- 62,400 ರೂ, ಕೊಲ್ಕತ್ತಾ- 57,000 ರೂ. ಆಗಿದೆ.