Gold Price Today: ಚಿನ್ನದ ಬೆಲೆ ಇಳಿಕೆ; ಒಂದೇ ದಿನದಲ್ಲಿ ಬೆಳ್ಳಿ ದರ ಬರೋಬ್ಬರಿ 3,200 ರೂ. ಕುಸಿತ

Silver Price Today: 2 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಬೆಳ್ಳಿ ಬೆಲೆ ಇಂದು ಬರೋಬ್ಬರಿ 3,200 ರೂ. ಕುಸಿತವಾಗಿದೆ. 2 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 54,000 ರೂ. ಇದ್ದುದು ಇಂದು 50,800 ರೂ. ಆಗಿದೆ.

Gold Price Today: ಚಿನ್ನದ ಬೆಲೆ ಇಳಿಕೆ; ಒಂದೇ ದಿನದಲ್ಲಿ ಬೆಳ್ಳಿ ದರ ಬರೋಬ್ಬರಿ 3,200 ರೂ. ಕುಸಿತ
ಚಿನ್ನದ ಬೆಲೆ
Image Credit source: Indian Express
Edited By:

Updated on: Sep 01, 2022 | 6:02 AM

Gold Price on 1st September 2022 | ಬೆಂಗಳೂರು: ಭಾರತದಲ್ಲಿ ನಿನ್ನೆ ಹೆಚ್ಚಳವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಕುಸಿತವಾಗಿದೆ. ಚಿನ್ನದ ದರ 270 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು ಬರೋಬ್ಬರಿ 3,200 ರೂ. ಕುಸಿತವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು 270 ರೂ. ಇಳಿಕೆಯಾಗಿದೆ. 2 ದಿನಗಳಿಂದ 22 ಕ್ಯಾರೆಟ್ ಚಿನ್ನದ ಬೆಲೆ 47,250 ರೂ. ಇದ್ದುದು 47,000 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,540 ರೂ. ಇದ್ದುದು 51,270 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,540 ರೂ. ಮುಂಬೈ- 47,000 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,000 ರೂ, ಬೆಂಗಳೂರು- 47,050 ರೂ, ಹೈದರಾಬಾದ್- 47,000 ರೂ, ಕೇರಳ- 47,000 ರೂ, ಪುಣೆ- 47,030 ರೂ, ಮಂಗಳೂರು- 47,050 ರೂ, ಮೈಸೂರು- 47,050 ರೂ. ಇದೆ.

ಇದನ್ನೂ ಓದಿ: Gold Price Today: ಹಬ್ಬಕ್ಕೆ ಸಿಹಿ ಸುದ್ದಿ; ಚಿನ್ನದ ಬೆಲೆ ಮತ್ತೆ ಇಳಿಕೆ, ಬೆಳ್ಳಿ ದರ 800 ರೂ. ಕುಸಿತ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,860 ರೂ, ಮುಂಬೈ- 51,270 ರೂ, ದೆಹಲಿ- 51,440 ರೂ, ಕೊಲ್ಕತ್ತಾ- 51,270 ರೂ, ಬೆಂಗಳೂರು- 51,320 ರೂ, ಹೈದರಾಬಾದ್- 51,270 ರೂ, ಕೇರಳ- 51,270 ರೂ, ಪುಣೆ- 51,300 ರೂ, ಮಂಗಳೂರು- 51,320 ರೂ, ಮೈಸೂರು- 51,320 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
2 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಬೆಳ್ಳಿ ಬೆಲೆ ಇಂದು ಬರೋಬ್ಬರಿ 3,200 ರೂ. ಕುಸಿತವಾಗಿದೆ. 2 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 54,000 ರೂ. ಇದ್ದುದು ಇಂದು 50,800 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 50,800 ರೂ, ಮೈಸೂರು- 50,800 ರೂ., ಮಂಗಳೂರು- 50,800 ರೂ., ಮುಂಬೈ- 50,800 ರೂ, ಚೆನ್ನೈ- 60,000 ರೂ, ದೆಹಲಿ- 50,800 ರೂ, ಹೈದರಾಬಾದ್- 60,000 ರೂ, ಕೊಲ್ಕತ್ತಾ- 50,800 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us