Gold Price Today: ಇಂದು ಕೂಡ ಚಿನ್ನದ ಬೆಲೆ ಏರಿಕೆ; ಭಾರತದಲ್ಲಿ ಬೆಳ್ಳಿ ದರ 400 ರೂ. ಹೆಚ್ಚಳ

Silver Price Today: ಬೆಳ್ಳಿ ಬೆಲೆ ಇಂದು 400 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 55,000 ರೂ. ಇದ್ದುದು ಇಂದು 55,400 ರೂ. ಆಗಿದೆ.

Gold Price Today: ಇಂದು ಕೂಡ ಚಿನ್ನದ ಬೆಲೆ ಏರಿಕೆ; ಭಾರತದಲ್ಲಿ ಬೆಳ್ಳಿ ದರ 400 ರೂ. ಹೆಚ್ಚಳ
ಚಿನ್ನದ ಬೆಲೆ
Image Credit source: News18
Edited By:

Updated on: Aug 26, 2022 | 6:15 AM

Gold Price on 26th August 2022 | ಬೆಂಗಳೂರು: ಭಾರತದಲ್ಲಿ ನಿನ್ನೆ ಹೆಚ್ಚಳವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಏರಿಕೆಯಾಗಿದೆ. ಇಂದು ಬಂಗಾರದ ಬೆಲೆ 270 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 400 ರೂ. ಹೆಚ್ಚಳವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಭಾರೀ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,250 ರೂ. ಇದ್ದುದು 47,500 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,550 ರೂ. ಇದ್ದುದು 51,820 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,300 ರೂ. ಮುಂಬೈ- 47,500 ರೂ, ದೆಹಲಿ- 47,650 ರೂ, ಕೊಲ್ಕತ್ತಾ- 47,500 ರೂ, ಬೆಂಗಳೂರು- 47,550 ರೂ, ಹೈದರಾಬಾದ್- 47,500 ರೂ, ಕೇರಳ- 47,500 ರೂ, ಪುಣೆ- 47,530 ರೂ, ಮಂಗಳೂರು- 47,550 ರೂ, ಮೈಸೂರು- 47,550 ರೂ. ಇದೆ.

ಇದನ್ನೂ ಓದಿ: Gold Price Today: ಭಾರತದಲ್ಲಿ ಬೆಳ್ಳಿ ದರ 900 ರೂ. ಕುಸಿತ; ಇಂದಿನ ಚಿನ್ನದ ಬೆಲೆ ಹೀಗಿದೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,690 ರೂ, ಮುಂಬೈ- 51,820 ರೂ, ದೆಹಲಿ- 51,980 ರೂ, ಕೊಲ್ಕತ್ತಾ- 51,820 ರೂ, ಬೆಂಗಳೂರು- 51,870 ರೂ, ಹೈದರಾಬಾದ್- 51,820 ರೂ, ಕೇರಳ- 51,820 ರೂ, ಪುಣೆ- 51,850 ರೂ, ಮಂಗಳೂರು- 51,870 ರೂ, ಮೈಸೂರು- 51,870 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 400 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 55,000 ರೂ. ಇದ್ದುದು ಇಂದು 55,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,100 ರೂ, ಮೈಸೂರು- 61,100 ರೂ., ಮಂಗಳೂರು- 61,100 ರೂ., ಮುಂಬೈ- 55,400 ರೂ, ಚೆನ್ನೈ- 61,100 ರೂ, ದೆಹಲಿ- 55,400 ರೂ, ಹೈದರಾಬಾದ್- 61,100 ರೂ, ಕೊಲ್ಕತ್ತಾ- 55,400 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us