Gold Price Today: ಚಿನ್ನದ ಬೆಲೆ ಇಂದು ಮತ್ತೆ ಏರಿಕೆ; ಬೆಳ್ಳಿ ದರ 200 ರೂ. ಹೆಚ್ಚಳ

Silver Price Today: ಬೆಳ್ಳಿ ಬೆಲೆ ಇಂದು 200 ರೂ. ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ.

Gold Price Today: ಚಿನ್ನದ ಬೆಲೆ ಇಂದು ಮತ್ತೆ ಏರಿಕೆ; ಬೆಳ್ಳಿ ದರ 200 ರೂ. ಹೆಚ್ಚಳ
ಸಾಂದರ್ಭಿಕ ಚಿತ್ರ
Edited By:

Updated on: Aug 05, 2022 | 9:11 AM

Gold Price on 5 August 2022 | ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ (Gold Rate) ಕುಸಿತವಾಗಿತ್ತು. ಆದರೆ, ಇಂದು ಚಿನ್ನದ ದರ 380 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 200 ರೂ. ಹೆಚ್ಚಳವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,150 ರೂ. ಇದ್ದುದು 47,500 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,440 ರೂ. ಇದ್ದುದು 51,820 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,250 ರೂ. ಮುಂಬೈ- 47,500 ರೂ, ದೆಹಲಿ- 47,650 ರೂ, ಕೊಲ್ಕತ್ತಾ- 47,500 ರೂ, ಬೆಂಗಳೂರು- 47,550 ರೂ, ಹೈದರಾಬಾದ್- 47,500 ರೂ, ಕೇರಳ- 47,500 ರೂ, ಪುಣೆ- 47,530 ರೂ, ಮಂಗಳೂರು- 47,550 ರೂ, ಮೈಸೂರು- 47,550 ರೂ. ಇದೆ.

ಇದನ್ನೂ ಓದಿ: Gold Price Today: ಬಂಗಾರ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ; 3 ದಿನಗಳಿಂದ ಬದಲಾಗಿಲ್ಲ ಚಿನ್ನದ ಬೆಲೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,640 ರೂ, ಮುಂಬೈ- 51,820 ರೂ, ದೆಹಲಿ- 51,980 ರೂ, ಕೊಲ್ಕತ್ತಾ- 51,820 ರೂ, ಬೆಂಗಳೂರು- 51,880 ರೂ, ಹೈದರಾಬಾದ್- 51,820 ರೂ, ಕೇರಳ- 51,820 ರೂ, ಪುಣೆ- 51,580 ರೂ, ಮಂಗಳೂರು- 51,880 ರೂ, ಮೈಸೂರು- 51,880 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 200 ರೂ. ಏರಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,200 ರೂ, ಮೈಸೂರು- 63,200 ರೂ., ಮಂಗಳೂರು- 63,200 ರೂ., ಮುಂಬೈ- 57,700 ರೂ, ಚೆನ್ನೈ- 63,200 ರೂ, ದೆಹಲಿ- 57,700 ರೂ, ಹೈದರಾಬಾದ್- 63,200 ರೂ, ಕೊಲ್ಕತ್ತಾ- 57,700 ರೂ. ಆಗಿದೆ.
ಇದನ್ನೂ ಓದಿ:

TV9 Web

TV9 Kannada

Read More
Loading...
Unable to load recommendations.
Follow Us