Gold Price on 4th September 2022 | ಬೆಂಗಳೂರು: ಭಾರತದಲ್ಲಿ 3 ದಿನಗಳಿಂದ ಕುಸಿತವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಏರಿಕೆಯಾಗಿದೆ. ಇಂದು ಚಿನ್ನದ ದರ 270 ರೂ. ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 200 ರೂ. ಏರಿಕೆಯಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು 270 ರೂ. ಏರಿಕೆಯಾಗಿದೆ. 3 ದಿನಗಳಿಂದ 22 ಕ್ಯಾರೆಟ್ ಚಿನ್ನದ ಬೆಲೆ 46,400 ರೂ. ಇದ್ದುದು 46,650 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,620 ರೂ. ಇದ್ದುದು 50,890 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,220 ರೂ. ಮುಂಬೈ- 46,650 ರೂ, ದೆಹಲಿ- 46,800 ರೂ, ಕೊಲ್ಕತ್ತಾ- 46,650 ರೂ, ಬೆಂಗಳೂರು- 46,700 ರೂ, ಹೈದರಾಬಾದ್- 46,650 ರೂ, ಕೇರಳ- 46,650 ರೂ, ಪುಣೆ- 46,680 ರೂ, ಮಂಗಳೂರು- 46,700 ರೂ, ಮೈಸೂರು- 46,700 ರೂ. ಇದೆ.
ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಇಳಿಕೆ; ಒಂದೇ ದಿನದಲ್ಲಿ ಬೆಳ್ಳಿ ದರ ಬರೋಬ್ಬರಿ 3,200 ರೂ. ಕುಸಿತ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,510 ರೂ, ಮುಂಬೈ- 50,890 ರೂ, ದೆಹಲಿ- 51,050 ರೂ, ಕೊಲ್ಕತ್ತಾ- 50,890 ರೂ, ಬೆಂಗಳೂರು- 50,940 ರೂ, ಹೈದರಾಬಾದ್- 50,890 ರೂ, ಕೇರಳ- 50,890 ರೂ, ಪುಣೆ- 50,920 ರೂ, ಮಂಗಳೂರು- 50,940 ರೂ, ಮೈಸೂರು- 50,940 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 200 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 52,300 ರೂ. ಇದ್ದುದು ಇಂದು 52,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 58,200 ರೂ, ಮೈಸೂರು- 58,200 ರೂ., ಮಂಗಳೂರು- 58,200 ರೂ., ಮುಂಬೈ- 52,500 ರೂ, ಚೆನ್ನೈ- 58,200 ರೂ, ದೆಹಲಿ- 52,500 ರೂ, ಹೈದರಾಬಾದ್- 58,200 ರೂ, ಕೊಲ್ಕತ್ತಾ- 52,500 ರೂ. ಆಗಿದೆ.