Gold Price Today: ಬಂಗಾರ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ; 3 ದಿನಗಳಿಂದ ಬದಲಾಗಿಲ್ಲ ಚಿನ್ನದ ಬೆಲೆ

Silver Price Today: ಬೆಳ್ಳಿ ಬೆಲೆ 2 ದಿನಗಳ ಹಿಂದೆ 400 ರೂ. ಹೆಚ್ಚಳವಾಗಿತ್ತು. ಆದರೆ, ಇಂದು ಬೆಳ್ಳಿ ದರದಲ್ಲಿ ಯಾವುದೇ ಏರಿಳಿತವಾಗಿಲ್ಲ.

Gold Price Today: ಬಂಗಾರ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ; 3 ದಿನಗಳಿಂದ ಬದಲಾಗಿಲ್ಲ ಚಿನ್ನದ ಬೆಲೆ
ಚಿನ್ನದ ಬೆಲೆ
Edited By:

Updated on: Aug 01, 2022 | 7:58 AM

Gold Price on 1st August 2022 | ಬೆಂಗಳೂರು: ಭಾರತದಲ್ಲಿ ಇದ್ದಕ್ಕಿದ್ದಂತೆ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold Rate) ಕಳೆದ 3 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಳ್ಳಿಯ ಬೆಲೆ (Silver Price) ಇಂದು ಯಥಾಸ್ಥಿತಿಯಲ್ಲಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಕೂಡ ಏರಿಳಿತವಾಗಿಲ್ಲ. 3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,100 ರೂ. ಇದ್ದುದು 47,200 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,380 ರೂ. ಇದ್ದುದು 51,490 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,150 ರೂ. ಮುಂಬೈ- 47,200 ರೂ, ದೆಹಲಿ- 47,350 ರೂ, ಕೊಲ್ಕತ್ತಾ- 47,200 ರೂ, ಬೆಂಗಳೂರು- 47,250 ರೂ, ಹೈದರಾಬಾದ್- 47,200 ರೂ, ಕೇರಳ- 47,200 ರೂ, ಪುಣೆ- 47,230 ರೂ, ಮಂಗಳೂರು- 47,250 ರೂ, ಮೈಸೂರು- 47,250 ರೂ. ಇದೆ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಇಂದು ಭಾರೀ ಏರಿಕೆ; ಬೆಳ್ಳಿ ದರ ಒಂದೇ ದಿನದಲ್ಲಿ 1,900 ರೂ. ಹೆಚ್ಚಳ 

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,530 ರೂ, ಮುಂಬೈ- 51,490 ರೂ, ದೆಹಲಿ- 51,660 ರೂ, ಕೊಲ್ಕತ್ತಾ- 51,490 ರೂ, ಬೆಂಗಳೂರು- 51,540 ರೂ, ಹೈದರಾಬಾದ್- 51,490 ರೂ, ಕೇರಳ- 51,490 ರೂ, ಪುಣೆ- 51,570 ರೂ, ಮಂಗಳೂರು- 51,540 ರೂ, ಮೈಸೂರು- 51,540 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ 2 ದಿನಗಳ ಹಿಂದೆ 400 ರೂ. ಹೆಚ್ಚಳವಾಗಿತ್ತು. ಆದರೆ, ಇಂದು ಬೆಳ್ಳಿ ದರದಲ್ಲಿ ಯಾವುದೇ ಏರಿಳಿತವಾಗಿಲ್ಲ. 2 ದಿನಗಳ ಹಿಂದೆ 1 ಕೆಜಿ ಬೆಳ್ಳಿಯ ದರ 58,000 ರೂ. ಇದ್ದುದು ಇಂದು 58,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,700 ರೂ, ಮೈಸೂರು- 63,700 ರೂ., ಮಂಗಳೂರು- 63,700 ರೂ., ಮುಂಬೈ- 58,400 ರೂ, ಚೆನ್ನೈ- 63,700 ರೂ, ದೆಹಲಿ- 58,400 ರೂ, ಹೈದರಾಬಾದ್- 63,700 ರೂ, ಕೊಲ್ಕತ್ತಾ- 58,400 ರೂ. ಆಗಿದೆ.

TV9 Web

TV9 Kannada

Read More
Loading...
Unable to load recommendations.
Follow Us