Gold Price Today: ಸತತ 2ನೇ ದಿನವೂ ಚಿನ್ನದ ಬೆಲೆ ಕುಸಿತ; ಬೆಳ್ಳಿ ದರ ಕೊಂಚ ಏರಿಕೆ

Silver Price Today: ಬೆಳ್ಳಿ ಬೆಲೆ ಇಂದು 100 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 54,500 ರೂ. ಇದ್ದುದು ಇಂದು 54,600 ರೂ. ಆಗಿದೆ.

Gold Price Today: ಸತತ 2ನೇ ದಿನವೂ ಚಿನ್ನದ ಬೆಲೆ ಕುಸಿತ; ಬೆಳ್ಳಿ ದರ ಕೊಂಚ ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 28, 2022 | 5:58 AM

Gold Price on 28 July 2022 | ಬೆಂಗಳೂರು: ಭಾರತದಲ್ಲಿ ನಿನ್ನೆಯಿಂದ ಚಿನ್ನದ ಬೆಲೆ (Gold Rate) ಕುಸಿತವಾಗುತ್ತಿದೆ. ಇಂದು ಮತ್ತೆ ಬಂಗಾರದ ದರ 130 ರೂ. ಕುಸಿತವಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 100 ರೂ. ಏರಿಕೆಯಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,580 ರೂ. ಇದ್ದುದು 46,450 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,780 ರೂ. ಇದ್ದುದು 50,680 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,350 ರೂ. ಮುಂಬೈ- 46,450 ರೂ, ದೆಹಲಿ- 46,450 ರೂ, ಕೊಲ್ಕತ್ತಾ- 46,450 ರೂ, ಬೆಂಗಳೂರು- 46,450 ರೂ, ಹೈದರಾಬಾದ್- 46,450 ರೂ, ಕೇರಳ- 46,450 ರೂ, ಪುಣೆ- 46,460 ರೂ, ಮಂಗಳೂರು- 46,450 ರೂ, ಮೈಸೂರು- 46,450 ರೂ. ಇದೆ.

ಇದನ್ನೂ ಓದಿ: Gold Price Today: ಚಿನ್ನ ಖರೀದಿಗೆ ಇದು ಒಳ್ಳೆ ಸಮಯ; ಬೆಳ್ಳಿ ಬೆಲೆ 200 ರೂ. ಕುಸಿತ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 51,660 ರೂ, ಮುಂಬೈ- 50,680 ರೂ, ದೆಹಲಿ- 50,680 ರೂ, ಕೊಲ್ಕತ್ತಾ- 50,680 ರೂ, ಬೆಂಗಳೂರು- 50,680 ರೂ, ಹೈದರಾಬಾದ್- 50,680 ರೂ, ಕೇರಳ- 50,680 ರೂ, ಪುಣೆ- 50,690 ರೂ, ಮಂಗಳೂರು- 50,680 ರೂ, ಮೈಸೂರು- 50,680 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆ ಇಂದು 100 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 54,500 ರೂ. ಇದ್ದುದು ಇಂದು 54,600 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,000 ರೂ, ಮೈಸೂರು- 60,000 ರೂ., ಮಂಗಳೂರು- 60,000 ರೂ., ಮುಂಬೈ- 54,600 ರೂ, ಚೆನ್ನೈ- 60,000 ರೂ, ದೆಹಲಿ- 54,600 ರೂ, ಹೈದರಾಬಾದ್- 60,000 ರೂ, ಕೊಲ್ಕತ್ತಾ- 54,600 ರೂ. ಆಗಿದೆ.