Bank Holidays in August : ಆಗಸ್ಟ್‌ನಲ್ಲಿ 18 ದಿನ ಬ್ಯಾಂಕ್ಗಳಿಗೆ ರಜೆ, ಇಲ್ಲಿದೆ ಸಂಪೂರ್ಣ ಮಾಹಿತಿ
ಆಗಸ್ಟ್ ತಿಂಗಳು ಅರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಆಗಸ್ಟ್ ತಿಂಗಳಲ್ಲಿ 18 ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ.
ಆಗಸ್ಟ್ ತಿಂಗಳು ಅರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಆಗಸ್ಟ್ ತಿಂಗಳಲ್ಲಿ 18 ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ. ಜುಲೈನಲ್ಲಿ 14 ಬ್ಯಾಂಕ್ ರಜೆಗಳಿದ್ದರೆ, ಆಗಸ್ಟ್‌ನಲ್ಲಿ 18 ಬ್ಯಾಂಕ್ ರಜೆಗಳಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಿದ್ಧಪಡಿಸಿದ ಕ್ಯಾಲೆಂಡರ್ ಪ್ರಕಾರ ಆಗಸ್ಟ್‌ನಲ್ಲಿ 18 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರಲಿದೆ.
ಅನೇಕ ಬ್ಯಾಂಕ್ ರಜಾದಿನಗಳು ಪ್ರಾದೇಶಿಕವಾಗಿರುತ್ತವೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಮತ್ತು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿರಬಹುದು ಎಂಬುದನ್ನು ಗಮನಿಸಬೇಕು. ಮೊದಲೇ ಹೇಳಿದಂತೆ ಆಗಸ್ಟ್‌ನಲ್ಲಿ 18ದಿನ ಬ್ಯಾಂಕ್ಗಳಿಗೆ ರಜೆಗಳಿವೆ, ಅದರಲ್ಲಿ ಆರು ವಾರಾಂತ್ಯದ ರಜೆಗಳು. 13 ಪ್ರಾದೇಶಿಕ ರಜಾದಿನಗಳಿವೆ.
ಆಗಸ್ಟ್ 1: ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ) ಆಗಸ್ಟ್ 8: ಮೊಹರಂ (ಅಶೋರಾ) – ಜಮ್ಮು, ಶ್ರೀನಗರ
ಆಗಸ್ಟ್ 9: ಮುಹರಂ (ಅಶುರಾ) – ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಹೈದರಾಬಾದ್, ಜೈಪುರ, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ರಾಯ್ಪುರ್ ಮತ್ತು ರಾಂಚಿ
ಆಗಸ್ಟ್ 11: ರಕ್ಷಾ ಬಂಧನ – ಅಹಮದಾಬಾದ್, ಭೋಪಾಲ್, ಡೆಹ್ರಾಡೂನ್, ಜೈಪುರ ಮತ್ತು ಶಿಮ್ಲಾ
ಆಗಸ್ಟ್ 12: ರಕ್ಷಾ ಬಂಧನ – ಕಾನ್ಪುರ, ಮತ್ತು ಲಕ್ನೋ
ಆಗಸ್ಟ್ 13: ದೇಶಪ್ರೇಮಿಗಳ ದಿನ – ಇಂಫಾಲ್
ಆಗಸ್ಟ್ 15: ಸ್ವಾತಂತ್ರ್ಯ ದಿನ – ಭಾರತದಾದ್ಯಂತ
ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಶಾಹೆನ್‌ಶಾಹಿ) – ಬೇಲಾಪುರ್, ಮುಂಬೈ ಮತ್ತು ನಾಗ್ಪುರ
ಆಗಸ್ಟ್ 18: ಜನ್ಮಾಷ್ಟಮಿ – ಭುವನೇಶ್ವರ್, ಡೆಹ್ರಾಡೂನ್, ಕಾನ್ಪುರ್ ಮತ್ತು ಲಕ್ನೋ ಆಗಸ್ಟ್ 19: ಜನ್ಮಾಷ್ಟಮಿ (ಶ್ರಾವಣ ವಧ-8)/ ಕೃಷ್ಣ ಜಯಂತಿ — ಅಹಮದಾಬಾದ್, ಭೋಪಾಲ್, ಚಂಡೀಗಢ, ಚೆನ್ನೈ, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಪಾಟ್ನಾ, ರಾಯಪುರ, ರಾಂಚಿ, ಶಿಲ್ಲಾಂಗ್ ಮತ್ತು ಶಿಮ್ಲಾ
ಆಗಸ್ಟ್ 20: ಶ್ರೀ ಕೃಷ್ಣ ಅಷ್ಟಮಿ – ಹೈದರಾಬಾದ್
ಆಗಸ್ಟ್ 29: ಶ್ರೀಮಂತ ಶಂಕರದೇವನ ತಿಥಿ – ಗುವಾಹಟಿ
ಆಗಸ್ಟ್ 31: ಸಂವತ್ಸರಿ (ಚತುರ್ಥಿ ಪಕ್ಷ)/ಗಣೇಶ ಚತುರ್ಥಿ/ ವರಸಿದ್ಧಿ ವಿನಾಯಕ ವ್ರತ/ ವಿನಾಯಕ ಚತುರ್ಥಿ — ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ ಮತ್ತು ಪಣಜಿ ವಾರಾಂತ್ಯದ ರಜೆಗಳ ಪಟ್ಟಿ ಆಗಸ್ಟ್ 7: ಮೊದಲ ಭಾನುವಾರ
ಆಗಸ್ಟ್ 13: ಎರಡನೇ ಶನಿವಾರ + ದೇಶಪ್ರೇಮಿಗಳ ದಿನ
ಆಗಸ್ಟ್ 14: ಎರಡನೇ ಭಾನುವಾರ
ಆಗಸ್ಟ್ 21: ಮೂರನೇ ಭಾನುವಾರ
ಆಗಸ್ಟ್ 27: ನಾಲ್ಕನೇ ಶನಿವಾರ
ಆಗಸ್ಟ್ 28: ನಾಲ್ಕನೇ ಭಾನುವಾರ