AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays in August: ಆಗಸ್ಟ್​ ತಿಂಗಳಲ್ಲಿ 13 ದಿನ ಬ್ಯಾಂಕ್​ಗಳಿಗೆ ರಜೆ; ಪೂರ್ತಿ ಪಟ್ಟಿ ಇಲ್ಲಿದೆ

ಬ್ಯಾಂಕ್‌ಗಳು ಆಗಸ್ಟ್‌ನಲ್ಲಿ ಅರ್ಧದಷ್ಟು ತಿಂಗಳು ಕಾರ್ಯನಿರ್ವಹಿಸುವುದಿಲ್ಲವಾದ್ದರಿಂದ ಅನಾನುಕೂಲತೆಯನ್ನು ತಪ್ಪಿಸಲು ಮೊದಲೇ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸವನ್ನು ಮಾಡಿಕೊಳ್ಳುವುದು ಉತ್ತಮ.

Bank Holidays in August: ಆಗಸ್ಟ್​ ತಿಂಗಳಲ್ಲಿ 13 ದಿನ ಬ್ಯಾಂಕ್​ಗಳಿಗೆ ರಜೆ; ಪೂರ್ತಿ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: NDTV
TV9 Web
| Updated By: ಸುಷ್ಮಾ ಚಕ್ರೆ|

Updated on: Jul 23, 2022 | 9:43 AM

Share

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐ ಕ್ಯಾಲೆಂಡರ್ ಪ್ರಕಾರ, ಆಗಸ್ಟ್​ (August) ತಿಂಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಗೆಜೆಟ್ ರಜಾದಿನಗಳು, ಶಾಸನಬದ್ಧ ರಜಾದಿನಗಳು ಮತ್ತು ಭಾನುವಾರ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ.

ಈ ರಜಾದಿನಗಳನ್ನು ಹೊರತುಪಡಿಸಿ, ಬೇರೆ ಬೇರೆ ರಾಜ್ಯಗಳಲ್ಲಿ ಆಚರಿಸಲು ಹಲವಾರು ಪ್ರಾದೇಶಿಕ ಹಬ್ಬಗಳಿವೆ. ಅಂತಹ ಸಂದರ್ಭಗಳಲ್ಲಿ ವಿವಿಧ ರಾಜ್ಯಗಳಲ್ಲಿನ ಬ್ಯಾಂಕ್‌ಗಳ ಸ್ಥಳೀಯ ಶಾಖೆಗಳು ಸಹ ಮುಚ್ಚಲ್ಪಡುತ್ತವೆ.

ಬ್ಯಾಂಕ್‌ಗಳು ಆಗಸ್ಟ್‌ನಲ್ಲಿ ಅರ್ಧದಷ್ಟು ತಿಂಗಳು ಕಾರ್ಯನಿರ್ವಹಿಸುವುದಿಲ್ಲವಾದ್ದರಿಂದ ಅನಾನುಕೂಲತೆಯನ್ನು ತಪ್ಪಿಸಲು ಮೊದಲೇ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸವನ್ನು ಮಾಡಿಕೊಳ್ಳುವುದು ಉತ್ತಮ. ರಜಾದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.

ಇದನ್ನೂ ಓದಿ: RBI: ಕೊಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್​​ಇಂಡ್ ಬ್ಯಾಂಕ್​ಗೆ ತಲಾ 1 ಕೋಟಿ ರೂಪಾಯಿ ದಂಡ

ಆಗಸ್ಟ್ 2022ರ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ: ಆಗಸ್ಟ್ 1: ಭಾನುವಾರ ಆಗಸ್ಟ್ 8: ಭಾನುವಾರ ಆಗಸ್ಟ್ 14: ಎರಡನೇ ಶನಿವಾರ ಆಗಸ್ಟ್ 15: ಭಾನುವಾರ ಆಗಸ್ಟ್ 22: ಭಾನುವಾರ ಆಗಸ್ಟ್ 28: ನಾಲ್ಕನೇ ಶನಿವಾರ ಆಗಸ್ಟ್ 29: ಭಾನುವಾರ

ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾ ದಿನಗಳು: ಆಗಸ್ಟ್ 1: ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ) ಆಗಸ್ಟ್ 8 ಮತ್ತು 9: ಮೊಹರಂ ಆಗಸ್ಟ್ 11 ಮತ್ತು 12: ರಕ್ಷಾ ಬಂಧನ ಆಗಸ್ಟ್ 13: ದೇಶಪ್ರೇಮಿಗಳ ದಿನ ಆಗಸ್ಟ್ 15: ಸ್ವಾತಂತ್ರ್ಯ ದಿನ ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಶಾಹೆನ್‌ಶಾಹಿ) ಆಗಸ್ಟ್ 18: ಜನ್ಮಾಷ್ಟಮಿ ಆಗಸ್ಟ್ 19: ಶ್ರಾವಣ ವದ/ಕೃಷ್ಣ ಜಯಂತಿ ಆಗಸ್ಟ್ 20: ಶ್ರೀಕೃಷ್ಣ ಅಷ್ಟಮಿ ಆಗಸ್ಟ್ 29: ಶ್ರೀಮಂತ ಶಂಕರದೇವರ ತಿಥಿ ಆಗಸ್ಟ್ 31: ಸಂವತ್ಸರಿ (ಚತುರ್ಥಿ ಪಕ್ಷ)/ಗಣೇಶ ಚತುರ್ಥಿ/ ವರಸಿದ್ಧಿ ವಿನಾಯಕ ವ್ರತ/ ವಿನಾಯಕ ಚತುರ್ಥಿ

ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಮಾತ್ರ ದೇಶಾದ್ಯಂತ ಬ್ಯಾಂಕ್​ಗಳು ಮುಚ್ಚಲ್ಪಡುತ್ತವೆ. ಇತರ ಪ್ರಾದೇಶಿಕ ರಜಾದಿನಗಳಲ್ಲಿ ಗಣೇಶ ಚತುರ್ಥಿ, ಜನ್ಮಾಷ್ಟಮಿ, ಶಾಹೆನ್‌ಶಾಹಿ ಮತ್ತು ಮೊಹರಂ ಸೇರಿವೆ.