AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Gold Smuggling Case: ತನಿಖಾ ಸಂಸ್ಥೆ ನಮ್ಮ ಪರವಾದ ಸಾಕ್ಷ್ಯಗಳನ್ನು ಡಿಲೀಟ್ ಮಾಡಿದೆ; ಸ್ವಪ್ನಾ ಸುರೇಶ್ ಆರೋಪ

2020ರ ಜುಲೈ 5ರಂದು ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯು 14.82 ಕೋಟಿ ರೂ. ಮೌಲ್ಯದ 30 ಕೆಜಿಗಳಷ್ಟು 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಂಡಿದೆ.

Kerala Gold Smuggling Case: ತನಿಖಾ ಸಂಸ್ಥೆ ನಮ್ಮ ಪರವಾದ ಸಾಕ್ಷ್ಯಗಳನ್ನು ಡಿಲೀಟ್ ಮಾಡಿದೆ; ಸ್ವಪ್ನಾ ಸುರೇಶ್ ಆರೋಪ
ಸ್ವಪ್ನಾ ಸುರೇಶ್Image Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 23, 2022 | 8:33 AM

ತಿರುವನಂತಪುರಂ: ಕೇರಳ ಪೊಲೀಸ್ ಇಲಾಖೆಯ ಎನ್‌ಐಎ (NIA) ಅಧಿಕಾರಿಗಳು ತಮ್ಮ ಪರವಾದ ಸಾಕ್ಷಿಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ (Kerala Gold Smuggling Case) ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ (Swapna Suresh) ಆರೋಪಿಸಿದ್ದಾರೆ. ಕೇರಳದ ಮಾಜಿ ಸಚಿವ ಮತ್ತು ಹಾಲಿ ಶಾಸಕ ಕೆ.ಟಿ. ಜಲೀಲ್ ತಮಗೆ ಬೇಕಾದ್ದನ್ನು ಮಾಡಲು ಯಾವ ಹಂತಕ್ಕೆ ಬೇಕಾದರೂ ಇಳಿಯಬಹುದು ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ.

ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿರುವ ಸ್ವಪ್ನಾ ಸುರೇಶ್, ಮಾಜಿ ಸಚಿವ ಕೆಟಿ ಜಲೀಲ್ ನಾವು ಮಾಡಿದ ಯಾವುದೇ ಆರೋಪಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಇದು ಆರೋಪವಲ್ಲ. ಇದಕ್ಕೆ ಸಾಕ್ಷ್ಯಗಳು ಕೂಡ ಇದೆ. ಈ ಮಹಾಶಯರು ಯಾವುದೇ ಮಟ್ಟಕ್ಕೆ ಇಳಿಯಬಹುದು ಎಂಬುದನ್ನು ತೋರಿಸಲು ನಾನು ಇದನ್ನು ಅಫಿಡವಿಟ್‌ನಲ್ಲಿ ಸಾಕ್ಷಿಯಾಗಿ ಸೇರಿಸಿದ್ದೇನೆ. ಅವರು ಮಂತ್ರಿ ಅಥವಾ ಶಾಸಕರಾಗಿದ್ದರೂ ದಿನಪತ್ರಿಕೆ ಅಥವಾ ಪ್ರಕಾಶನ ಸಂಸ್ಥೆ ಮೇಲೆ ಹಾಗೂ ನನ್ನಂತಹ ಮಹಿಳೆಯ ಮೇಲೆ ದಾಳಿ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದ್ದಾರೆ.

“ಇದಕ್ಕೆ ಸಾಕ್ಷಿಗಳೂ ಇವೆ. ನಾನು ಆ ಅವಧಿಯಲ್ಲಿ ಕಾನ್ಸುಲ್ ಜನರಲ್‌ನ ಪಿಎ ಆಗಿ ಕೆಲಸ ಮಾಡಲಿಲ್ಲ. ನೀವು ದಿನಾಂಕವನ್ನು ನೋಡಿದರೆ ನಾನು ಕೇರಳ ಸರ್ಕಾರದ ಅಡಿಯಲ್ಲಿ ಸ್ಪೇಸ್‌ಪಾರ್ಕ್ ಯೋಜನೆಗಾಗಿ ಕೆಲಸ ಮಾಡುತ್ತಿದ್ದೆ ಎಂಬುದು ಗೊತ್ತಾಗುತ್ತದೆ ಎಂದು ಸ್ವಪ್ನಾ ಸುರೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: African Swine Fever: ಕೇರಳದ ವಯನಾಡಿನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; 300 ಹಂದಿಗಳನ್ನು ಕೊಲ್ಲಲು ಆದೇಶ

“ಈ ಬಗ್ಗೆ ನಾನು ಹೆಚ್ಚು ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಏಕೆಂದರೆ ಇದು ನನ್ನ ಪ್ರಕರಣದ ಒಂದು ಭಾಗವಾಗಿದ್ದು, ಸದ್ಯಕ್ಕೆ ಅದರ ತನಿಖೆ ನಡೆಯುತ್ತಿದೆ. ಹಾಗಾಗಿ ನನಗೆ ಉಸಿರುಗಟ್ಟಿದಂತಾಗಿದೆ. ಆ ವ್ಯಕ್ತಿ ನನ್ನ ವಿರುದ್ಧ ನಕಲಿ ಪ್ರಕರಣಗಳನ್ನು ಸೃಷ್ಟಿಸಬಹುದು. ಹೆಚ್ಚಿನ ಸಾಕ್ಷಿಗಳನ್ನು ಈಗಾಗಲೇ ಡಿಲೀಟ್ ಮಾಡಲಾಗಿದ್ದು, ಇನ್ನಷ್ಟು ಸಾಕ್ಷ್ಯಗಳನ್ನು ಕಲೆಹಾಕಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

2020ರ ಜುಲೈ 5ರಂದು ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯು 14.82 ಕೋಟಿ ರೂ. ಮೌಲ್ಯದ 30 ಕೆಜಿಗಳಷ್ಟು 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಂಡಿದೆ. ಅದನ್ನು ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್‌ಗೆ ತಲುಪಿಸಲು ಉದ್ದೇಶಿಸಲಾಗಿತ್ತು.

ಇದನ್ನೂ ಓದಿ: Monkeypox in Kerala: ಕೇರಳದ ಮಲಪ್ಪುರಂನಲ್ಲಿ 3ನೇ ಮಂಕಿಪಾಕ್ಸ್​ ಪ್ರಕರಣ ಪತ್ತೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ. ಶಿವಶಂಕರ್‌ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯ ಆರೋಪಿಗಳಲ್ಲೊಬ್ಬರಾದ ಸ್ವಪ್ನಾ ಸುರೇಶ್‌ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ದೃಢವಾಗಿತ್ತು. ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು.

ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ