AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಎಸ್​​ಆರ್​​ಟಿಸಿಗೆ 300 ಎಲೆಕ್ಟ್ರಾನಿಕ್ ಬಸ್​​ಗಳ ಪೂರೈಕೆಗೆ ಆರ್ಡರ್​​ ಪಡೆದ ಒಲೆಕ್ಟ್ರಾ

ಈ ವಿಷಯದ ಬಗ್ಗೆ ಮಾತನಾಡಿದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಮುಖ್ಯಸ್ಥ ಮತ್ತುಎಂಡಿ ಕೆವಿ ಪ್ರದೀಪ್, ಮತ್ತೊಂದು ಪ್ರತಿಷ್ಠಿತ ಆದೇಶವನ್ನು ಸ್ವೀಕರಿಸಲು ನಾವು ಸಂತೋಷಪಡುತ್ತೇವೆ ಎಂದಿದ್ದಾರೆ.

ಟಿಎಸ್​​ಆರ್​​ಟಿಸಿಗೆ 300 ಎಲೆಕ್ಟ್ರಾನಿಕ್ ಬಸ್​​ಗಳ ಪೂರೈಕೆಗೆ ಆರ್ಡರ್​​ ಪಡೆದ ಒಲೆಕ್ಟ್ರಾ
ಟಿಎಸ್​​ಆರ್​​ಟಿಸಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 22, 2022 | 8:34 PM

Share

ಹೈದರಾಬಾದ್: 300 ಎಲೆಕ್ಟ್ರಿಕ್ ಬಸ್​​ಗಳನ್ನು(Electric bus) ಒದಗಿಸುವಂತೆ ಟಿಎಸ್​​ಆರ್​​ಟಿಸಿಯಿಂದ (TSRTC) ಒಲೆಕ್ಟ್ರಾ ಗ್ರೀನ್ ಟೆಕ್​​ಲಿಮಿಟೆಡ್​​ಗೆ (Olectra Greentech Limited -OLECTRA) ಆರ್ಡರ್ ಸಿಕ್ಕಿದೆ. ಈ ಆರ್ಡರ್ ಮೌಲ್ಯ ಅಂದಾಜು  ₹500 ಕೋಟಿ. ಎಂಇಐಎಲ್ ಗ್ರೂಪ್ ಕಂಪನಿಯಾದ ಎವಿ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ (EVEY) ಟಿಎಸ್​​ಆರ್​ಟಿಸಿಯಿಂದ ಆದೇಶ ಪತ್ರ ಪಡೆದಿದೆ. ಭಾರತ ಸರ್ಕಾರದ FAME-II ಯೋಜನೆ ಅಡಿಯಲ್ಲಿ 300 ಎಲೆಕ್ಟ್ರಿಕ್ ಬಸ್​​ಗಳನ್ನು ಒದಗಿಸುವಂತೆ ಆದೇಶ ಪತ್ರದಲ್ಲಿ ಹೇಳಿದೆ. ಈ ಇ- ಬಸ್​​ಗಳು 12 ವರ್ಷಗಳಿಗಾಗಿ ಒಟ್ಟು ವೆಚ್ಚದ ಒಪ್ಪಂದ ಅಥವಾ OPEX ಮಾದರಿ ಆಧಾರದ ಮೇಲೆ ಒದಗಿಸಲಾಗುವುದು. EVEY ಈ ಬಸ್​​ಗಳನ್ನು ಒಲೆಕ್ಟ್ರಾದಿಂದ ಪಡೆದು ಅದನ್ನು 20 ತಿಂಗಳ ಅವಧಿಯಲ್ಲಿ ವಿತರಿಸಲಾಗುವುದು . ಒಲೆಕ್ಟ್ರಾ ಮತ್ತು ಎವಿ ನಡುವೆ ನಡೆಯುವ ಈ ವ್ಯವಹಾರಗಳನ್ನು ಸಂಬಂಧಿತ ಪಕ್ಷದ ವಹಿವಾಟುಗಳನ್ನು ಪರಿಗಣಿಸಲಾಗುತ್ತಿದ್ದು ಮಾರಾಟಗಾರರು ಮತ್ತು ಖರೀದಿದಾರರು ಸ್ವತಂತ್ರವಾಗಿ ವಹಿವಾಟು ಮಾಡುತ್ತಾರೆ. ಇಲ್ಲಿ ಅವರ ನಡುವೆ ಯಾವುದೇ ಸಂಬಂಧಗಳಿರುವುದಿಲ್ಲ ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಮುಖ್ಯಸ್ಥ ಮತ್ತುಎಂಡಿ ಕೆವಿ ಪ್ರದೀಪ್, ಮತ್ತೊಂದು ಪ್ರತಿಷ್ಠಿತ ಆದೇಶವನ್ನು ಸ್ವೀಕರಿಸಲು ನಾವು ಸಂತೋಷಪಡುತ್ತೇವೆ. ನಮ್ಮ ಅತ್ಯಾಧುನಿಕ ಶೂನ್ಯ ಹೊರಸೂಸುವಿಕೆ ಬಸ್‌ಗಳೊಂದಿಗೆ ತೆಲಂಗಾಣ ನಾಗರಿಕರಿಗೆ ಸೇವೆ ಸಲ್ಲಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಬಸ್‌ಗಳು ಈಗಾಗಲೇ ಕಳೆದ ಮೂರು ವರ್ಷಗಳಿಂದ ಹೈದರಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿವೆ ಮತ್ತು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ನಾವು ನಿಗದಿತ ಸಮಯದಲ್ಲಿ ಬಸ್​​ಗಳನ್ನು ತಲುಪಿಸುತ್ತೇವೆ. ಅತ್ಯುತ್ತಮ ಪ್ರಯಾಣದ ಅನುಭವವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಪ್ರಸ್ತುತ ಎವಿ ಮತ್ತು ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್  ಪುಣೆ, ಮುಂಬೈ, ಗೋವಾ, ಡೆಹ್ರಾಡೂನ್, ಸೂರತ್, ಅಹಮದಾಬಾದ್, ಸಿಲ್ವಸ್ಸಾ ಮತ್ತು ನಾಗಪುರ್ ಸೇರಿದಂತೆ ಹಲವಾರು ರಾಜ್ಯಗಳ ರಸ್ತೆ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್​​ಗಳನ್ನು ನಿರ್ವಹಿಸುತ್ತದೆ.

ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಪ್ರತಿ ಸೀಟ್​​ಗೆ ಎಮರ್ಜೆನ್ಸಿ ಬಟನ್ ಮತ್ತು ಯುಎಸ್‌ಬಿ ಸಾಕೆಟ್‌ಗಳನ್ನು ಅಳವಡಿಸಲಾಗಿದೆ. ಬಸ್‌ನಲ್ಲಿ ಅಳವಡಿಸಲಾಗಿರುವ ಲಿಥಿಯಂ-ಐಯಾನ್ (Li-ion) ಬ್ಯಾಟರಿಯು ಟ್ರಾಫಿಕ್ ಮತ್ತು ಪ್ರಯಾಣಿಕರ ಹೊರೆಯ ಸ್ಥಿತಿಗಳ ಆಧಾರದ ಮೇಲೆ ಒಂದೇ ಚಾರ್ಜ್‌ನಲ್ಲಿ 180 ಕಿ.ಮೀಗಳಷ್ಟು ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ತಾಂತ್ರಿಕವಾಗಿ ಸುಧಾರಿತ ಬಸ್ ರಿಜನರೇಟಿವ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದು ಬ್ರೇಕ್ ಹಾಕಿದಾಗ ಉಂಟಾಗುವ ಚಲನ ಶಕ್ತಿಯನ್ನು (kinetic energy) ಮರುಪಡೆಯಲು ಬಸ್‌ಗೆ ಅನುವು ಮಾಡಿಕೊಡುತ್ತದೆ. ಹೈಪವರ್ ಎಸಿ ಮತ್ತು ಡಿಸಿ ಚಾರ್ಜಿಂಗ್ ವ್ಯವಸ್ಥೆಯು ಬ್ಯಾಟರಿಯನ್ನು 3-4 ಗಂಟೆಗಳಲ್ಲಿ ಸಂಪೂರ್ಣವಾಗಿ ರೀಚಾರ್ಜ್ ಮಾಡಲು ಸಹಾಯ ಮಾಡುತ್ತದೆ.

ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್‌ಗಳು ಭಾರತೀಯ ರಸ್ತೆಗಳಲ್ಲಿ 5 ಕೋಟಿ ಕಿಲೋಮೀಟರ್‌ಗಳನ್ನು ಪೂರ್ಣಗೊಳಿಸಿವೆ. ಇವುಗಳು ಇಲ್ಲಿಯವರೆಗೆ ಸುಮಾರು 7,58,2210 ಕಿಲೋಗ್ರಾಂಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ.

ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್  ಕುರಿತು 2000 ರಲ್ಲಿ ಸ್ಥಾಪಿತವಾದ, ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ MEIL ಗ್ರೂಪ್‌ನ ಭಾಗವಾಗಿದೆ. ಇದು 2015 ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಆರಂಭಿಸಿತು. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ನೆಟ್ವರ್ಕ್ ಗಾಗಿ ಸಿಲಿಕಾನ್ ರಬ್ಬರ್/ಸಂಯೋಜಿತ ಇನ್ಸುಲೇಟರ್ ಗಳ ಅತಿ ದೊಡ್ಡ ತಯಾರಿಕಾ ಸಂಸ್ಥೆಯಾಗಿದೆ.

Published On - 8:33 pm, Fri, 22 July 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!