RBI: ಕೊಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್‌ಗೆ ತಲಾ 1 ಕೋಟಿ ರೂಪಾಯಿ ದಂಡ
ಬ್ಯಾಂಕಿಂಗ್ ನಿಯಮಾವಳಿಗಳನ್ನು ಅನುಸರಿಸದ ಹಿನ್ನೆಲೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಇಂಡಸ್‌ಇಂಡ್ ಬ್ಯಾಂಕ್‌ಗೆ ತಲಾ 1 ಕೋಟಿ ರೂಪಾಯಿ ದಂಡ ವಿಧಿಸಿದೆ.
ಕೆಲವು ನಿಯಂತ್ರಕ (ಆರ್‌ಬಿಐ) ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಖಾಸಗಿ ವಲಯದ ಬ್ಯಾಂಕ್ಗಳಾದ ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್‌ಗೆ ದಂಡ ವಿಧಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೋಮವಾರ ಹೇಳಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆಯ ಪ್ಯಾರಾಗ್ರಾಫ್ 3ರೊಂದಿಗೆ ಓದಿದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 26Aನ ಸಬ್ ಸೆಕ್ಷನ್ (2)ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆರ್‌ಬಿಐ ರೂ. 1.05 ಕೋಟಿ ದಂಡವನ್ನು ವಿಧಿಸಿದೆ. 31 ಮಾರ್ಚ್ 2018 ಮತ್ತು 31 ಮಾರ್ಚ್ 2019ರಂತೆ ಅದರ ಹಣಕಾಸಿನ ಸ್ಥಿತಿಗಳನ್ನು ಉಲ್ಲೇಖಿಸಿ ಬ್ಯಾಂಕ್‌ನ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ ಶಾಸನಬದ್ಧ ತಪಾಸಣೆ ನಡೆಸಲಾಗಿದೆ ಎಂದು ಆರ್‌ಬಿಐ ಹೇಳಿದೆ.
ಆರ್‌ಬಿಐ ಹೇಳಿರುವಂತೆ, ಕೊಟಕ್ ಮಹೀಂದ್ರಾ ಬ್ಯಾಂಕ್ ನಿಗದಿತ ಅವಧಿಯೊಳಗೆ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಅರ್ಹ ಮೊತ್ತವನ್ನು ಕ್ರೆಡಿಟ್ ಮಾಡಲು ವಿಫಲವಾಗಿದೆ; ಅನಧಿಕೃತ ಎಲೆಕ್ಟ್ರಾನಿಕ್ ವಹಿವಾಟುಗಳಲ್ಲಿ ಒಳಗೊಂಡಿರುವ ಮೊತ್ತವನ್ನು ಅಧಿಸೂಚನೆಯ ದಿನಾಂಕದಿಂದ 10 ಕೆಲಸದ ದಿನಗಳಲ್ಲಿ ಗ್ರಾಹಕರ ಖಾತೆಗೆ ಜಮಾ ಮಾಡಬೇಕು.
ಇಂಡಸ್‌ಇಂಡ್ ಬ್ಯಾಂಕ್‌ಗೆ ರೂ. 1 ಕೋಟಿ ದಂಡ ವಿಧಿಸಲಾಗಿದ್ದು, ನಿಯಂತ್ರಕರು 31 ಮಾರ್ಚ್ 2020ರಂತೆ ಅದರ ಹಣಕಾಸು ಸ್ಥಿತಿಯನ್ನು ಉಲ್ಲೇಖಿಸಿ, ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ ಶಾಸನಬದ್ಧ ತಪಾಸಣೆ ನಡೆಸಲಾಗಿದೆ ಎಂದು ಆರ್‌ಬಿಐ ಆದೇಶ ಹೊರಡಿಸಿದೆ.
ಒಟಿಪಿ ಆಧಾರಿತ e-KYC ಬಳಸಿ ತೆರೆಯಲಾದ ಖಾತೆಗಳಲ್ಲಿ ಕಸ್ಟಮರ್ ಡ್ಯು ಡೆಲಿಗೆನ್ಸ್ (CDD) ಕಾರ್ಯವಿಧಾನವನ್ನು ಅನುಸರಿಸಲು ಬ್ಯಾಂಕ್ ವಿಫಲವಾಗಿದೆ ಎಂದು ಆರ್‌ಬಿಐ ಹೇಳಿದೆ. ಕೆಲವು ಖಾತೆಗಳಂತೆ, ಹಣಕಾಸಿನ ಎಲ್ಲ ಕ್ರೆಡಿಟ್‌ಗಳ ಒಟ್ಟು ಮೊತ್ತ ಹಣಕಾಸು ವರ್ಷದಲ್ಲಿ ಎಲ್ಲ ಠೇವಣಿಗಳಲ್ಲಿ ಒಟ್ಟಿಗೆ ತೆಗೆದುಕೊಂಡಿದ್ದು ರೂ. 2 ಲಕ್ಷದ ನಿಗದಿತ ಮಿತಿಯನ್ನು ಮೀರಿದೆ.
ಇದನ್ನೂ ಓದಿ: Reserve Bank Of India: ಕೋ-ಆಪರೇಟಿವ್ ಬ್ಯಾಂಕ್ಗಳ ಸಾಲ ನೀಡುವ ಮೊತ್ತದ ಮಿತಿ ದುಪ್ಪಟ್ಟು ಮಾಡಿದ ಆರ್‌ಬಿಐ
Published On - 9:49 pm, Mon, 4 July 22