Petrol Price Today: ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಇಳಿಕೆಗೆ ಏಕನಾಥ ಶಿಂದೆ ಕ್ರಮ; ಬೆಂಗಳೂರು ಸೇರಿದಂತೆ ವಿವಿಧೆಡೆ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

ಮುಂದಿನ ದಿನಗಳಲ್ಲಿ ಬೆಲೆ ಇಳಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿಕೊಡಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಯೋಚಿಸಿದ್ದಾರೆ.

Petrol Price Today: ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಇಳಿಕೆಗೆ ಏಕನಾಥ ಶಿಂದೆ ಕ್ರಮ; ಬೆಂಗಳೂರು ಸೇರಿದಂತೆ ವಿವಿಧೆಡೆ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ
ಪೆಟ್ರೋಲ್ ಬೆಲೆ (ಪ್ರಾತಿನಿಧಿಕ ಚಿತ್ರ)Image Credit source: Money Control
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 05, 2022 | 8:22 AM

Fuel Price Today: ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯಲ್ಲಿ (Diesel Price) ಏರಿಳಿತವಾಗುತ್ತಲೇ ಇರುತ್ತದೆ. ದೇಶದಲ್ಲೇ ಅತಿಹೆಚ್ಚಿನ ಬೆಲೆಗೆ ಮುಂಬೈನಲ್ಲಿ ಪೆಟ್ರೋಲ್ ಡೀಸೆಲ್ ಮಾರಾಟವಾಗುತ್ತಿದೆ. ಪ್ರಸ್ತುತ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ ₹ 111.35 ಮತ್ತು ಡೀಸೆಲ್​ಗೆ ₹ 97.28 ದರವಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿಕೊಡಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಯೋಚಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ವಿಧಿಸಿದ್ದ ₹ 2.08 ಮತ್ತು ಡೀಸೆಲ್ ಮೇಲೆ ಇದ್ದ ₹ 1.44 ತೆರಿಗೆಯನ್ನು ರದ್ದುಪಡಿಸಿತ್ತು.

ಉಕ್ರೇನ್ ಮೇಲಿನ ರಷ್ಯಾ ದಾಳಿಯ ಇಂಧನ ಬೆಲೆಯಲ್ಲಿ ನಿರಂತರ ಏರಿಕೆಯ ನಂತರ ಕಳೆದ ಕೆಲವು ದಿನಗಳಿಂದ ಜನರಿಗೆ ಸ್ವಲ್ಪ ನಿರಾಳವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸುಮಾರು ಒಂದೂವರೆ ತಿಂಗಳ ಹಿಂದೆ (ಮೇ 21) ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸರ್ಕಾರ ಕಡಿತಗೊಳಿಸಿತ್ತು. ಇದಾದ ನಂತರ ತೈಲ ಬೆಲೆಯಲ್ಲಿ ಭಾರೀ ಕುಸಿತ ಕಂಡಿತ್ತು. ಈ ಹಿಂದೆ ಏಪ್ರಿಲ್ 6ರಂದು ಕೊನೆಯ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು.

ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೀಗಿವೆ. ದೆಹಲಿ ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. ಆಗಿದೆ. ಮುಂಬೈ ಪೆಟ್ರೋಲ್ ಬೆಲೆ 111.35 ರೂ. ಮತ್ತು ಡೀಸೆಲ್ ಲೀಟರ್‌ಗೆ 97.28 ರೂ. ಆಗಿದೆ. ಚೆನ್ನೈ ಪೆಟ್ರೋಲ್ ಬೆಲೆ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. ಆಗಿದೆ. ಕೊಲ್ಕತ್ತಾ ಪೆಟ್ರೋಲ್ ಬೆಲೆ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ಆಗಿದೆ.

ನೊಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.79 ರೂ. ಮತ್ತು ಡೀಸೆಲ್ 89.96 ರೂ ಆಗಿದೆ. ಆಗಿದೆ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ ಮತ್ತು ಡೀಸೆಲ್ 89.76 ರೂ ಆಗಿದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ ಮತ್ತು ಡೀಸೆಲ್ 94.04 ರೂ ಆಗಿದೆ. ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಮೇ 21ರಂದು ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ. ಮತ್ತು ಡೀಸೆಲ್ ಮೇಲೆ 6 ರೂ. ಕಡಿತಗೊಳಿಸಿದಾಗಿನಿಂದ ಒಂದು ತಿಂಗಳಿನಿಂದ ಬೆಲೆಗಳು ಬದಲಾಗದೆ ಯಥಾಸ್ಥಿತಿಯಲ್ಲಿ ಉಳಿದಿವೆ.

ಮುಂಬೈನಲ್ಲಿ ಪೆಟ್ರೋಲ್ 111.35 ರೂ. ಮತ್ತು ಡೀಸೆಲ್ 97.28 ರೂ. ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಚೆನ್ನೈನಲ್ಲಿ ರೂ.102.63 ಮತ್ತು ರೂ.94.24 ಆಗಿದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ ರೂ.106.03 ಮತ್ತು ಡೀಸೆಲ್ ರೂ.92.76 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ರೂ. ಆಗಿದೆ. ಡೀಸೆಲ್ ಬೆಲೆ 87.89 ರೂ. ಆಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ದೇಶದಲ್ಲಿ ಗ್ರಾಹಕರಿಗೆ ಅಬಕಾರಿ ಸುಂಕ ಕಡಿತವನ್ನು ವರ್ಗಾಯಿಸಿದರೂ ಸಹ ಪೆಟ್ರೋಲ್ ಮೇಲೆ 13.08 ರೂ ಮತ್ತು ಡೀಸೆಲ್ ಮೇಲೆ 24.09 ರೂ. ನಷ್ಟವನ್ನು ಅನುಭವಿಸುತ್ತಿವೆ. ಭಾರತವು ತನ್ನ ಶೇ. 80ರಷ್ಟು ಇಂಧನ ಅಗತ್ಯವನ್ನು ಆಮದಿನ ಮೂಲಕ ಪೂರೈಸುತ್ತದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣಾಮುಚ್ಚಾಲೆ ಆಟ ನಡೆಯುತ್ತಲೇ ಇದೆ.

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ