Gold Price on 3rd September 2022 | ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ (Gold Rate) ಕುಸಿತವಾಗುತ್ತಲೇ ಇದೆ. ಇಂದು ಚಿನ್ನದ ದರ 110 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 700 ರೂ. ಏರಿಕೆಯಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು 110 ರೂ. ಇಳಿಕೆಯಾಗಿದೆ. 2 ದಿನಗಳಿಂದ 22 ಕ್ಯಾರೆಟ್ ಚಿನ್ನದ ಬೆಲೆ 46,500 ರೂ. ಇದ್ದುದು 46,400 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,730 ರೂ. ಇದ್ದುದು 50,620 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,950 ರೂ. ಮುಂಬೈ- 46,400 ರೂ, ದೆಹಲಿ- 46,550 ರೂ, ಕೊಲ್ಕತ್ತಾ- 46,400 ರೂ, ಬೆಂಗಳೂರು- 46,450 ರೂ, ಹೈದರಾಬಾದ್- 46,400 ರೂ, ಕೇರಳ- 46,400 ರೂ, ಪುಣೆ- 46,430 ರೂ, ಮಂಗಳೂರು- 46,450 ರೂ, ಮೈಸೂರು- 46,450 ರೂ. ಇದೆ.
ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಇಳಿಕೆ; ಒಂದೇ ದಿನದಲ್ಲಿ ಬೆಳ್ಳಿ ದರ ಬರೋಬ್ಬರಿ 3,200 ರೂ. ಕುಸಿತ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,220 ರೂ, ಮುಂಬೈ- 50,620 ರೂ, ದೆಹಲಿ- 50,780 ರೂ, ಕೊಲ್ಕತ್ತಾ- 50,620 ರೂ, ಬೆಂಗಳೂರು- 50,670 ರೂ, ಹೈದರಾಬಾದ್- 50,620 ರೂ, ಕೇರಳ- 50,620 ರೂ, ಪುಣೆ- 50,650 ರೂ, ಮಂಗಳೂರು- 50,670 ರೂ, ಮೈಸೂರು- 50,670 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ನಿನ್ನೆ 400 ರೂ. ಹೆಚ್ಚಳವಾಗಿದ್ದ ಬೆಳ್ಳಿ ಬೆಲೆ ಇಂದು 700 ರೂ. ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 51,600 ರೂ. ಇದ್ದುದು ಇಂದು 52,300 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 58,000 ರೂ, ಮೈಸೂರು- 58,000 ರೂ., ಮಂಗಳೂರು- 58,000 ರೂ., ಮುಂಬೈ- 52,300 ರೂ, ಚೆನ್ನೈ- 58,000 ರೂ, ದೆಹಲಿ- 52,300 ರೂ, ಹೈದರಾಬಾದ್- 58,000 ರೂ, ಕೊಲ್ಕತ್ತಾ- 52,300 ರೂ. ಆಗಿದೆ.