Gold and Silver Rate: ಭಾರತದಲ್ಲಿ 2 ದಿನಗಳ ಹಿಂದೆ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆ ಕಂಡಿದೆ. ಈಗಾಗಲೇ ಬಂಗಾರದ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಮೇ ತಿಂಗಳವರೆಗೂ ಶುಭ ಸಮಾರಂಭಗಳು ಹೆಚ್ಚಾಗಿರುವುದರಿಂದ ಚಿನ್ನ (Gold Rate) ಕೊಳ್ಳುವವರೂ ಹೆಚ್ಚಾಗುತ್ತಾರೆ. ಇದೀಗ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು ಸಹಜವಾಗಿಯೇ ಗ್ರಾಹಕರು ಕಂಗಾಲಾಗಿದ್ದಾರೆ. ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,090 ರೂ. ಏರಿಕೆಯಾಗಿದೆ. ಅತ್ತ ಬೆಳ್ಳಿ ದರದಲ್ಲಿ (Silver Price) ಕೂಡ ಇದ್ದಕ್ಕಿದ್ದಂತೆ ಭಾರೀ ಏರಿಕೆಯಾಗಿದ್ದು, ನಿನ್ನೆಗಿಂತ ಇಂದು 2,200 ರೂ. ಹೆಚ್ಚಳವಾಗಿದೆ.
ದಾಖಲೆಯ ಮೊತ್ತಕ್ಕೇರಿದ್ದ ಚಿನ್ನದ ದರ ಎರಡು ದಿನಗಳಿಂದ ಭಾರೀ ಇಳಿಮುಖವಾಗಿತ್ತು. 2 ದಿನಗಳಿಂದ ಹೆಚ್ಚಳವಾಗಿದ್ದ ಬಂಗಾರದ ಬೆಲೆ ಇದೀಗ ಮತ್ತೆ ಕುಸಿತ ಕಂಡಿತ್ತು. ಆದರೆ, ಇದೀಗ 10 ಗ್ರಾಂ ಚಿನ್ನಕ್ಕೆ 1,090 ರೂ. ಏರಿಕೆಯಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,700 ರೂ. ಇದ್ದುದು ಇಂದು 47,700 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,950 ರೂ. ಇದ್ದುದು 52,040 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,800 ರೂ, ಮುಂಬೈ- 47,700 ರೂ, ದೆಹಲಿ- 47,700 ರೂ, ಕೊಲ್ಕತ್ತಾ- 47,700 ರೂ, ಬೆಂಗಳೂರು- 47,700 ರೂ, ಹೈದರಾಬಾದ್- 47,700 ರೂ, ಕೇರಳ- 47,700 ರೂ, ಪುಣೆ- 47,780 ರೂ, ಮಂಗಳೂರು- 47,700 ರೂ, ಮೈಸೂರು- 47,700 ರೂ. ಇದೆ.
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,240 ರೂ, ಮುಂಬೈ- 52,040 ರೂ, ದೆಹಲಿ- 52,040 ರೂ, ಕೊಲ್ಕತ್ತಾ- 52,040 ರೂ, ಬೆಂಗಳೂರು- 52,040 ರೂ, ಹೈದರಾಬಾದ್- 52,040 ರೂ, ಕೇರಳ- 52,040 ರೂ, ಪುಣೆ- 52,090 ರೂ, ಮಂಗಳೂರು- 52,040 ರೂ, ಮೈಸೂರು- 52,040 ರೂ. ಇದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ವಿಪರೀತ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 2,200 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 65,000 ರೂ. ಇದ್ದುದು 67,200 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,100 ರೂ, ಮೈಸೂರು- 72,100 ರೂ., ಮಂಗಳೂರು- 72,100 ರೂ., ಮುಂಬೈ- 67,200 ರೂ, ಚೆನ್ನೈ- 72,100 ರೂ, ದೆಹಲಿ- 67,200 ರೂ, ಹೈದರಾಬಾದ್- 72,100 ರೂ, ಕೊಲ್ಕತ್ತಾ- 67,200 ರೂ. ಇದೆ.
ಇದನ್ನೂ ಓದಿ: Gold Price Today: ದಾಖಲೆಯ ಮಟ್ಟಕ್ಕೇರಿದ ಚಿನ್ನದ ಬೆಲೆ; ಒಂದೇ ದಿನದಲ್ಲಿ 1,700 ರೂ. ಏರಿಕೆ ಕಂಡ ಬೆಳ್ಳಿ ದರ
Gold Price Today: ಮತ್ತೆ ಕುಸಿತ ಕಂಡ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ