Gold Price Today: ಹೊಸ ದಾಖಲೆ ಬರೆದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ 75,000 ರೂ. ದಾಟಿದ ಬೆಳ್ಳಿ ದರ

Silver Price on March 8: 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 1,090 ರೂ. ಹೆಚ್ಚಳವಾಗುವ ಮೂಲಕ ಮತ್ತೆ ಬಂಗಾರದ ಬೆಲೆ ದಾಖಲೆ ಬರೆದಿದೆ. ಹಾಗೇ, ಹಲವು ರಾಜ್ಯಗಳಲ್ಲಿ ಬೆಳ್ಳಿಯ ಬೆಲೆ 1 ಕೆಜಿಗೆ 75,000 ದಾಟುವ ಮೂಲಕ ದಾಖಲೆ ನಿರ್ಮಿಸಿದೆ.

Gold Price Today: ಹೊಸ ದಾಖಲೆ ಬರೆದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ 75,000 ರೂ. ದಾಟಿದ ಬೆಳ್ಳಿ ದರ
ಚಿನ್ನದ ಆಭರಣ
Edited By:

Updated on: Mar 08, 2022 | 5:54 AM

ರಷ್ಯಾ ಮತ್ತು ಉಕ್ರೇನ್ (Russia Ukraine War) ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಹಾಗೂ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಚಿನ್ನದ ಬೆಲೆ ಭಾರೀ ಏರಿಕೆಯತ್ತ ಸಾಗಿದೆ. ಇಂದು ಚಿನ್ನದ ಬೆಲೆ ಹೊಸ ದಾಖಲೆ ಬರೆದಿದ್ದು, 10 ಗ್ರಾಂ ಬಂಗಾರದ ಬೆಲೆ 1,090 ರೂ. ಏರಿಕೆಯಾಗಿದ್ದು, 1 ಕೆಜಿ ಚಿನ್ನಕ್ಕೆ ಒಂದೇ ದಿನದಲ್ಲಿ 10,900 ರೂ. ಹೆಚ್ಚಳವಾಗಿದೆ. ಕೂಡ ತನ್ನ ಹೊಸ ದಾಖಲೆಯತ್ತ ಸಾಗುತ್ತಿದೆ. ರಷ್ಯಾ – ಉಕ್ರೇನ್ ಸಂಘರ್ಷದಿಂದಾಗಿ ಚಿನ್ನದ ಪೂರೈಕೆ ಕಡಿಮೆಯಾಗಿದೆ. ಭಾರತದಲ್ಲಿ ಚಿನ್ನದ ದರ (Gold Rate) ಇಂದು ಕೂಡ ಏರಿಕೆಯತ್ತ ಸಾಗಿದೆ. 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 1,090 ರೂ. ಹೆಚ್ಚಳವಾಗುವ ಮೂಲಕ ಮತ್ತೆ ಬಂಗಾರದ ಬೆಲೆ (Gold Price) ದಾಖಲೆ ಬರೆದಿದೆ. ಹಾಗೇ, ಹಲವು ರಾಜ್ಯಗಳಲ್ಲಿ ಬೆಳ್ಳಿಯ ಬೆಲೆ 1 ಕೆಜಿಗೆ 75,000 ದಾಟುವ ಮೂಲಕ ದಾಖಲೆ ನಿರ್ಮಿಸಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನ ಮಾತ್ರವಲ್ಲದೆ ಬೆಳ್ಳಿ ಬೆಲೆಯಲ್ಲೂ (Silver Price) ಹೆಚ್ಚಳವಾಗುತ್ತಲೇ ಇದೆ. ನಿನ್ನೆ ಒಂದೇ ದಿನದಲ್ಲಿ ಬೆಳ್ಳಿಯ ದರ 1 ಕೆಜಿಗೆ 1,000 ರೂ. ಏರಿಕೆಯಾಗಿದೆ. ಹೈದರಾಬಾದ್, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಮೂರ್ನಾಲ್ಕು ದಿನಗಳಿಂದ ಹೆಚ್ಚುತ್ತಲೇ ಇದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,400 ರೂ. ಇದ್ದುದು ಇಂದು 49,400 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,800 ರೂ. ಇದ್ದುದು 53,890 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 50,710 ರೂ. ಮುಂಬೈ- 49,400 ರೂ, ದೆಹಲಿ- 49,400 ರೂ, ಕೊಲ್ಕತ್ತಾ- 49,400 ರೂ, ಬೆಂಗಳೂರು- 49,400 ರೂ, ಹೈದರಾಬಾದ್- 49,400 ರೂ, ಕೇರಳ- 49,400 ರೂ, ಪುಣೆ- 49,450 ರೂ, ಮಂಗಳೂರು- 49,400 ರೂ, ಮೈಸೂರು- 49,400 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 55,320 ರೂ, ಮುಂಬೈ- 53,890 ರೂ, ದೆಹಲಿ- 53,890 ರೂ, ಕೊಲ್ಕತ್ತಾ- 53,890 ರೂ, ಬೆಂಗಳೂರು- 53,890 ರೂ, ಹೈದರಾಬಾದ್- 53,890 ರೂ, ಕೇರಳ- 53,890 ರೂ, ಪುಣೆ- 53,950 ರೂ, ಮಂಗಳೂರು- 53,890 ರೂ, ಮೈಸೂರು- 53,890 ರೂ. ಇದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಕೂಡ ಮತ್ತೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 1,000 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 70,000 ರೂ. ಇದ್ದುದು 71,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 75,700 ರೂ, ಮೈಸೂರು- 75,700 ರೂ., ಮಂಗಳೂರು- 75,700 ರೂ., ಮುಂಬೈ- 71,000 ರೂ, ಚೆನ್ನೈ- 75,700 ರೂ, ದೆಹಲಿ- 71,000 ರೂ, ಹೈದರಾಬಾದ್- 75,700 ರೂ, ಕೊಲ್ಕತ್ತಾ- 71,000 ರೂ. ಇದೆ.

ಇದನ್ನೂ ಓದಿ: Gold Price Today: ಒಂದೇ ದಿನದಲ್ಲಿ 2,000 ರೂ. ಏರಿಕೆ ಕಂಡ ಬೆಳ್ಳಿ ದರ; ಚಿನ್ನದ ಬೆಲೆಯೂ ಮತ್ತೆ ಹೆಚ್ಚಳ

Gold Price Today: ಚಿನ್ನ ಕೊಳ್ಳುವವರಿಗೆ ದೊಡ್ಡ ಶಾಕ್; ಬೆಳ್ಳಿ ಬೆಲೆಯೂ 2,200 ರೂ. ಏರಿಕೆ

TV9 Web

TV9 Kannada

Read More
Loading...
Unable to load recommendations.
Follow Us