Gold Rate Today: ಚಿನ್ನ, ಬೆಳ್ಳಿ ದರ ಏರಿಕೆ; ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ? ವಿವರ ಇಲ್ಲಿದೆ

Gold Price Today: ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಶುಲ್ಕ ವಿಧಿಸುವುದರಿಂದ ಚಿನ್ನದ ದರ ಬದಲಾಗುತ್ತದೆ. ಲೋಹದ ಬೇಡಿಕೆಯಲ್ಲಿ ಎರಡನೇ ಅತಿದೊಡ್ಡ ಗ್ರಾಹಕ ಸ್ಥಾನ ಭಾರತಕ್ಕಿದೆ.

Gold Rate Today: ಚಿನ್ನ, ಬೆಳ್ಳಿ ದರ ಏರಿಕೆ; ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ? ವಿವರ ಇಲ್ಲಿದೆ
ಕನಿಷ್ಠ ಮತ್ತು ಗರಿಷ್ಠ ಹೂಡಿಕೆ
Updated By: preethi shettigar

Updated on: Aug 14, 2021 | 7:44 AM

ಬೆಂಗಳೂರು: ದೈನಂದಿನ ಪರಿಶೀಲನೆಯಲ್ಲಿ ಚಿನ್ನ ದರವನ್ನು ಗಮನಿಸಿದಾಗ ಚಿನ್ನದ ದರ ಇಂದು (ಆಗಸ್ಟ್ 14, ಶನಿವಾರ) ಕೊಂಚ ಏರಿಕೆಯಾಗಿದೆ. ದಿನ ಸಾಗುತ್ತಿದ್ದಂತೆ ಅಮೂಲ್ಯ ಲೋಹವಾದ ಚಿನ್ನದ ದರ (Gold Price) ಏರುತ್ತಲೇ ಇರುವುದನ್ನು ನೋಡುತ್ತಿರುವ ಗ್ರಾಹಕರಿಗೆ ಬೇಸರ ತಂದಿದೆ. ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಶುಲ್ಕ ವಿಧಿಸುವುದರಿಂದ ಚಿನ್ನದ ದರ ಬದಲಾಗುತ್ತದೆ. ಲೋಹದ ಬೇಡಿಕೆಯಲ್ಲಿ ಎರಡನೇ ಅತಿದೊಡ್ಡ ಗ್ರಾಹಕ ಸ್ಥಾನ ಭಾರತಕ್ಕಿದೆ. ಇಂದು ಬೆಳ್ಳಿ ದರ (Silver Price) ಕೂಡ ಏರಿಕೆಯತ್ತ ಮುಖ ಮಾಡಿದೆ

ಚಿನ್ನದ ದರ ವಿವರ
ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,700 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,37,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,680 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,76,800 ರೂಪಾಯಿ ನಿಗದಿಯಾಗಿದೆ. ದೈನಂದಿನ ಬದಲಾವಣೆಯಲ್ಲಿ 1,200 ರೂಪಾಯಿ ಏರಿಕೆಯಾಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,950 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,39,500 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,950 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,79,500 ರೂಪಾಯಿ ಇದೆ. ದೈನಂದಿನ ಬದಲಾವಣೆಯಲ್ಲಿ 1,000 ರೂಪಾಯಿ ಏರಿಕೆಯಾಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,850 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,58,500 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,020 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,00,200 ರೂಪಾಯಿ ಇದೆ.

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,860 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,58,600 ರೂಪಾಯಿ ಇದೆ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಇಂದು ಚಿನ್ನದ ದರ ಏರಿಕೆಯಾಗಿದೆ.

ಬೆಳ್ಳಿ ದರ ವಿವರ
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೊಂಚ ಏರಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿದೆ. ಆ ಬಳಿಕ ಕೆಜಿ ಬೆಳ್ಳಿ ಬೆಲೆ 62,500 ರೂಪಾಯಿ ನಿಗದಿ ಮಾಡಲಾಗಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿ ಬೆಲೆ 67,300 ರೂಪಾಯಿ ಇದ್ದು, 200 ರೂಪಾಯಿ ಇಳಿಕೆಯಾಗಿದೆ.

ದೆಹಲಿಯಲ್ಲಿ ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿದೆ. ಆ ಬಳಿಕ 62,500 ರೂಪಾಯಿ ನಿಗದಿಯಾಗಿದೆ. ಮುಂಬೈನಲ್ಲಿಯೂ ಸಹ ದರ ಏರಿಕೆಯಾಗಿದ್ದು, 200 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 62,500 ರೂಪಾಯಿ ಆಗಿದೆ.

ಇದನ್ನೂ ಓದಿ:
Gold Rate Today: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ