Gold Silver Price Today | ಬೆಂಗಳೂರು: ನಿನ್ನೆ ಎಲ್ಲಾ ಪ್ರಮುಖ ಮಹಾನಗರಗಳಲ್ಲಿಯೂ ಸಹ ಚಿನ್ನಾಭರಣದ ದರ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಇಂದು (ಆಗಸ್ಟ್ 6, ಶುಕ್ರವಾರ) ಚಿನ್ನದ ದರದಲ್ಲಿ (Gold Price) ಇಳಿಕೆಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಶುಕ್ರವಾರ ಶುಭ ದಿನ ಎಂದು ಪರಿಗಣಿಸಲಾಗಿದೆ. ಅಷ್ಟೊಂದು ದುಬಾರಿ ವಸ್ತುವನ್ನು ಕೊಳ್ಳುವಾಗ ಶುಭ ದಿನ ನೋಡಿ ಖರೀದಿಸುವುದು ಒಳ್ಳೆಯದು. ಹಾಗಿರುವಾಗ ಇಂದು ಶುಕ್ರವಾರ ಚಿನ್ನ ಮತ್ತು ಬೆಳ್ಳಿ (Silver Price) ಎರಡೂ ಆಭರಣಗಳು ಇಳಿಕೆ ಕಂಡಿದೆ. ಆಭರಣ ಖರೀದಿಸಬೇಕು ಎಂದು ಯೋಚಿಸಿದ್ದರೆ ಇಂದು ನಿಮ್ಮೂರಿನಲ್ಲಿ ಚಿನ್ನದ ದರ ಎಷ್ಟಿದೆ ಪರಿಶೀಲಿಸಿ. ಆಭರಣಗಳ ದರ ವಿವರ ಮಾಹಿತಿ ಈ ಕೆಳಗಿನಂತಿದೆ.
ಚಿನ್ನದ ದರ ವಿವರ
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,800 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,48,900 ರೂಪಾಯಿಗೆ ಇಳಿಕೆಯಾಗಿದೆ. ದೈನಂದಿನ ದರ ಏರಿಳಿತದಲ್ಲಿ 1,000 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,880 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,88,800 ರೂಪಾಯಿ ಇಳಿಕೆಯಾಗಿದೆ. ಸುಮಾರು 1,000 ರೂಪಾಯಿ ಇಳಿಕೆ ಕಂಡಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,260 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,52,600 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,380 ರೂಪಾಯಿ ಹಾಗೂ 100 ಗ್ರಅಮ ಚಿನ್ನದ ದರ 4,93,800 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 700 ರೂಪಾಯಿ ಇಳಿಕೆಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,950 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,69,500 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 900 ರೂಪಾಯಿಯಷ್ಟು ಇಳಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 51,220 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,12,200 ರೂಪಾಯಿ ನಿಗದಿಯಾಗಿದೆ. ನಿನ್ನೆಯ ದರಕ್ಕಿಂತ ಸರಿಸುಮಾರು 1,000 ರೂಪಾಯಿ ಇಳಿಕೆಯಾಗಿದೆ.
ಬೆಳ್ಳಿ ದರ ವಿವರ
ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 67,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 400 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿಗೆ 800 ರೂಪಾಯಿ ಇಳಿಕೆ ಬಳಿಕ 72,300 ರೂಪಾಯಿ ನಿಗದಿಯಾಗಿದೆ. ದೆಹಲಿಯಲ್ಲಿ 400 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 67, 600 ರೂಪಾಯಿ ಆಗಿದೆ.
ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಸಹ ನಿನ್ನೆ ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಆಗಿತ್ತು. ಆದರೆ ಇಂದು ಚಿನ್ನ, ಬೆಳ್ಳಿ ಆಭರಣಗಳ ದರ ಇಳಿಕೆ ಕಂಡಿರುವುದು ಚಿನ್ನ ಖರೀದಿಸಲು ಮುಂದಾಗಿದ್ದ ಜನರಿಗೆ ಖುಷಿಯ ವಿಚಾರ.
ಇದನ್ನೂ ಓದಿ:
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ಬೆಲೆಯಲ್ಲಿ ಏರಿಕೆ; ನಿಮ್ಮೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ?
Published On - 8:40 am, Fri, 6 August 21