Gold Silver Price Today | ಬೆಂಗಳೂರು: ನಿನ್ನೆ ಹಲವೆಡೆ ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿತ್ತು, ಇನ್ನು ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡಿತ್ತು. ಆದರೆ ಇಂದು ( ಸೆಪ್ಟೆಂಬರ್ 8, ಬುಧವಾರ) ಚಿನ್ನದ ದರದಲ್ಲಿ (Gold Price) ಇಳಿಕೆ ಕಂಡು ಬಂದಿದ್ದು, ಬೆಳ್ಳಿ ದರದಲ್ಲಿ (Silver Price) ಕೂಡ ಕೊಂಚ ಇಳಿಕೆ ಆಗಿದೆ. ಪ್ರಮುಖ ನಗರಗಳಲ್ಲಿ ಚಿನ್ನಾಭರಣ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ. ನೀವು ಗೌರಿ ಗಣೇಶ ಹಬ್ಬಕ್ಕೆ ಕೂಡಿಟ್ಟ ಹಣದಲ್ಲಿ ಸರಿಹೊಂದುವುದಾದರೆ ಚಿನ್ನಾಭರಣ ಕೊಳ್ಳುವ ಕುರಿತಾಗಿ ಇಂದು ಯೋಚಿಸಬಹುದು.
ಚಿನ್ನಾಭರಣ ಖರೀದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಸಭೆ – ಸಮಾರಂಭಗಳು ಎದುರಿಗಿದ್ದಾಗ ಹೊಸ ಶೈಲಿ, ಹೊಸ ಸ್ಟೈಲ್ನ ಚಿನ್ನದ ಸರವನ್ನೋ ಅಥವಾ ಕಿವಿಯೋಲೆಯನ್ನೋ ಖರೀದಿಸಬೇಕು ಅಂದೆನಿಸುತ್ತದೆ. ಆಗ ಮಾರುಕಟ್ಟೆಯಲ್ಲಿ ಚಿನ್ನಾಭರಣದ ದರ ಎಷ್ಟಿದೆ? ಎಂಬ ಪ್ರಶ್ನೆ ಮೂಡುವುದು ಸಹಜ. ಇಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,400 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,44,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 1,100 ರೂಪಾಯಿ ಇಳಿಕೆ ಕಂಡಿದೆ. ಅದರಂತೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,440 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,84,400 ರೂಪಾಯಿ. ದೈನಂದಿನ ದರ ಬದಲಾವಣೆಯಲ್ಲಿ 1,200 ರೂಪಾಯಿ ಇಳಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆ 65,000 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 300 ರೂಪಾಯಿ ಇಳಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ ಚಿನ್ನಾಭರಣದ ಬೆಲೆ ನಿನ್ನೆಗಿಂತ ಕೊಂಚ ಇಳಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,740 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,47,400 ರೂಪಾಯಿ ನಿಗದಿಯಾಗಿದೆ. ಸುಮಾರು 500 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,810 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,88,100 ರೂಪಾಯಿ ನಿಗದಿಯಾಗಿದೆ. ಸುಮಾರು 500 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆ ಬಳಿಕ ಕೆಜಿ ಬೆಳ್ಳಿಗೆ 69,600 ರೂಪಾಯಿ ನಿಗದಿಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,550 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,65,500 ರೂಪಾಯಿ ನಿಗದಿಯಾಗಿದೆ. ದೈನಂದಿನ ಬದಲಾವಣೆಯಲ್ಲಿ 1,100 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,790 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,07,900 ರೂಪಾಯಿ ನಿಗದಿಯಾಗಿದೆ. ಕೆಜಿ ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ. ದೈನಂದಿನ ಬದಲಾವಣೆಯಲ್ಲಿ 1,200 ರೂಪಾಯಿ ಇಳಿಕೆಯಾಗಿದೆ. 300 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿಗೆ 65,000 ರೂಪಾಯಿ ನಿಗದಿಯಾಗಿದೆ.
ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ ಹಲವೆಡೆ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಅದೇ ರೀತಿ, ಬೆಳ್ಳಿ ದರದಲ್ಲಿಯೂ ಸಹ ಇಳಿಕೆಯಾಗಿದೆ. ನೀವು ಇಷ್ಟು ವರ್ಷಗಳ ಕಾಲ ಚಿನ್ನಾಭರಣ ಖರೀದಿಸಲೆಂದು ಸಂಗ್ರಹಿಸಿದ ಹಣದಲ್ಲಿ ಆಭರಣ ಖರೀದಿಸಬೇಕೆಂದು ಅಂದುಕೊಂಡಿದ್ದರೆ ಆ ಕುರಿತಾಗಿ ಯೋಚಿಸಬಹುದು.
ಇದನ್ನೂ ಓದಿ:
Gold Rate Today: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?
Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ
Published On - 8:02 am, Wed, 8 September 21