Gold and Silver Price Today| ಬೆಂಗಳೂರು: ಚಿನ್ನದ ಮೇಲೆ ಭಾರತೀಯರಿಗೆ ಕೊಂಚ ಜಾಸ್ತಿಯೇ ಪ್ರೀತಿ. ಹಬ್ಬ-ಹರಿದಿನಗಳ ಸಾಲು ಬಂದರೆ ಚಿನ್ನಾಭರಣಗಳನ್ನು ಖರೀದಿ ಹೆಚ್ಚುತ್ತದೆ. ಆದರೆ ಚಿನ್ನದ ಬೆಲೆ ಒಂದು ದಿನವಿದ್ದಂತೆ ಮತ್ತೊಂದು ದಿನ ಇರುವುದಿಲ್ಲ. ದೇಶಾದ್ಯಂತ ಬೆಲೆ ವ್ಯತ್ಯಾಸವಾಗುತ್ತಿರುತ್ತದೆ. ದೈನಂದಿನ ದರದಲ್ಲಿ ಚಿನ್ನಾಭರಣ ಬೆಲೆ ಏರಿಳಿತ ಸಹಜ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ( Gold Price) ಇಳಿಕೆಯಾಗುತ್ತಿದ್ದು, ಇಂದು (ಫೆಬ್ರವರಿ 22, ಮಂಗಳವಾರ) ಕೂಡ ಬೆಲೆ ಇಳಿಕೆಯಾಗಿದೆ. ಆದರೆ ಬೆಳ್ಳಿ ದರ (Silver Price) ಸ್ಥಿರವಾಗಿದೆ. ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price)
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,59,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 900 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,050 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,00,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,300 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ಸ್ಥಿರತೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 70,000 ರೂಪಾಯಿ ದಾಖಲಾಗಿದೆ.
ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price)
ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,270 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,72,700 ರೂಪಾಯಿ ನಿಗದಿಯಾಗಿದೆ. ಸುಮಾರು 500 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 51,570 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,15,700 ರೂಪಾಯಿ ನಿಗದಿಯಾಗಿದೆ. ಸುಮಾರು 500 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಕೆಜಿ ಬೆಳ್ಳಿಗೆ 68,200 ರೂಪಾಯಿ ನಿಗದಿಯಾಗಿದೆ.
ಹೈದರಾಬಾದ್ನಲ್ಲಿ ಚಿನ್ನ, ಬೆಳ್ಳಿ ದರ (Hyderabad Gold Price)
ಹೈದರಾಬಾದ್ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,59,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 900 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,050 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,00,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,300 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿ ಇಂದು ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 70,000 ರೂಪಾಯಿ ನಿಗದಿಯಾಗಿದೆ. ಸುಮಾರು 70,00,070 ರೂಪಾಯಿಯಷ್ಟು ಇಳಿಕೆ ಆಗಿದೆ.
ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ (Mumbai Gold price)
ಮುಂಬೈನಲ್ಲಿ ಇಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,59,000 ರೂಪಾಯಿ ನಿಗದಿಯಾಗಿದೆ. ಸುಮಾರು 100 ರೂಪಾಯಿಯಷ್ಟು ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,050 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,00,500 ರೂಪಾಯಿ ನಿಗದಿಯಾಗಿದೆ. ಸುಮಾರು 1,300 ರೂಪಾಯಿಯಷ್ಟು ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಂಡಿದ್ದು, ಕೆಜಿ ಬೆಳ್ಳಿಗೆ 64,000 ರೂಪಾಯಿ ನಿಗದಿಯಾಗಿದೆ.
ಇದನ್ನೂ ಓದಿ:
Gold and Silver Price: ಚಿನ್ನ ಇಳಿಕೆ, ಬೆಳ್ಳಿ ಬೆಲೆ ಸ್ಥಿರ: ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವವರಿದ್ದರೆ ಇಲ್ಲಿದೆ ದರ ವಿವರ
Gold and Silver Price: ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಕೆ; ವಿವಿಧ ಪ್ರಮುಖ ನಗರಗಳ ದರ ವಿವರ ಇಲ್ಲಿದೆ
Published On - 7:23 am, Tue, 22 February 22