Gold Rates: ಚಿನ್ನದ ಬೆಲೆ ಸತತ ಕುಸಿತ; ಎರಡು ದಿನದಲ್ಲಿ 190 ರೂ ಇಳಿಕೆ

Bullion Market 2026 March 13th: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆಯಾಗಿದೆ. ಗುರುವಾರ 100 ರೂ, ಇವತ್ತು ಶುಕ್ರವಾರ 90 ರೂ ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 14,870 ರೂನಿಂದ 14,780 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 16,124 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 280 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 290 ರೂ ಇದೆ.

Gold Rates: ಚಿನ್ನದ ಬೆಲೆ ಸತತ ಕುಸಿತ; ಎರಡು ದಿನದಲ್ಲಿ 190 ರೂ ಇಳಿಕೆ
ಚಿನ್ನ

Updated on: Mar 13, 2026 | 11:51 AM

ಬೆಂಗಳೂರು, ಮಾರ್ಚ್ 13: ನಿನ್ನೆಯಂತೆ ಇವತ್ತು ಶುಕ್ರವಾರವೂ ಚಿನ್ನದ ಬೆಲೆಯಲ್ಲಿ (Gold Rates) ಇಳಿಕೆಯಾಗಿದೆ. ಸತತ ಎರಡು ದಿನ ಏರಿಕೆ ಬಳಿಕ, ಸತತ ಎರಡು ದಿನ ಇಳಿಕೆಯಾಗಿದೆ. ನಿನ್ನೆ 100 ರೂ ತಗ್ಗಿದ್ದ ಇದರ ಬೆಲೆ ಇವತ್ತು 90 ರೂ ಇಳಿದಿದೆ. ವಿದೇಶಗಳಲ್ಲೂ ಹಲವೆಡೆ ಬೆಲೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,47,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,240 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,47,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 13ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,124 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,780 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,093 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,124 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,780 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,780 ರೂ
  • ಚೆನ್ನೈ: 14,900 ರೂ
  • ಮುಂಬೈ: 14,780 ರೂ
  • ದೆಹಲಿ: 14,795 ರೂ
  • ಕೋಲ್ಕತಾ: 14,780 ರೂ
  • ಕೇರಳ: 14,780 ರೂ
  • ಅಹ್ಮದಾಬಾದ್: 14,785 ರೂ
  • ಜೈಪುರ್: 14,795 ರೂ
  • ಲಕ್ನೋ: 14,795 ರೂ
  • ಭುವನೇಶ್ವರ್: 14,780 ರೂ

ಇದನ್ನೂ ಓದಿ: ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 620 ರಿಂಗಿಟ್ (14,560 ರುಪಾಯಿ)
  • ದುಬೈ: 571.75 ಡಿರಾಮ್ (14,386 ರುಪಾಯಿ)
  • ಅಮೆರಿಕ: 160.50 ಡಾಲರ್ (14,830 ರುಪಾಯಿ)
  • ಸಿಂಗಾಪುರ: 203.90 ಸಿಂಗಾಪುರ್ ಡಾಲರ್ (14,724 ರುಪಾಯಿ)
  • ಕತಾರ್: 569 ಕತಾರಿ ರಿಯಾಲ್ (14,418 ರೂ)
  • ಸೌದಿ ಅರೇಬಿಯಾ: 580 ಸೌದಿ ರಿಯಾಲ್ (14,279 ರುಪಾಯಿ)
  • ಓಮನ್: 60.65 ಒಮಾನಿ ರಿಯಾಲ್ (14,572 ರುಪಾಯಿ)
  • ಕುವೇತ್: 46.54 ಕುವೇತಿ ದಿನಾರ್ (14,028 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us