Gold Rate Today Bangalore: ಚಿನ್ನದ ಬೆಲೆ 11,720 ರೂ; ಇಲ್ಲಿದೆ ದರಪಟ್ಟಿ

Bullion Market 2025 November 14th: ಇಂದು ಶುಕ್ರವಾರ ಚಿನ್ನದ ಬೆಲೆ ತುಸು ಇಳಿಕೆಯಾದರೆ, ಬೆಳ್ಳಿ ಬೆಲೆ ಸ್ವಲ್ಪ ಹೆಚ್ಚಳ ಆಗಿದೆ. ಆಭರಣ ಚಿನ್ನದ ಬೆಲೆ 11,790 ರೂನಿಂದ 11,720 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 12,785 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 162 ರೂನಿಂದ 173 ರೂಗೆ ಏರಿದೆ. ಚೆನ್ನೈನಲ್ಲಿ 180 ರೂ ಇದ್ದರೆ, ಕೇರಳ ಮೊದಲಾದ ಕೆಲವೆಡೆ 183 ರೂ ಆಗಿದೆ.

Gold Rate Today Bangalore: ಚಿನ್ನದ ಬೆಲೆ 11,720 ರೂ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Nov 14, 2025 | 11:07 AM

ಬೆಂಗಳೂರು, ನವೆಂಬರ್ 14: ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ನಿನ್ನೆ ಒಂದೇ ದಿನ ಎರಡು ಬಾರಿ ಹೆಚ್ಚಳಗೊಂಡಿದ್ದ ಚಿನ್ನದ ಬೆಲೆ (Gold rate) ಇವತ್ತು ಗ್ರಾಮ್​ಗೆ 70 ರೂ ಕಡಿಮೆ ಆಗಿದೆ. 11,790 ರೂನಿಂದ 11,720 ರೂಗೆ ಆಭರಣ ಚಿನ್ನದ ಬೆಲೆ ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಕೆಲ ಕಡೆ ಅಲ್ಪ ಏರಿಳಿತವಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆ ತುಸು ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,17,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,27,850 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,17,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 17,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 18,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,720 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,589 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 173 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,785 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,720 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 173 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,720 ರೂ
  • ಚೆನ್ನೈ: 11,840 ರೂ
  • ಮುಂಬೈ: 11,720 ರೂ
  • ದೆಹಲಿ: 11,735 ರೂ
  • ಕೋಲ್ಕತಾ: 11,720 ರೂ
  • ಕೇರಳ: 11,720 ರೂ
  • ಅಹ್ಮದಾಬಾದ್: 11,725 ರೂ
  • ಜೈಪುರ್: 11,735 ರೂ
  • ಲಕ್ನೋ: 11,735 ರೂ
  • ಭುವನೇಶ್ವರ್: 11,720 ರೂ

ಇದನ್ನೂ ಓದಿ: ಅಮೆರಿಕದಲ್ಲಿ ಪೆನ್ನಿ ನಾಣ್ಯ ತಯಾರಿಕೆ ಇನ್ನಿಲ್ಲ; 232 ವರ್ಷಗಳ ಇತಿಹಾಸ ಕೊನೆ; ಕಾರಣ ಏನು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 540 ರಿಂಗಿಟ್ (11,594 ರುಪಾಯಿ)
  • ದುಬೈ: 468.75 ಡಿರಾಮ್ (11,324 ರುಪಾಯಿ)
  • ಅಮೆರಿಕ: 131 ಡಾಲರ್ (11,623 ರುಪಾಯಿ)
  • ಸಿಂಗಾಪುರ: 170 ಸಿಂಗಾಪುರ್ ಡಾಲರ್ (11,606 ರುಪಾಯಿ)
  • ಕತಾರ್: 467.50 ಕತಾರಿ ರಿಯಾಲ್ (11,392 ರೂ)
  • ಸೌದಿ ಅರೇಬಿಯಾ: 475 ಸೌದಿ ರಿಯಾಲ್ (11,238 ರುಪಾಯಿ)
  • ಓಮನ್: 49.75 ಒಮಾನಿ ರಿಯಾಲ್ (11,466 ರುಪಾಯಿ)
  • ಕುವೇತ್: 38.38 ಕುವೇತಿ ದಿನಾರ್ (11,105 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 173 ರೂ
  • ಚೆನ್ನೈ: 180 ರೂ
  • ಮುಂಬೈ: 173 ರೂ
  • ದೆಹಲಿ: 173 ರೂ
  • ಕೋಲ್ಕತಾ: 173 ರೂ
  • ಕೇರಳ: 183 ರೂ
  • ಅಹ್ಮದಾಬಾದ್: 173 ರೂ
  • ಜೈಪುರ್: 173 ರೂ
  • ಲಕ್ನೋ: 173 ರೂ
  • ಭುವನೇಶ್ವರ್: 183 ರೂ
  • ಪುಣೆ: 173

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ