Gold Prices: ಚಿನ್ನದ ಬೆಲೆಯಲ್ಲಿ ಅಲ್ಪ ವ್ಯತ್ಯಯ, ಬೆಳ್ಳಿ ಯಥಾಸ್ಥಿತಿ; ದುಬೈನಲ್ಲಿ 50,000 ಗಡಿ ಇಳಿಯುವ, ಮಲೇಷ್ಯಾದಲ್ಲಿ 53,000 ಗಡಿ ದಾಟುವ ಸೂಚನೆ; ಇವತ್ತಿನ ಚಿನ್ನದ ಬೆಲೆಗಳೆಷ್ಟು

|

Updated on: Apr 17, 2023 | 5:02 AM

Bullion Market 2023, April 17th: ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,940 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,030 ರುಪಾಯಿ ಆಗಿದೆ. ಬೆಳ್ಳಿ ಬೆಲೆ ನಿನ್ನೆಯ ದರದಲ್ಲಿ ಯಥಾಸ್ಥಿತಿಯಲ್ಲಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Prices: ಚಿನ್ನದ ಬೆಲೆಯಲ್ಲಿ ಅಲ್ಪ ವ್ಯತ್ಯಯ, ಬೆಳ್ಳಿ ಯಥಾಸ್ಥಿತಿ; ದುಬೈನಲ್ಲಿ 50,000 ಗಡಿ ಇಳಿಯುವ, ಮಲೇಷ್ಯಾದಲ್ಲಿ 53,000 ಗಡಿ ದಾಟುವ ಸೂಚನೆ; ಇವತ್ತಿನ ಚಿನ್ನದ ಬೆಲೆಗಳೆಷ್ಟು
ಚಿನ್ನ
Follow us on

ಬೆಂಗಳೂರು: ಚಿನ್ನದ ಬೆಲೆ ಆರಕ್ಕೇರಿ ಮೂರಕ್ಕಿಳಿಯುವ ಆಟ ಇತ್ತೀಚಿನ ಕೆಲ ವಾರಗಳಿಂದ ಹೆಚ್ಚಾಗುತ್ತಿದೆ. ಇತ್ತೀಚೆಗೆ ನೂರು ಗ್ರಾಮ್​ಗೆ ಐದು ಸಾವಿರ ರೂನಷ್ಟು ಏರಿಕೆಯಾಗಿದ್ದ ಚಿನ್ನದ ಬೆಲೆ (Gold Rates) ಇದೀಗ ಭಾರತೀಯ ಚಿನಿವಾರಪೇಟೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಆದರೆ, ಇವತ್ತಿನ ಮಾರುಕಟ್ಟೆ ಟ್ರೆಂಡ್ ಪ್ರಕಾರ ಇಂದು ಚಿನ್ನದ ಬೆಲೆ ಮತ್ತೆ ಏರಬಹುದು. ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ 10 ರುಪಾಯಿಯಷ್ಟು ಇಳಿಕೆ ಆಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,940 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,030 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,850 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,990 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,150 ರುಪಾಯಿಯಲ್ಲಿ ಇದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರುವ ಸಾಧ್ಯತೆ ಇದೆ.

ಚಿನ್ನದ ಬೆಲೆ ಏರಿಳಿತಕ್ಕೆ ಏನು ಕಾರಣ?

ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ತುಟ್ಟಿಯಾಗುತ್ತಾ ಹೋಗಬಹುದು.

ಇದನ್ನೂ ಓದಿForex: ಭಾರತದ ಫೋರೆಕ್ಸ್ ನಿಧಿ 48 ಲಕ್ಷ ಕೋಟಿಗೆ ಏರಿಕೆ; ಆರ್ಥಿಕತೆ ಶೇ. 7ರಷ್ಟು ವೃದ್ಧಿ ಎಂದು ಹಣಕಾಸು ಸಚಿವೆ ನಿರೀಕ್ಷೆ

ಭಾರತದಲ್ಲಿರುವ ಬೆಲೆ (ಏಪ್ರಿಲ್ 17ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,940 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,030 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 785 ರೂ

ಬೆಂಗಳೂರಿನಲ್ಲಿರುವ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,990 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,080 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 815 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 55,990 ರೂ
  • ಚೆನ್ನೈ: 56,500 ರೂ
  • ಮುಂಬೈ: 55,940 ರೂ
  • ದೆಹಲಿ: 56,090 ರೂ
  • ಕೋಲ್ಕತಾ: 55,940 ರೂ
  • ಕೇರಳ: 55,940 ರೂ
  • ಅಹ್ಮದಾಬಾದ್: 55,990 ರೂ
  • ಜೈಪುರ್: 56,090 ರೂ
  • ಲಕ್ನೋ: 56,090 ರೂ
  • ಭುವನೇಶ್ವರ್: 55,940 ರೂ

ಇದನ್ನೂ ಓದಿMilk Industry: ಕ್ಷೀರೋದ್ಯಮಕ್ಕೆ ಎಫ್​ಟಿಎ ಬೇಕೆ? ಆಮದು ಉತ್ಪನ್ನ ಜೊತೆ ಸ್ಪರ್ಧಿಸದಿದ್ದರೆ ರಫ್ತು ಹೇಗೆ ಸಾಧ್ಯ? ಹೆಚ್ಚುವರಿ ಹಾಲು ಏನು ಮಾಡುವುದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,850 ರಿಂಗಿಟ್ (52,989 ರುಪಾಯಿ)
  • ದುಬೈ: 2247.50 ಡಿರಾಮ್ (50,091 ರುಪಾಯಿ)
  • ಅಮೆರಿಕ: 615 ಡಾಲರ್ (50,334 ರುಪಾಯಿ)
  • ಸಿಂಗಾಪುರ: 829 ಸಿಂಗಾಪುರ್ ಡಾಲರ್ (50,999 ರುಪಾಯಿ)
  • ಕತಾರ್: 2,310 ಕತಾರಿ ರಿಯಾಲ್ (51,926 ರೂ)
  • ಓಮನ್: 244.50 ಒಮಾನಿ ರಿಯಾಲ್ (52,475 ರುಪಾಯಿ)
  • ಕುವೇತ್: 191 ಕುವೇತಿ ದಿನಾರ್ (51,382 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,150 ರೂ
  • ಚೆನ್ನೈ: 8,150 ರೂ
  • ಮುಂಬೈ: 7,850 ರೂ
  • ದೆಹಲಿ: 7,850 ರೂ
  • ಕೋಲ್ಕತಾ: 7,850 ರೂ
  • ಕೇರಳ: 8,150 ರೂ
  • ಅಹ್ಮದಾಬಾದ್: 7,850 ರೂ
  • ಜೈಪುರ್: 7,850 ರೂ
  • ಲಕ್ನೋ: 7,960 ರೂ
  • ಭುವನೇಶ್ವರ್: 8,150 ರೂ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ