ಚಿನ್ನ
ಬೆಂಗಳೂರು: ಭಾರತ ಹಾಗೂ ವಿದೇಶೀ ಚಿನಿವಾರ ಮಾರುಕಟ್ಟೆಗಳಲ್ಲಿ (Bullion Market) ಚಿನ್ನ ಮತ್ತು ಬೆಳ್ಳಿ ಏರಿಳಿಕೆ ಮುಂದುವರಿದಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ ಮತ್ತೊಮ್ಮೆ 56,000 ರೂ ಮಟ್ಟಕ್ಕಿಂತ ಕೆಳಗಿಳಿದಿದೆ. ಅಪರಂಜಿ ಚಿನ್ನವೂ 61,000 ರೂ ಮಟ್ಟಕ್ಕಿಂತ ಕೆಳಗಿಳಿದಿದೆ. ಬೆಳ್ಳಿ ಬೆಲೆಯಲ್ಲೂ (Silver Price) ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,750 ರುಪಾಯಿ ಆಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,690 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,040 ರುಪಾಯಿಯಲ್ಲಿ ಇದೆ.
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರುವ ಸಾಧ್ಯತೆ ಇದೆ.
ಚಿನ್ನದ ಬೆಲೆ ಏರಿಳಿತಕ್ಕೆ ಏನು ಕಾರಣ?
ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ತುಟ್ಟಿಯಾಗುತ್ತಾ ಹೋಗಬಹುದು. ಒಂದು ಅಂದಾಜು ಪ್ರಕಾರ ಇನ್ನೊಂದು ವರ್ಷದಲ್ಲಿ 24ಕ್ಯಾರಟ್ನ 10 ಗ್ರಾಮ್ ಅಪರಂಜಿ ಚಿನ್ನದ ಬೆಲೆ ಭಾರತದಲ್ಲಿ 70,000 ರೂ ಮಟ್ಟಕ್ಕೆ ಹೋಗಬಹುದು.
ಇದನ್ನೂ ಓದಿ: Gold Prediction: ಇನ್ನೊಂದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಾಗುತ್ತದೆ? ನಿಮ್ಮ ಹಣ ಎಷ್ಟು ಬೆಳೆಯುತ್ತದೆ? ಇಲ್ಲಿದೆ ಡೀಟೇಲ್ಸ್
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 24ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,820 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 769 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,800 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,870 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 804 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,800 ರೂ
- ಚೆನ್ನೈ: 56,050 ರೂ
- ಮುಂಬೈ: 55,750 ರೂ
- ದೆಹಲಿ: 55,900 ರೂ
- ಕೋಲ್ಕತಾ: 55,750 ರೂ
- ಕೇರಳ: 55,750 ರೂ
- ಅಹ್ಮದಾಬಾದ್: 55,800 ರೂ
- ಜೈಪುರ್: 55,900 ರೂ
- ಲಕ್ನೋ: 55,900 ರೂ
- ಭುವನೇಶ್ವರ್: 55,750 ರೂ
ಇದನ್ನೂ ಓದಿ: Share Market: ಷೇರುಪೇಟೆಯ ಟಾಪ್10 ಕಂಪನಿಗಳಲ್ಲಿ ಲಾಭ ಮಾಡಿದ್ದು ಎರಡೆಯಾ? ಷೇರುದಾರರಿಗೆ ಒಂದು ವಾರದಲ್ಲಿ 1.17 ಲಕ್ಷ ಕೋಟಿ ಹಣ ನಷ್ಟ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,840 ರಿಂಗಿಟ್ (52,500 ರುಪಾಯಿ)
- ದುಬೈ: 2225 ಡಿರಾಮ್ (49,708 ರುಪಾಯಿ)
- ಅಮೆರಿಕ: 610 ಡಾಲರ್ (50,044 ರುಪಾಯಿ)
- ಸಿಂಗಾಪುರ: 824 ಸಿಂಗಾಪುರ್ ಡಾಲರ್ (50,634 ರುಪಾಯಿ)
- ಕತಾರ್: 2,290 ಕತಾರಿ ರಿಯಾಲ್ (51,606 ರೂ)
- ಓಮನ್: 242.50 ಒಮಾನಿ ರಿಯಾಲ್ (51,675 ರುಪಾಯಿ)
- ಕುವೇತ್: 190 ಕುವೇತಿ ದಿನಾರ್ (50,869 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,040 ರೂ
- ಚೆನ್ನೈ: 8,040 ರೂ
- ಮುಂಬೈ: 7,690 ರೂ
- ದೆಹಲಿ: 7,690 ರೂ
- ಕೋಲ್ಕತಾ: 7,690 ರೂ
- ಕೇರಳ: 8,040 ರೂ
- ಅಹ್ಮದಾಬಾದ್: 7,690 ರೂ
- ಜೈಪುರ್: 7,690 ರೂ
- ಲಕ್ನೋ: 7,690 ರೂ
- ಭುವನೇಶ್ವರ್: 8,040 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ