Gold Prices: ಭಾರತದಲ್ಲಿ ಲಗಾಮಿಲ್ಲದೇ ಏರುತ್ತಿರುವ ಚಿನ್ನದ ದರ; ದೇಶ ವಿದೇಶಗಳಲ್ಲಿ ಇವತ್ತಿನ ಬೆಲೆ ಎಷ್ಟಿದೆ? ಚಿನ್ನದ ಬೆಲೆ ಇಳಿಯಲ್ವಾ?

Bullion Market 2023, April 6th: ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,250 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,360 ರುಪಾಯಿ ಆಗಿದೆ. ಬೆಳ್ಳಿ ಬೆಲೆ ಇದ್ದುದರಲ್ಲಿ ಸ್ವಲ್ಪ ಸ್ಥಿರತೆ ಕಾಯ್ದುಕೊಂಡಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Prices: ಭಾರತದಲ್ಲಿ ಲಗಾಮಿಲ್ಲದೇ ಏರುತ್ತಿರುವ ಚಿನ್ನದ ದರ; ದೇಶ ವಿದೇಶಗಳಲ್ಲಿ ಇವತ್ತಿನ ಬೆಲೆ ಎಷ್ಟಿದೆ? ಚಿನ್ನದ ಬೆಲೆ ಇಳಿಯಲ್ವಾ?
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 06, 2023 | 5:00 AM

ಬೆಂಗಳೂರು: ಚಿನ್ನಕ್ಕಿರುವ ಬೇಡಿಕೆ ತಗ್ಗುವ ಲಕ್ಷಣ ಕಾಣುತ್ತಿಲ್ಲ. ಹೂಡಿಕೆದಾರರಿಗೆ ಆದ್ಯತೆಯ ತಾಣವಾಗಿ ಚಿನ್ನ ಇನ್ನೂ ನೆಲೆ ನಿಂತಿದೆ. ಪರಿಣಾಮವಾಗಿ ಚಿನ್ನದ ಬೆಲೆ (Gold Rates Today) ಗಗನಕ್ಕೇರುತ್ತಲೇ ಇದೆ. ಕಳೆದ ಎರಡು ಮೂರು ವಾರಗಳಿಂದ ನಾಲ್ಕೈದು ಸಾವಿರ ರೂಪಾಯಿಗಳಷ್ಟು ಏರಿಕೆ ಕಂಡಿದೆ ಚಿನ್ನದ ಬೆಲೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,250 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,360 ರುಪಾಯಿ ಆಗಿದೆ. ಬೆಳ್ಳಿ ಬೆಲೆ ಇದ್ದುದರಲ್ಲಿ ಸ್ವಲ್ಪ ಸ್ಥಿರತೆ ಕಾಯ್ದುಕೊಂಡಿದೆ. ಭಾರತದಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 7,709 ರುಪಾಯಿಗೆ ಏರಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 8,070 ರುಪಾಯಿಗೆ ಏರಿದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರುವ ಸಾಧ್ಯತೆ ಇದೆ.

ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಭಾರತದಲ್ಲಿಯಷ್ಟು ಚಿನ್ನದ ಬೆಲೆ ಏರಿಕೆ ವಿದೇಶಗಳಲ್ಲಿ ಆಗುತ್ತಿಲ್ಲ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಕನಿಷ್ಠ 50 ಸಾವಿರ ರೂ ಇದೆ. ಮಲೇಷ್ಯಾ, ಕತಾರ್ ಮತ್ತು ಓಮನ್​ನಲ್ಲಿ ಚಿನ್ನದ ಬೆಲೆ 52 ಸಾವಿರ ರೂಗಿಂತ ಹೆಚ್ಚಿದೆ.

ಚಿನ್ನದ ಬೆಲೆ ಏರಿಕೆಗೆ ಏನು ಕಾರಣ?

ಅಮೆರಿಕದ ಆರ್ಥಿಕತೆಯ ತುಮುಲ, ನಿರುದ್ಯೋಗ ಅಂಕಿ ಅಂಶದ ಗೊಂದಲ, ಹಣದುಬ್ಬರ ಅನಿಶ್ಚಿತತೆ, ಬಡ್ಡಿ ದರ ಬಗ್ಗೆ ಅಸ್ಪಷ್ಟತೆ, ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಹೂಡಿಕೆದಾರರನ್ನು ಚಿನ್ನದತ್ತ ಗಮನ ಕೊಡುವಂತೆ ಮಾಡಿವೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚಿ ಬೆಲೆ ಕೂಡ ಹೆಚ್ಚುತ್ತಿದೆ. ತಜ್ಞರ ಪ್ರಕಾರ ಇನ್ನೂ ಬಹಳಷ್ಟು ದಿನ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಮುಂದುವರಿಯಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎಂಬ ಸಲಹೆಯನ್ನು ಕೊಡಲಾಗಿದೆ.

ಇದನ್ನೂ ಓದಿ:

ಭಾರತದಲ್ಲಿರುವ ಬೆಲೆ (ಏಪ್ರಿಲ್ 6ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,250 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,360 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 770.90 ರೂ

ಬೆಂಗಳೂರಿನಲ್ಲಿರುವ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,300 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,410 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 807 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 56,300 ರೂ
  • ಚೆನ್ನೈ: 56,900 ರೂ
  • ಮುಂಬೈ: 56,250 ರೂ
  • ದೆಹಲಿ: 56,400 ರೂ
  • ಕೋಲ್ಕತಾ: 56,250 ರೂ
  • ಕೇರಳ: 56,250 ರೂ
  • ಅಹ್ಮದಾಬಾದ್: 56,300 ರೂ
  • ಜೈಪುರ್: 56,400 ರೂ
  • ಲಕ್ನೋ: 56,400 ರೂ
  • ಭುವನೇಶ್ವರ್: 56,250 ರೂ

ಇದನ್ನೂ ಓದಿ:

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,830 ರಿಂಗಿಟ್ (52,689 ರುಪಾಯಿ)
  • ದುಬೈ: 2270 ಡಿರಾಮ್ (50,617 ರುಪಾಯಿ)
  • ಅಮೆರಿಕ: 620 ಡಾಲರ್ (50,797 ರುಪಾಯಿ)
  • ಸಿಂಗಾಪುರ: 834 ಸಿಂಗಾಪುರ್ ಡಾಲರ್ (51,528 ರುಪಾಯಿ)
  • ಕತಾರ್: 2,330 ಕತಾರಿ ರಿಯಾಲ್ (52,409 ರೂ)
  • ಓಮನ್: 247.50 ಒಮಾನಿ ರಿಯಾಲ್ (52,653 ರುಪಾಯಿ)
  • ಕುವೇತ್: 192.50 ಕುವೇತಿ ದಿನಾರ್ (51,394 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,070 ರೂ
  • ಚೆನ್ನೈ: 8,070 ರೂ
  • ಮುಂಬೈ: 7,709 ರೂ
  • ದೆಹಲಿ: 7,709 ರೂ
  • ಕೋಲ್ಕತಾ: 7,709 ರೂ
  • ಕೇರಳ: 8,070 ರೂ
  • ಅಹ್ಮದಾಬಾದ್: 7,709 ರೂ
  • ಜೈಪುರ್: 7,709 ರೂ
  • ಲಕ್ನೋ: 7,709 ರೂ
  • ಭುವನೇಶ್ವರ್: 8,070 ರೂ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ