REPO Rate: ರೆಪೋ ದರ ಹೆಚ್ಚಿಸದಿರಲು ಆರ್​ಬಿಐ ನಿರ್ಧಾರ; ತುಸು ನಿರಾಳರಾದ ಜನಸಾಮಾನ್ಯರು

RBI Governor Shaktikanta Das Press Meet: ಶೇ. 6.50ರಷ್ಟಿರುವ ರೆಪೋ ದರವನ್ನು ಏರಿಕೆ ಮಾಡದಿರಲು ಆರ್​ಬಿಐ ನಿರ್ಧರಿಸಿದೆ. ಮೂರು ದಿನಗಳ ಆರ್​ಬಿಐ ಎಂಪಿಸಿ ಸಭೆ ಬಳಿಕ ಇಂದು ಗುರುವಾರ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ರೆಪೋ ದರ ಯಥಾಸ್ಥಿತಿ ಮುಂದುವರಿಕೆಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.

REPO Rate: ರೆಪೋ ದರ ಹೆಚ್ಚಿಸದಿರಲು ಆರ್​ಬಿಐ ನಿರ್ಧಾರ; ತುಸು ನಿರಾಳರಾದ ಜನಸಾಮಾನ್ಯರು
ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 06, 2023 | 12:47 PM

ನವದೆಹಲಿ: ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್​ಬಿಐ ನಿರ್ಧರಿಸಿದೆ. ಮೂರು ದಿನಗಳ ಆರ್​ಬಿಐ ಹಣಕಾಸು ನೀತಿ ಸಮಿತಿ (MPC- Monetary Policy Committee) ಸಭೆ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಏಪ್ರಿಲ್ 6, ಗುರುವಾರ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೋ ದರ (Repo Rate) ಶೇ. 6.50ರಲ್ಲೇ ಮುಂದುವರಿಯುತ್ತದೆ ಎಂದು ತಿಳಿಸಿದರು. ಇದರೊಂದಿಗೆ ರೆಪೋ ದರದ ಸತತ ಏರಿಕೆಯ ಸರಣಿ ತುಂಡರಿಸಿದಂತಾಗಿದೆ. ಹಣದುಬ್ಬರಕ್ಕೆ (Inflation) ಕಡಿವಾಣ ಹಾಕುವ ಉದ್ದೇಶದಿಂದ ಕಳೆದ ಒಂದು ವರ್ಷದಲ್ಲಿ ಆರ್​ಬಿಐ 250 ಬೇಸಿಸ್ ಪಾಯಿಂಟ್​ಗಳಷ್ಟು ರೆಪೋ ದರವನ್ನು ಏರಿಕೆ ಮಾಡಿತ್ತು. ಇನ್ನಷ್ಟು ಏರಿಕೆ ಆದರೆ ಆರ್ಥಿಕ ಬೆಳವಣಿಗೆಗೆ ತೊಡಕಾಗುತ್ತದೆ ಎಂದು ಹಲವು ತಜ್ಞರು ಸಲಹೆ ನೀಡಿದ್ದರು. ಆದರೆ ಆರ್​ಬಿಐ ಈ ಬಾರಿ 25 ಮೂಲಾಂಕಗಳಷ್ಟು ರೆಪೋ ದರ ಏರಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಇತ್ತು. ಆದರೆ, ಅಂತಿಮವಾಗಿ ಆರ್​ಬಿಐ ರೆಪೋ ದರ ಏರಿಸದಿರಲು ನಿರ್ಧರಿಸಿರುವುದು ಗಮನಾರ್ಹ.

ರೆಪೋ ದರ ಎಂದರೇನು?

REPO ಎಂದರೆ ರೀಪರ್ಚೇಸಿಂಗ್ ಆಪ್ಷನ್. ಅಥವಾ ಮರುಖರೀದಿ ಒಪ್ಪಂದ. ಆರ್​ಬಿಐನ ರೆಪೋ ದರ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಿಂದ ಪಡೆಯುವ ಸಾಲಕ್ಕೆ ನೀಡಬೇಕಾದ ಬಡ್ಡಿ ದರ ಇದು. ಯಾವುದೇ ಕಮರ್ಷಿಯಲ್ ಬ್ಯಾಂಕುಗಳಾದರೂ ಹಣಕಾಸು ಸಂಗ್ರಹದಲ್ಲಿ ಕೊರತೆಯಾಗುವ ಸಂದರ್ಭಗಳು ಬರುವುದುಂಟು. ಅಗ ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಿಂದ ಸಾಲ ಪಡೆದುಕೊಳ್ಳುತ್ತವೆ. ಈ ಸಾಲಕ್ಕೆ ಇರುವ ಬಡ್ಡಿ ದರವೇ ರೆಪೋ ದರ. ಸದ್ಯ ರೆಪೋ ದರ ಶೇ. 6.50ರಷ್ಟು ಇದೆ. ಅಂದರೆ, ವಾಣಿಜ್ಯ ಬ್ಯಾಂಕುಗಳು ಶೇ. 6.50ರ ಬಡ್ಡಿ ದರದಲ್ಲಿ ಅರ್​ಬಿಐನಿಂದ ಸಾಲ ಪಡೆಯಬಹುದು. ಈ ದರ ಏರಿಕೆ ಆದರೆ ವಾಣಿಜ್ಯ ಬ್ಯಾಂಕುಗಳು ಈ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತವೆ. ಆಗ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಗ್ರಾಹಕರು ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: Google Lawsuit: ಟ್ರೇಡ್​ಮಾರ್ಕ್ ದುರುಪಯೋಗ: ಗೂಗಲ್ ಎಂಟರ್ಪ್ರೈಸಸ್​ಗೆ 10 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್

ಭಾರತದಲ್ಲಿ ಹಣದುಬ್ಬರ ಶೇ. 6.44ರಷ್ಟಿದೆ. ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ತುಸು ಕಡಿಮೆ ಆಗಿದೆ. ಆದರೂ ಕೂಡ ಆರ್​ಬಿಐ ಹಾಕಿದ ಶೇ. 6ರ ಮಿತಿಗಿಂತ ಮೇಲೆಯೇ ಇದೆ. ಕಳೆದ ಕೆಲ ತಿಂಗಳಿಂದಲೂ ಹಣದುಬ್ಬರವು ಈ ಮಿತಿಗಿಂತ ಹೊರಗೆಯೇ ಇರುವುದು ತಲೆನೋವು ತಂದಿದೆ. ಹೀಗಾಗಿ, ಇದು ಶೇ. 6ರ ಮಟ್ಟಕ್ಕಿಂತ ಕೆಳಗೆ ಇಳಿಯುವವರೆಗೂ ಬಡ್ಡಿ ದರವನ್ನು ಹೆಚ್ಚಿಸುವ ಕ್ರಮಕ್ಕೆ ಆರ್​ಬಿಐ ಮುಂದಾಗಿದೆ. ಆರ್​ಬಿಐ ಮಾತ್ರವಲ್ಲ ವಿಶ್ವದ ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಕೂಡ ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿ ದರ ಏರಿಕೆಯ ಅಸ್ತ್ರವನ್ನೇ ಬಳಸುತ್ತವೆ. ಆರ್​ಬಿಐ ಈ ಬಾರಿ 25 ಮೂಲಾಂಕಗಳಷ್ಟು, ಅಂದರೆ ಶೇ. 6.75ಕ್ಕೆ ರೆಪೋ ದರ ಏರಿಸಿ, ಬಳಿಕ ಈ ವರ್ಷ ಪೂರ್ತಿ ಏರಿಕೆಗೆ ವಿರಾಮ ಹಾಕಬಹುದು ಎಂಬ ಅಭಿಪ್ರಾಯಗಳಿದ್ದವು. ಆದರೆ, ಈ ಬಾರಿ ಆರ್​ಬಿಐ ರೆಪೋ ದರ ಹೆಚ್ಚಿಸದಿರಲು ನಿರ್ಧರಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಹಣದುಬ್ಬರಕ್ಕೆ ಕಡಿವಾಣ ಬೀಳದಿದ್ದರೆ ರೆಪೋ ದರ ಏರಿಕೆಗೆ ಮುಂದಾಗುವುದಾಗಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುಳಿವು ನೀಡಿದ್ದಾರೆ.

ಇನ್ನು ರೆಪೋ ದರದಲ್ಲಿ ಯಥಾಸ್ಥಿತಿ ಮುಂದುವರಿಸಲು ಆರ್​ಬಿಐ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಸರ್ಕಾರಿ ಬಾಂಡ್​ನ ಮೌಲ್ಯ ಕುಸಿದಿದೆ. ಶೇ. 7.2857ರಷ್ಟಿದ್ದ ಬಾಂಡ್ ಯೀಲ್ಡ್ ಶೇ. 7.1469ಕ್ಕೆ ಇಳಿದಿದೆ. ಇಲ್ಲಿ ಬಾಂಡ್ ಯೀಲ್ಡ್ (Bond Yield) ಎಂದರೆ ಹೂಡಿಕೆಗೆ ಪ್ರತಿಯಾಗಿ ಸಿಗುವ ರಿಟರ್ನ್. ಇಲ್ಲಿ ಬಾಂಡ್ ಮೌಲ್ಯ ಹೆಚ್ಚಿದಷ್ಟೂ ಅದರ ಯೀಲ್ಡ್ ಕಡಿಮೆ ಆಗುತ್ತದೆ.

ಹಣದುಬ್ಬರ ಶೇ. 5.2ಕ್ಕೆ ತಗ್ಗುವ ನಿರೀಕ್ಷೆಯಲ್ಲಿ ಆರ್​ಬಿಐ

2023-24ರ ಹಣಕಾಸು ವರ್ಷದಲ್ಲಿ ಗ್ರಾಹಕ ಬೆಲೆ ಅನುಸೂಚಿ (ಸಿಪಿಐ) ಹಣದುಬ್ಬರವು ಶೇ. 5.2ಕ್ಕೆ ಇಳಿಯಬಹುದು ಎಂದು ಆರ್​ಬಿಐ ಅಂದಾಜು ಮಾಡಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಾದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಸಿಪಿಐ ಇನ್​ಫ್ಲೇಶನ್ ಶೇ. 5.1ರಷ್ಟು ಇರಬಹುದು ಎಂದೂ ಅದು ಹೇಳಿದೆ. ಈ ಹಿಂದೆ 2023-24ರ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರ ಶೇ. 5.3ರಷ್ಟು ಇರಬಹುದು ಎಂದು ಆರ್​ಬಿಐ ಅಂದಾಜು ಮಾಡಿತ್ತು. ಈಗ ಈ ಹಣದುಬ್ಬರ ಇನ್ನಷ್ಟು ಕಡಿಮೆ ಆಗಬಹುದು ಎಂದು ತನ್ನ ನಿಲುವನ್ನು ಬದಲಿಸಿದೆ.

ಇದನ್ನೂ ಓದಿ: ಅಪಾಯದಲ್ಲಿದೆ ಡಾಲರ್ ಭವಿಷ್ಯ: ನಮಗೆ ತಿಳಿದಿರಬೇಕಾದ ಅಂಶಗಳು

ಭಾರತದ ಜಿಡಿಪಿ ಈ ವರ್ಷ ಶೇ. 6.50 ಎಂದು ಆರ್​ಬಿಐ ಅಂದಾಜು

ಇದೇ ವೇಳೆ, ಏಪ್ರಿಲ್ 4ರಿಂದ ನಡೆದ 3 ದಿನಗಳ ಕಾಲ ಸಭೆ ನಡೆಸಿದ ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಆರು ಸದಸ್ಯರಿದ್ದರು. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಬಹುದಾದ ಸಂಗತಿಗಳು, ಹಣದುಬ್ಬರಕ್ಕೆ ಕಡಿವಾಣ ಹಾಕಲು ತೆಗೆದುಕೊಳ್ಳಬಹುದಾದ ಕ್ರಮಗಳು ಇತ್ಯಾದಿ ಎಲ್ಲವನ್ನೂ ಚರ್ಚಿಸಲಾಗಿತ್ತು. ಈ ಸಭೆಯಲ್ಲಿ ಚರ್ಚೆಯಾದ ಸಂಗತಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಕ್ತಿಕಾಂತ ದಾಸ್ ಒಂದಷ್ಟು ಮಾಹಿತಿ ಹಂಚಿಕೊಂಡರು.

2023ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ. 6.5ರಷ್ಟು ಇರಬಹುದು ಎಂದು ಆರ್​ಬಿಐ ಗವರ್ನರ್ ಹೇಳಿದ್ದಾರೆ. ಮೊದಲ ಕ್ವಾರ್ಟರ್​ನಲ್ಲಿ ಶೇ. 7.8, ಎರಡನೇ ಕ್ವಾರ್ಟರ್​ನಲ್ಲಿ ಶೇ. 6.2, ಮೂರನೇ ಕ್ವಾರ್ಟರ್​ನಲ್ಲಿ ಶೇ. 6.1 ಮತ್ತು ನಾಲ್ಕನೇ ಕ್ವಾರ್ಟರ್​ನಲ್ಲಿ ಶೇ. 5.9ರಷ್ಟು ಆರ್ಥಿಕ ಬೆಳವಣಿಗೆ ಆಗಬಹುದು ಎಂದು ಆರ್​ಬಿಐ ನಿರೀಕ್ಷಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Thu, 6 April 23

ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್