AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Lawsuit: ಟ್ರೇಡ್​ಮಾರ್ಕ್ ದುರುಪಯೋಗ: ಗೂಗಲ್ ಎಂಟರ್ಪ್ರೈಸಸ್​ಗೆ 10 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್

Delhi High Court Order: ಗೂಗಲ್ ಸಂಸ್ಥೆಯ ಹೆಸರು ಮತ್ತು ಟ್ರೇಡ್​ಮಾರ್ಕ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಗೂಗಲ್ ಎಂಟರ್​ಪ್ರೈಸಸ್ ಮತ್ತಿತರ ಕೆಲ ಸಂಸ್ಥೆಗಳ ಮೇಲೆ ದೆಹಲಿ ಹೈಕೋರ್ಟ್ 10 ಲಕ್ಷ ರೂ ದಂಡ ವಿಧಿಸಿದೆ.

Google Lawsuit: ಟ್ರೇಡ್​ಮಾರ್ಕ್ ದುರುಪಯೋಗ: ಗೂಗಲ್ ಎಂಟರ್ಪ್ರೈಸಸ್​ಗೆ 10 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್
ಗೂಗಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 05, 2023 | 5:26 PM

ನವದೆಹಲಿ: ವಿಶ್ವದ ಟೆಕ್ನಾಲಜಿ ದೈತ್ಯ ಕಂಪನಿ ಗೂಗಲ್​ನ (Google LLC) ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಗೂಗಲ್ ಎಂಟರ್ಪ್ರೈಸಸ್ ಪ್ರೈ ಲಿ ಎಂಬ ಕನ್ಸಲ್ಟೆನ್ಸಿ ಸಂಸ್ಥೆ ಮತ್ತದರ ಅಂಗ ಸಂಸ್ಥೆಗಳ ಮೇಲೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ. ಗೂಗಲ್ ಎಂಟರ್​ಪ್ರೈಸಸ್ ಸಂಸ್ಥೆಗೂ ಗೂಗಲ್ ಎಲ್​ಎಲ್​ಸಿಗೂ ಯಾವುದೇ ಸಂಬಂಧ ಇಲ್ಲ. ತಾನು ಗೂಗಲ್​ನ ಭಾಗ ಎಂದು ಬಿಂಬಿಸಿಕೊಂಡು, ಅದರ ಟ್ರೇಡ್​ಮಾರ್ಕನ್ನು ಬಳಸಿಕೊಂಡು ಗೂಗಲ್ ಎಂಟರ್ಪ್ರೈಸಸ್ ವಂಚನೆ ಎಸಗುತ್ತಿತ್ತು ಎಂಬುದು ಆರೋಪ. ಈ ಬಗ್ಗೆ ಗೂಗಲ್ ಎಲ್​ಎಲ್​ಸಿ ಕಾನೂನು ಮೊಕದ್ದಮೆ ಹಾಕಿತ್ತು. ದೆಹಲಿ ಹೈಕೊರ್ಟ್​ನಲ್ಲಿ ವಿಚಾರಣೆ ನಡೆದು, ಗೂಗಲ್ ಎಂಟರ್​ಪ್ರೈಸಸ್ ಮೇಲಿನ ಆರೋಪ ನಿಜವೆಂದು ಸಾಬೀತಾಯಿತು. ಟ್ರೇಡ್​ಮಾರ್ಕ್ ದುರುಪಯೋಗದಿಂದ ಗೂಗಲ್ ಎಲ್​ಎಲ್​ಸಿಗೆ ಹಾನಿ ಆಗಿರುವ ಹಿನ್ನೆಲೆಯಲ್ಲಿ 10 ಲಕ್ಷ ರೂ ಪರಿಹಾರ ಕೊಡಬೇಕು ಎಂದು ದೆಹಲಿ ಹೈಕೋರ್ಟ್ ಗೂಗಲ್ ಎಂಟರ್​ಪ್ರೈಸಸ್ ಹಾಗೂ ಅದರ ಅಂಗಸಂಸ್ಥೆಗಳಿಗೆ ಆದೇಶ ಹೊರಡಿಸಿತು.

ಹಾಗೆಯೇ, ಗೂಗಲ್ ಡೊಮೈನ್ ಹೆಸರಲ್ಲಿ ರಚಿಸಲಾಗಿರುವ ಗೂಗಲ್ ಎಂಟರ್ಪ್ರೈಸಸ್ ವೆಬ್​ಸೈಟ್ ಪ್ರಕಟವಾಗದಂತೆ ತಡೆಹಿಡಿಯಬೇಕೆಂದು ಎಲ್ಲಾ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್​ಗಳು (ಐಎಸ್​ಪಿ) ಮತ್ತು ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ಹೊರಡಿಸುವಂತೆ ದೂರಸಂಪರ್ಕ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ.

ಗೂಗಲ್ ಹೆಸರಲ್ಲಿ ಹಣ ವಂಚನೆ ಹೇಗೆ?

ದೆಹಲಿ ಹೈಕೋರ್ಟ್​ನಲ್ಲಿ ಗೂಗಲ್ ಎಲ್​ಎಲ್​ಸಿ ಹಾಕಲಾಗಿದ್ದ ಕಾನೂನು ಮೊಕದ್ದಮೆಯಲ್ಲಿ, ಆರೋಪಿ ಸಂಸ್ಥೆಗಳು ಯಾವ ರೀತಿ ವಂಚನೆ ಎಸಗುತ್ತಿದ್ದವು ಎಂಬ ಕುತೂಹಲಕಾರಿ ಮಾಹಿತಿ ಇದೆ. ಕೋರ್ಟ್ ಕೂಡ ಈ ವಿಚಾರವನ್ನು ಎತ್ತಿ ತೋರಿಸಿದೆ.

ಇದನ್ನೂ ಓದಿToll Rates: ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ತೆರಿಗೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ

ಮೊದಲ ಆರೋಪಿ ಎನಿಸಿರುವ ಸಂಸ್ಥೆಯಲ್ಲಿ (ಗೂಗಲ್ ಎಂಟರ್​ಪ್ರೈಸಸ್) ಹಣ ಠೇವಣಿ ಇರಿಸಿದರೆ ಅರ್ಜಿದಾರರಿಗೆ (ಗೂಗಲ್ ಎಲ್​ಎಲ್​ಸಿ) ಜೋಡಿತವಾದ ಸಂಸ್ಥೆಯಲ್ಲಿ ಉದ್ಯೋಗ ಹೊಂದಬಹುದು ಎಂದು ಸಾರ್ವಜನಿಕರನ್ನು ನಂಬಿಸುವುದು ಆರೋಪಿ ಸಂಸ್ಥೆಗಳ ಕಾರ್ಯತಂತ್ರವಾಗಿತ್ತು ಎಂದು ದೆಹಲಿ ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ನ್ಯಾ| ಸಂಜೀವ್ ನರುಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ತಿಂಗಳು ಈ ತೀರ್ಪು ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿ ಗೂಗಲ್ ಎಂಟರ್​ಪ್ರೈಸಸ್ ಪ್ರೈ ಲಿ ಸಂಸ್ಥೆ ಆರೋಪಿ ನಂಬರ್ ಒನ್ ಆಗಿತ್ತು. ಇ ಕುಟಿರ್ ಟೆಕ್ನಾಲಜಿ ಮತ್ತು ಎಕ್ಸ್​ಟೆನ್ಷನ್ ಮ್ಯಾನೇಜ್ಮೆಂಟ್ ಲಿ ಮತ್ತರದ ನಿರ್ದೇಶಕ ಚಂದರ್ ಶೇಖರ್ ಅವರು ಎರಡು ಮತ್ತು ಮೂರನೇ ಆರೋಪಿಗಳೆನಿಸಿದ್ದರು. 2011ರಲ್ಲಿ ಡೆಸ್ಕ್ ಜಾಬ್​ಗಳಿಗೆ ಗೂಗಲ್ ಇಂಡಿಯಾ ಮತ್ತು ಈ ಆರೋಪಿ ಸಂಸ್ಥೆಗಳ ಮಧ್ಯೆ ಸಹಕಾರ ಒಪ್ಪಂದ ಆಗಿದೆ ಎನ್ನುವಂತಹ ಸುದ್ದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಗೂಗಲ್ ಎಲ್​ಎಲ್​ಸಿ ಕೋರ್ಟ್ ಮೆಟ್ಟಿಲೇರಿತ್ತು. ಇ ಕುಟಿರ್ ಟೆಕ್ನಾಲಜಿ ಈಗಲೂ ಕೂಡ ತಾನು ಗೂಗಲ್ ಮತ್ತು ಟಾಟಾ ಕಮ್ಯೂನಿಕೇಶನ್ಸ್ ಸಂಸ್ಥೆಗಳಿಗೆ ಚಾನಲ್ ಪಾರ್ಟ್ನರ್ ಎಂದು ತನ್ನ ಟ್ವಿಟ್ಟರ್ ಪ್ರೊಫೈಲ್​ನಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿSBI WECARE: ಎಸ್​ಬಿಐ ವೀ ಕೇರ್ ಸ್ಕೀಮ್; ಕೊನೆಯ ದಿನಾಂಕ ಮತ್ತೆ 3 ತಿಂಗಳು ವಿಸ್ತರಣೆ; ಏನಿದು ಯೋಜನೆ?

ಮೂರು ಆರೋಪಿ ಸಂಸ್ಥೆಗಳು ಗೂಗಲ್​ನ ಟ್ರೇಡ್​ಮಾರ್ಕ್​ಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ನಂಬಿಸುವ ಕೆಲಸ ಮಾಡಿದ್ದವು. ಗೂಗಲ್ ಎಂಟರ್ಪ್ರೈಸಸ್​ನ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಗೂಗಲ್ ಜೊತೆ ಜೋಡಿತವಾದ ಸಂಸ್ಥೆಯಲ್ಲಿ ಉದ್ಯೋಗ ಸಿಗುತ್ತದೆ ಎಂದು ಭರವಸೆ ನೀಡಿದ್ದವು. ಇದನ್ನು ನಂಬಿ ಹಲವು ಸಾರ್ವಜನಿಕರು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಗೂಗಲ್ ಎಂಟರ್ಪ್ರೈಸಸ್ ಮತ್ತಿತರ ಆರೋಪಿ ಸಂಸ್ಥೆಗಳು ಈ ಆರೋಪ ಆಧಾರರಹಿತ ಎಂದು ತಳ್ಳಿಹಾಕಿದರೂ, ಈ ಸಂಸ್ಥೆಗಳ ವೆಬ್​ಸೈಟ್​ಗಳಲ್ಲಿ ಗೂಗಲ್​ನ ಟ್ರೇಡ್​ಮಾರ್ಕ್​ಗಳನ್ನು ಬಳಸಿರುವುದು ನಿಚ್ಚಲವಾಗಿತ್ತು. ಇದೇ ಪ್ರಮುಖ ಸಾಕ್ಷ್ಯಾಧಾರವಾಗಿದ್ದರಿಂದ ದೆಹಲಿ ಹೈಕೋರ್ಟ್ ಈ ಆರೋಪಿ ಸಂಸ್ಥೆಗಳಿಗೆ 10 ಲಕ್ಷ ರೂ ದಂಡ ವಿಧಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ