AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI WECARE: ಎಸ್​ಬಿಐ ವೀ ಕೇರ್ ಸ್ಕೀಮ್; ಕೊನೆಯ ದಿನಾಂಕ ಮತ್ತೆ 3 ತಿಂಗಳು ವಿಸ್ತರಣೆ; ಏನಿದು ಯೋಜನೆ?

Senior Citizens Scheme in SBI: ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ಎಸ್​ಬಿಐನ ವೀಕೇರ್ ಎಫ್​ಡಿ ಸ್ಕೀಮ್ ಪಡೆಯುವ ಕೊನೆಯ ದಿನವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಹೆಚ್ಚುವರಿ ಬಡ್ಡಿ ಕೊಡುವ ಈ ಸ್ಕೀಮ್​ಗೆ ಒಳ್ಳೆಯ ಬೇಡಿಕೆ ಇದೆ.

SBI WECARE: ಎಸ್​ಬಿಐ ವೀ ಕೇರ್ ಸ್ಕೀಮ್; ಕೊನೆಯ ದಿನಾಂಕ ಮತ್ತೆ 3 ತಿಂಗಳು ವಿಸ್ತರಣೆ; ಏನಿದು ಯೋಜನೆ?
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 05, 2023 | 1:55 PM

Share

ಮುಖ್ಯಾಂಶಗಳು

  • ಎಸ್​ಬಿಐನ ವೀ ಕೇರ್ ಸ್ಕೀಮ್ ಹಿರಿಯ ನಾಗರಿಕರಿಗೆಂದು ರೂಪಿಸಿರುವ ವಿಶೇಷ ಫಿಕ್ಸೆಡ್ ಡೆಪಾಸಿಟ್ ಯೋಜನೆಯಾಗಿದೆ. ಶೇ. 7.5ರಷ್ಟು ಬಡ್ಡಿ ಕೊಡುವ ಸ್ಕೀಮ್ ಇದು.
  • 2-3 ವರ್ಷ ಮತ್ತು 5-10ವರ್ಷ ಅವಧಿಯ ನಿಶ್ಚಿತ ಠೇವಣಿಗಳಿಗೆ ಎಸ್​ಬಿಐ ವೀಕೇರ್ ಸ್ಕೀಮ್​ನಲ್ಲಿ ಗರಿಷ್ಠ ಬಡ್ಡಿ ಸಿಗುತ್ತದೆ.
  • ಎಸ್​ಬಿಐನ ವೀ ಕೇರ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ನಲ್ಲಿ ಇರಿಸುವ ಠೇವಣಿಯ ಆಧಾರದ ಮೇಲೆ ಸಾಲ ಸೌಲಭ್ಯ ಕೂಡ ಸಿಗುತ್ತದೆ.

ನವದೆಹಲಿ: ಎಸ್​ಬಿಐನ ನಿಶ್ಚಿತ ಠೇವಣಿ ಯೋಜನೆಗಳಲ್ಲಿ ಜನಪ್ರಿಯ ಎನಿಸಿರುವ ವೀ ಕೇರ್ ಸ್ಕೀಮ್​ನ (SBI We Care FD Scheme) ಅಂತಿಮ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. 2020 ಮೇ ತಿಂಗಳಲ್ಲಿ ಶುರುವಾದ ಈ ವಿಶೇಷ ಎಫ್​ಡಿ ಸ್ಕೀಮ್ ಹೊಂದಲು 2023 ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು. ಈಗ ಅದನ್ನು ಜೂನ್ 30ರವರೆಗೂ ವಿಸ್ತರಿಸಲಾಗಿದೆ. ಸತತವಾಗಿ ಗಡುವು ವಿಸ್ತರಣೆ ಆಗುತ್ತಾ ಬಂದಿರುವ ಅಪರೂಪದ ವಿಶೇಷ ಸ್ಕೀಮ್​ಗಳಲ್ಲಿ ಎಸ್​ಬಿಐನ ವೀಕೇರ್ ಯೋಜನೆಯೂ ಒಂದು. ಹೆಚ್ಚುವರಿ ಬಡ್ಡಿ ಕೊಡುವ ಎಸ್​ಬಿಐ ವೀ ಕೇರ್ ಎಫ್​ಡಿ ಡೆಪಾಸಿಟ್​​ಗಳಿಗೆ ಬೇಡಿಕೆ ಹೆಚ್ಚಿದೆ. ಹಿರಿಯ ನಾಗರಿಕರಿಗೆಂದು ರೂಪಿಸಿರುವ ಸ್ಪೆಷಲ್ ಡೆಪಾಸಿಟ್ ಸ್ಕೀಮ್ ಇದು. ಇದೇ ವೇಳೆ ಐಸಿಐಸಿಐ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ ರೂಪಿಸಿರುವ ವಿಶೇಷ ಎಫ್​ಡಿ ಸ್ಕೀಮ್​ನ ಗಡುವು ಏಪ್ರಿಲ್ 6ಕ್ಕೆ ಮುಗಿಯುತ್ತದೆ.

ಏನಿದು ಎಸ್​ಬಿಐ ವೀ ಕೇರ್ ಎಫ್​ಡಿ ಸ್ಕೀಮ್?

ಹಿರಿಯ ನಾಗರಿಕರಿಗೆಂದು ಎಸ್​ಬಿಐ ಬ್ಯಾಂಕ್ ರೂಪಿಸಿರುವ ವಿಶೇಷ ಸ್ಕೀಮ್ ಇದು. ಗರಿಷ್ಠ 2 ಕೋಟಿ ರೂ ವರೆಗೂ ಹಣವನ್ನು ನಿಶ್ಚಿತ ಠೇವಣಿಯಾಗಿ ಈ ಸ್ಕೀಮ್ ಅಡಿಯಲ್ಲಿ ಇಡಬಹುದು. 7 ದಿನಗಳಿಂದ ಆರಂಭವಾಗಿ 10 ವರ್ಷಗಳವರೆಗೂ ವಿವಿಧ ಅವಧಿಯ ಸ್ಕೀಮ್​ಗಳು ಲಭ್ಯ ಇವೆ. 2-3 ವರ್ಷ ಮತ್ತು 5ರಿಂದ 10 ವರ್ಷದವರೆಗಿನ ಅವಧಿಯ ಠೇವಣಿಗಳಿಗೆ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಇತರ ಅವಧಿಯ ಠೇವಣಿಗಳಿಗೆ ಕಡಿಮೆ ಬಡ್ಡಿ ದೊರಕುತ್ತದೆ.

ಇದನ್ನೂ ಓದಿ: MSSC 2023: ಮಹಿಳೆಯರು, ಹುಡುಗಿಯರಿಗಾಗಿ ಕೇಂದ್ರದಿಂದ ಹೊಸ ಉಳಿತಾಯ ಖಾತೆ: ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಷ್ಟೂ ಮಾಹಿತಿ ಇಲ್ಲಿದೆ

ಎಸ್​ಬಿಐನಲ್ಲಿ ಹಿರಿಯ ನಾಗರಿಕರ ಎಫ್​ಡಿ ದರಗಳು

7ರಿಂದ 45 ದಿನಗಳ ಎಫ್​ಡಿ ದರ: ಶೇ. 3.5

46ದಿನದಿಂದ 179 ದಿನಗಳ ಅವಧಿಯ ಎಫ್​ಡಿ ದರ: ಶೇ. 5

180 ದಿನದಿಂದ 210 ದಿನಗಳ ಅವಧಿಯ ಎಫ್​ಡಿ ದರ: ಶೇ. 5.75

211 ದಿನದಿಂದ 1 ವರ್ಷ ಅವಧಿಯ ಎಫ್​ಡಿ ದರ: ಶೇ. 6.25

1 ವರ್ಷದಿಂದ 2 ವರ್ಷ ಅವಧಿಯ ಎಫ್​ಡಿ ದರ: ಶೇ. 7.3

2 ರಿಂದ 3 ವರ್ಷ ಅವಧಿಯ ಎಫ್​ಡಿ ದರ: ಶೇ. 7.5

3ರಿಂದ 5 ವರ್ಷ ಅವಧಿಯ ಎಫ್​ಡಿ ದರ: ಶೇ. 7

5ರಿಂದ 10 ವರ್ಷ ಅವಧಿಯ ಎಫ್​ಡಿ ದರ: ಶೇ. 7.50

ಎಫ್​ಡಿಗೆ ಹೆಚ್ಚುವರಿ ಬಡ್ಡಿ

ಎಸ್​ಬಿಐನ ವೀ ಕೇರ್ ಯೋಜನೆಯ ವಿಶೇಷತೆ ಇರುವುದು ಇದು ಕೊಡುವ ಹೆಚ್ಚುವರಿ ಬಡ್ಡಿಯಲ್ಲಿ. ಹಿರಿಯ ನಾಗರಿಕರ ನಿಶ್ಚಿತ ಅವಧಿ ಠೇವಣಿ ಹಣಕ್ಕೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಕೊಡುವುದಾಗಿ ಎಸ್​ಬಿಐ ಹೇಳಿದೆ. ಈಗಾಗಲೇ 50 ಮೂಲಾಂಕಗಳಷ್ಟು ಹೆಚ್ಚುವರಿ ಬಡ್ಡಿ ಇದೆ. ಈಗ ಮತ್ತಷ್ಟು 50 ಬಿಪಿಎಸ್ ನೀಡಲಾಗುತ್ತದೆ. ಒಟ್ಟು ಶೇ. 1ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: Bank FD Vs Small Savings: ಬ್ಯಾಂಕ್ FD Vs ಸಣ್ಣ ಉಳಿತಾಯ ಯೋಜನೆ: ಯಾವುದು ಹೆಚ್ಚು ಆದಾಯವನ್ನು ನೀಡುತ್ತದೆ?

ಈ ಎಫ್​ಡಿ ಸ್ಕೀಮ್ ಅನ್ನು ನೆಟ್ ಬ್ಯಾಂಕಿಂಗ್ ಮೂಲಕ ಆನ್​ಲೈನ್​ನಲ್ಲೇ ಪಡೆಯಬಹುದು. ಎಸ್​ಬಿಐನ ಯೋನೋ ಆ್ಯಪ್​ನಲ್ಲೂ ಎಫ್​ಡಿ ಪಡೆಯಬಹುದು. ಅಥವಾ ಎಸ್​ಬಿಐನ ಶಾಖಾ ಕಚೇರಿಗೆ ಹೋಗಿಯೂ ವೀಕೇರ್ ಎಫ್​ಡಿ ಸ್ಕೀಮ್ ಪಡೆಯಬಹುದು.

ಇನ್ನು, ಎಸ್​ಬಿಐನ ವೀ ಕೇರ್ ಎಫ್​ಡಿ ಸ್ಕೀಮ್​ನಲ್ಲಿ ನೀವು ಇಟ್ಟಿರುವ ಠೇವಣಿಯನ್ನು ಅವಧಿಗೆ ಮುನ್ನ ಹಿಂಪಡೆಯಬಹುದು. ಆದರೆ, ಅದಕ್ಕೆ ಇಂತಿಷ್ಟು ಶುಲ್ಕ ತೆರಬೇಕಾಗುತ್ತದೆ. ಒಂದು ವೇಳೆ ಠೇವಣಿದಾರರಿಗೆ ತುರ್ತಾಗಿ ಹಣ ಬೇಕಾದರೆ ಠೇವಣಿ ಮೊತ್ತದ ಆಧಾರವಾಗಿ ಸಾಲ ಪಡೆಯುವ ಅವಕಾಶ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Wed, 5 April 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್