ಚಿನ್ನ
ಬೆಂಗಳೂರು: ದೇಶ ವಿದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Prices) ಭರ್ಜರಿ ಇಳಿಕೆ ಮುಂದುವರಿದಿದೆ. ದುಬೈನಲ್ಲಿ ಬಹಳ ದಿನಗಳ ಬಳಿಕ ಚಿನ್ನದ ಬೆಲೆ 49,000 ರೂ ಒಳಗೆ ಬಂದಿದೆ. ಭಾರತದ ವಿವಿಧೆಡೆಯೂ ಚಿನ್ನ ಅಗ್ಗಗೊಂಡಿದೆ. ಬೆಳ್ಳಿ ಬೆಲೆಯೂ ಬಹಳ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,425 ರುಪಾಯಿಯಲ್ಲಿ ಇದೆ.
ಚಿನ್ನದ ಬೆಲೆ ಇಳಿಕೆಗೆ ಏನು ಕಾರಣ?
ಅಮೆರಿಕದಲ್ಲಿನ ಫೆಡರಲ್ ಬ್ಯಾಂಕು ಬಡ್ಡಿ ದರ ಏರಿಕೆಗೆ ಅಲ್ಪವಿರಾಮ ಕೊಟ್ಟಿದೆಯಾದರೂ ಈ ವರ್ಷದಲ್ಲಿ ಎರಡು ಬಾರಿ ಬಡ್ಡಿ ದರ ಹೆಚ್ಚಿಸುವುದಾಗಿ ಸುಳಿವು ಕೊಟ್ಟಿದೆ. ಬೆಲೆ ಏರಿಕೆ ನಿರೀಕ್ಷಿಸದ ಹೂಡಿಕೆದಾರರಲ್ಲಿ ಇದು ತುಸು ಆತಂಕ ಭರಿಸಿದೆ. ಇದು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಿದೆ.
ಆದರೆ, ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: BHEL: ಬೆಂಗಳೂರಿನ ಬಿಎಚ್ಇಎಲ್ನಿಂದ ತಯಾರಾಗಲಿವೆ 80 ವಂದೇ ಭಾರತ್ ಟ್ರೈನುಗಳು; 24 ಸಾವಿರ ಕೋಟಿ ರೂ ಗುತ್ತಿಗೆ ನೀಡಿದ ಭಾರತೀಯ ರೈಲ್ವೆ
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 16ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,700 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,670 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 731 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,720 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 74.25 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 54,750 ರೂ
- ಚೆನ್ನೈ: 55,050 ರೂ
- ಮುಂಬೈ: 54,700 ರೂ
- ದೆಹಲಿ: 54,850 ರೂ
- ಕೋಲ್ಕತಾ: 54,700 ರೂ
- ಕೇರಳ: 54,700 ರೂ
- ಅಹ್ಮದಾಬಾದ್: 54,750 ರೂ
- ಜೈಪುರ್: 54,850 ರೂ
- ಲಕ್ನೋ: 54,850 ರೂ
- ಭುವನೇಶ್ವರ್: 54,700 ರೂ
ಇದನ್ನೂ ಓದಿ: Sovereign Gold Bond: ಸಾವರಿನ್ ಗೋಲ್ಡ್ ಬಾಂಡ್ ಜೂನ್ 17ರಿಂದ: ಅಮೋಘ ಹೂಡಿಕೆ ಅವಕಾಶ ಕಳೆದುಕೊಳ್ಳದಿರಿ; ಏನಿದು ಸ್ಕೀಮ್, ಹೆಚ್ಚಿನ ಮಾಹಿತಿ ತಿಳಿಯಿರಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,870 ರಿಂಗಿಟ್ (50,959 ರುಪಾಯಿ)
- ದುಬೈ: 2167.50 ಡಿರಾಮ್ (48,472 ರುಪಾಯಿ)
- ಅಮೆರಿಕ: 600 ಡಾಲರ್ (49,282 ರುಪಾಯಿ)
- ಸಿಂಗಾಪುರ: 808 ಸಿಂಗಾಪುರ್ ಡಾಲರ್ (49,443 ರುಪಾಯಿ)
- ಕತಾರ್: 2,235 ಕತಾರಿ ರಿಯಾಲ್ (50,420 ರೂ)
- ಓಮನ್: 236.50 ಒಮಾನಿ ರಿಯಾಲ್ (50,452 ರುಪಾಯಿ)
- ಕುವೇತ್: 185.50 ಕುವೇತಿ ದಿನಾರ್ (49,619 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,425 ರೂ
- ಚೆನ್ನೈ: 7,750 ರೂ
- ಮುಂಬೈ: 7,310 ರೂ
- ದೆಹಲಿ: 7,310 ರೂ
- ಕೋಲ್ಕತಾ: 7,310 ರೂ
- ಕೇರಳ: 7,750 ರೂ
- ಅಹ್ಮದಾಬಾದ್: 7,310 ರೂ
- ಜೈಪುರ್: 7,310 ರೂ
- ಲಕ್ನೋ: 7,310 ರೂ
- ಭುವನೇಶ್ವರ್: 7,750 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ