Gold Silver Price on 14th March: ಚಿನ್ನದ ಬೆಲೆ ಸತತ ಇಳಿಕೆ; ಬೆಳ್ಳಿಯೂ ತುಸು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Mar 14, 2024 | 5:00 AM

Bullion Market 2024: ಕಳೆದ ವಾರ ಯದ್ವಾತದ್ವ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರ ಶಾಂತವಾಗಿದೆ. ಕಳೆದ ಎರಡು ಮೂರು ದಿನಗಳಿಂದ ಇಳಿಕೆಯ ಹಾದಿಯಲ್ಲಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 65,840 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 75.20 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 60,350 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,510 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 14th March: ಚಿನ್ನದ ಬೆಲೆ ಸತತ ಇಳಿಕೆ; ಬೆಳ್ಳಿಯೂ ತುಸು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Follow us on

ಬೆಂಗಳೂರು, ಮಾರ್ಚ್ 14: ಚಿನ್ನ ಮತ್ತು ಬೆಳ್ಳೆ ಎರಡರ ಬೆಲೆಗಳೂ (Gold and silver Rates) ಗುರುವಾರ ಇಳಿಕೆ ಕಂಡಿವೆ. ಇಂದು ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 39 ರೂನಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಬಹುತೇಕ ಕಡೆ ಹಳದಿ ಲೋಹದ ಬೆಲೆ ತುಸು ತಗ್ಗಿದೆ. ಬೆಳ್ಳಿ ಬೆಲೆಯೂ ಭಾರತದಲ್ಲಿ ಗ್ರಾಮ್​ಗೆ 90 ಪೈಸೆಯಷ್ಟು ಕಡಿಮೆ ಆಗಿದೆ. ಕಳೆದ ವಾರ ವಿಪರೀತ ಏರಿಕೆ ಆಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರ ಆಭರಣ ಪ್ರಿಯರಿಗೆ ನಿಟ್ಟುಸಿರುಬಿಡುವಂತೆ ಮಾಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 65,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,520 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 60,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,510 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 14ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,840 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 752 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,840 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 751 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 60,350 ರೂ
  • ಚೆನ್ನೈ: 61,100 ರೂ
  • ಮುಂಬೈ: 60,350 ರೂ
  • ದೆಹಲಿ: 60,500 ರೂ
  • ಕೋಲ್ಕತಾ: 60,350 ರೂ
  • ಕೇರಳ: 60,350 ರೂ
  • ಅಹ್ಮದಾಬಾದ್: 60,400 ರೂ
  • ಜೈಪುರ್: 60,500 ರೂ
  • ಲಕ್ನೋ: 60,500 ರೂ
  • ಭುವನೇಶ್ವರ್: 60,350 ರೂ

ಇದನ್ನೂ ಓದಿ: ಕಾಂಡೋಮ್ ಕಂಪನಿಯಿಂದ ಹಿಡಿದು ಡೈಮಂಡ್ ಪವರ್​ವರೆಗೆ 6 ತಿಂಗಳಲ್ಲಿ ಭರ್ಜರಿ ಲಾಭ ತಂದ 7 ಮಲ್ಟಿಬ್ಯಾಗರ್ ಸ್ಟಾಕ್​ಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,220 ರಿಂಗಿಟ್ (56,949 ರುಪಾಯಿ)
  • ದುಬೈ: 2,420 ಡಿರಾಮ್ (54,593 ರುಪಾಯಿ)
  • ಅಮೆರಿಕ: 660 ಡಾಲರ್ (54,681 ರುಪಾಯಿ)
  • ಸಿಂಗಾಪುರ: 895 ಸಿಂಗಾಪುರ್ ಡಾಲರ್ (55,602 ರುಪಾಯಿ)
  • ಕತಾರ್: 2,480 ಕತಾರಿ ರಿಯಾಲ್ (56,325 ರೂ)
  • ಸೌದಿ ಅರೇಬಿಯಾ: 2,490 ಸೌದಿ ರಿಯಾಲ್ (55,003 ರುಪಾಯಿ)
  • ಓಮನ್: 262 ಒಮಾನಿ ರಿಯಾಲ್ (56,382 ರುಪಾಯಿ)
  • ಕುವೇತ್: 206 ಕುವೇತಿ ದಿನಾರ್ (55,569 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,510 ರೂ
  • ಚೆನ್ನೈ: 7,850 ರೂ
  • ಮುಂಬೈ: 7,520 ರೂ
  • ದೆಹಲಿ: 7,520 ರೂ
  • ಕೋಲ್ಕತಾ: 7,520 ರೂ
  • ಕೇರಳ: 7,850 ರೂ
  • ಅಹ್ಮದಾಬಾದ್: 7,520 ರೂ
  • ಜೈಪುರ್: 7,520 ರೂ
  • ಲಕ್ನೋ: 7,520 ರೂ
  • ಭುವನೇಶ್ವರ್: 7,850 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ