RIL: ವಯಾಕಾಮ್18ನಲ್ಲಿ ಶೇ. 13ರಷ್ಟು ಷೇರುಪಾಲು ಖರೀದಿಸಿದ ರಿಲಾಯನ್ಸ್ ಇಂಡಸ್ಟ್ರೀಸ್

Reliance to increase stake in Viacom18: ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ವಯಾಕಾಮ್18ನಲ್ಲಿ ಪ್ಯಾರಾಮೌಂಟ್ ಗ್ಲೋಬಲ್ ಹೊಂದಿದ ಶೇ. 13.01ರಷ್ಟು ಪಾಲನ್ನು ಖರೀದಿಸಲಿದೆ. ಒಟ್ಟು 4,286 ಕೋಟಿ ರೂಗೆ ಖರೀದಿ ಮಾಡಲಿರುವ ರಿಲಾಯನ್ಸ್ ತನ್ನದೇ ಅಂಗಸಂಸ್ಥೆಯಾದ ವಯಾಕಾಮ್18ನಲ್ಲಿ ಷೇರುಪಾಲನ್ನು 70.49 ಪ್ರತಿಶತಕ್ಕೆ ಹೆಚ್ಚಿಸಲಿದೆ. ವಯಾಕಾಮ್18 ಮತ್ತು ಡಿಸ್ನಿ ವಿಲೀನದ ನಂತರದ ಸಂಸ್ಥೆಯಲ್ಲಿ ರಿಲಾಯನ್ಸ್ ಗ್ರೂಪ್​ನ ಒಟ್ಟು ಷೇರು ಪಾಲು ಶೇ. 63.16ರಷ್ಟು ಇರಲಿದೆ. ಡಿಸ್ನಿ ಬಳಿ ಉಳಿದ ಪಾಲು ಇರಲಿದೆ.

RIL: ವಯಾಕಾಮ್18ನಲ್ಲಿ ಶೇ. 13ರಷ್ಟು ಷೇರುಪಾಲು ಖರೀದಿಸಿದ ರಿಲಾಯನ್ಸ್ ಇಂಡಸ್ಟ್ರೀಸ್
ರಿಲಾಯನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 14, 2024 | 10:58 AM

ತನ್ನದೇ ಅಂಗಸಂಸ್ಥೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) 4,286 ಕೋಟಿ ರೂ ಮೌಲ್ಯದ ಷೇರುಪಾಲನ್ನು ಖರೀದಿಸಿದೆ. ವಯಾಕಾಮ್18 ಮೀಡಿಯಾ ಪ್ರೈ ಲಿ ಸಂಸ್ಥೆಯಲ್ಲಿ ಪ್ಯಾರಾಮೌಂಟ್ ಗ್ಲೋಬಲ್​ನ (Paramount Global) ಶೇ. 13.01ರಷ್ಟು ಪಾಲನ್ನು ರಿಲಾಯನ್ಸ್ ಖರೀದಿಸಿದೆ. ಈ ನಿಟ್ಟಿನಲ್ಲಿ ಪ್ಯಾರಮೌಂಟ್ ಗ್ಲೋಬಲ್​ನ ಎರಡು ಉಪಸಂಸ್ಥೆಗಳ ಜೊತೆ ರಿಲಾಯನ್ಸ್ ಇಂಡಸ್ಟ್ರೀಸ್ ಒಪ್ಪಂದ ಮಾಡಿಕೊಂಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಈ ಷೇರುಪಾಲು ಖರೀದಿಗೆ 4,286 ರೂ ಪಾವತಿಸಲಿದೆ. ಇದರೊಂದಿಗೆ ವಯಾಕಾಮ್18ನಲ್ಲಿ ರಿಲಾಯನ್ಸ್​ನ ಒಟ್ಟು ಷೇರುಪಾಲು ಶೇ. 70.49ಕ್ಕೆ ಹೆಚ್ಚಲಿದೆ.

ಪ್ಯಾರಾಮೌಂಟ್ ಗ್ಲೋಬಲ್ ಅಮೆರಿಕದ ಮೀಡಿಯಾ ಕಂಪನಿಯಾಗಿದೆ. ರಿಯಾಯನ್ಸ್ ಇಂಡಸ್ಟ್ರೀಸ್ ಮತ್ತು ಡಿಸ್ನೀ ಕಂಪನಿಗಳ ವಿಲೀನ ಪ್ರಕ್ರಿಯೆ ಮುಗಿದ ಬಳಿಕ ಪ್ಯಾರಾಮೌಂಟ್ ಗ್ಲೋಬಲ್​ನಲ್ಲಿ ರಿಲಾಯನ್ಸ್ ಷೇರುಖರೀದಿ ಪ್ರಕ್ರಿಯೆ ನಡೆಯಲಿದೆ. ಈ ಬೆಳವಣಿಗೆ ಬಳಿಕವೂ ವಯಾಕಾಮ್18 ಜೊತೆ ಎಂದಿನಂತೆ ಪ್ಯಾರಾಮೌಂಟ್ ಗ್ಲೋಬಲ್ ವ್ಯವಹಾರ ಮುಂದುವರಿಯಲಿದೆ. ಅದರ ಕಂಟೆಂಟ್ ಅನ್ನು ವಯಾಕಾಮ್18ಗೆ ಪೂರೈಸುವುದನ್ನು ಪ್ಯಾರಾಮೌಂಟ್ ಮುಂದುವರಿಸಲಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷೆಗಿಂತ ಮೇಲೆ; ಭಾರತದ ಮೇಲೆ ಆಗುವ ಪರಿಣಾಮಗಳೇನು?

ವಾಲ್ಟ್ ಡಿಸ್ನಿ ಕಂಪನಿಯ ಭಾರತೀಯ ವಿಭಾಗವು ರಿಲಾಯನ್ಸ್ ಇಂಡಸ್ಟ್ರೀಸ್ ಜೊತೆ ವಿಲೀನಗೊಳ್ಳಲಿದೆ. ಈ ವಿಲೀನ ನಂತರ 70,000 ಕೋಟಿ ರೂ ಮೌಲ್ಯದ ಹೊಸ ಕಂಪನಿ ಉದಯವಾಗಲಿದೆ. ಈ ಕಂಪನಿಯಲ್ಲಿ ವಯಾಕಾಮ್18ನ ಪಾಲು ಶೇ. 46.82ರಷ್ಟಿರಲಿದೆ. ರಿಲಾಯನ್ಸ್ ಇಂಡಸ್ಟ್ರೀಸ್​ನ ಪಾಲು ಶೇ. 16.34ರಷ್ಟಿರಲಿದೆ. ರಿಲಾಯನ್ಸ್ ಗ್ರೂಪ್​ನ ಒಟ್ಟು ಷೇರುಪಾಲು ಶೇ. 63.16ರಷ್ಟು ಇರುತ್ತದೆ. ಉಳಿದ ಶೇ. 36.84ರಷ್ಟು ಷೇರುಪಾಲು ಡಿಸ್ನಿ ಬಳಿ ಇರಲಿದೆ. ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದೊಳಗೆ ಡಿಸ್ನಿ ಮತ್ತು ರಿಲಾಯನ್ಸ್ ವಿಲೀನ ಪ್ರಕ್ರಿಯೆ ಮುಗಿಯಬಹುದು ಎಂದು ನಿರೀಕ್ಷಿಸಲಾಗಿದೆ.

ವಿಲೀನದ ಬಳಿಕ ರಿಲಾಯನ್ಸ್ ಇಂಡಸ್ಟ್ರೀಸ್ ಈ ಉದ್ದಿಮೆಯಲ್ಲಿ 11,500 ಕೋಟಿ ರೂನಷ್ಟು ಹೂಡಿಕೆ ಮಾಡಲಿದೆ. ಸೋನಿ, ನೆಟ್​ಫ್ಲಿಕ್ಸ್ ಮೊದಲಾದ ದೈತ್ಯ ಸಂಸ್ಥೆಗಳೊಂದಿಗೆ ರಿಲಾಯನ್ಸ್ ಮತ್ತು ಡಿಸ್ನೀ ವಿಲೀನದ ಕಂಪನಿ ಪ್ರಬಲ ಪೈಪೋಟಿ ಕೊಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಹೀಗೇ ಆದರೆ ಮುಂದೆ ಅಮೆರಿಕ ದಿವಾಳಿ ಆಗುತ್ತೆ: ಸರ್ಕಾರವನ್ನು ಎಚ್ಚರಿಸಿದ ಉದ್ಯಮಿ ಇಲಾನ್ ಮಸ್ಕ್

ಏರುತ್ತಿರುವ ಆರ್​ಐಎಲ್ ಷೇರುಬೆಲೆ

ವಯಾಕಾಮ್18ನ ಷೇರು ಪಾಲನ್ನು ಆರ್​ಐಎಲ್ ಖರೀದಿಸಲು ಮುಂದಾಗುತ್ತಿರುವಂತೆಯೇ ರಿಲಾಯನ್ಸ್ ಇಂಡಸ್ಟ್ರೀಸ್​ನ ಷೇರುಬೆಲೆ ಇವತ್ತು ತುಸು ಹೆಚ್ಚತೊಡಗಿದೆ. ಒಂದು ವಾರದಿಂದ ಇಳಿಕೆಯಲ್ಲಿದ್ದ ಆರ್​ಐಎಲ್ ಷೇರುಬೆಲೆ ಮತ್ತೆ ಹೆಚ್ಚತೊಡಗಿದೆ. ಮಾರ್ಚ್ ಮೊದಲ ವಾರದಲ್ಲಿ ಅದರ ಷೇರುಬೆಲೆ 3,016 ರೂ ಇತ್ತು. ಬುಧವಾರ ದಿನಾಂತ್ಯದಲ್ಲಿ 2,864 ರೂ ಇತ್ತು. ಈಗ 2,888 ರೂಗೆ ಏರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್