FASTag: ಇನ್ನೂ ಪೇಟಿಎಂ ಫಾಸ್ಟ್ಯಾಗ್ ಬಳಸುತ್ತಿದ್ದೀರಾ? ಕೂಡಲೇ ಬೇರೆ ಟ್ಯಾಗ್ ಖರೀದಿಸಿ
PayTM FASTag Users: ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರು ಮಾರ್ಚ್ 15ರೊಳಗೆ ಬೇರೆ ಬ್ಯಾಂಕುಗಳಿಂದ ಫಾಸ್ಟ್ಯಾಗ್ ಪಡೆಯಬೇಕೆಂದು ಸೂಚಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಹೇಳಿಕೆ ನೀಡಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್ಟ್ಯಾಗ್ಗೆ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಮೊದಲೇ ರೀಚಾರ್ಜ್ ಮಾಡಿದ ಹಣ ಇದ್ದರೆ ಅದನ್ನು ಬಳಸಬಹುದು. ಆದರೆ, ಹೊಸದಾಗಿ ಖಾತೆಗೆ ಹಣ ಸೇರಿಸಲಾಗುವುದಿಲ್ಲ.
ಪೇಟಿಎಂ ಫಾಸ್ಟ್ಯಾಗ್ (Paytm FASTag) ಬಳಸುತ್ತಿರುವವರು ಬೇರೆ ಬ್ಯಾಂಕುಗಳಿಂದ ಫಾಸ್ಟ್ಯಾಗ್ ಖರೀದಿಸಬೇಕೆಂದು ಹೆದ್ದಾರಿ ಪ್ರಾಧಿಕಾರ (NHAI) ಹೇಳುತ್ತಲೇ ಬಂದಿದೆ. ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್ಟ್ಯಾಗ್ ಖಾತೆಗೆ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್ನಿಂದ ಫಾಸ್ಟ್ಯಾಗ್ ಪಡೆಯುವಂತೆ ಎನ್ಎಚ್ಎಐ ಮತ್ತೊಮ್ಮೆ ಅಧಿಕೃತವಾಗಿ ಸೂಚನೆ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ಅದರ ಫಾಸ್ಟ್ಯಾಗ್ಗೂ ಪರಿಣಾಮ ಬಿದ್ದಿದೆ. ಪೇಟಿಎಂನ ಫಾಸ್ಟ್ಯಾಗ್ ಪೇಮೆಂಟ್ಸ್ ಬ್ಯಾಂಕ್ಗೆ ಜೋಡಿತವಾಗಿರುವುದರಿಂದ ಅದಕ್ಕೂ ನಿರ್ಬಂಧ ಅನ್ವಯ ಆಗುತ್ತದೆ.
ಮಾರ್ಚ್ 15ರೊಳಗೆ ಬೇರೆ ಫಾಸ್ಟ್ಯಾಗ್ ತೆಗೆದುಕೊಳ್ಳದಿದ್ದರೆ ಏನಾಗುತ್ತದೆ?
ನಿಮ್ಮಲ್ಲಿ ಪೇಟಿಎಂ ಫಾಸ್ಟ್ಯಾಗ್ ಇದ್ದು, ಮಾರ್ಚ್ 15ರೊಳಗೆ ಬೇರೆ ಬ್ಯಾಂಕ್ನ ಫಾಸ್ಟ್ಯಾಗ್ ಪಡೆಯಬೇಕಾಗುತ್ತದೆ. ಮಾರ್ಚ್ 15ರ ನಂತರ ಅದು ನಿಷ್ಕ್ರಿಯಗೊಳ್ಳುವುದಿಲ್ಲ. ಆ ಖಾತೆಯಲ್ಲಿ ಹಣ ಇದ್ದರೆ ಅದು ಮುಗಿಯುವವರೆಗೂ ಬಳಸಬಹುದು. ಮಾರ್ಚ್ 15ರ ಬಳಿಕ ಹೊಸದಾಗಿ ಹಣ ಸೇರಿಸಲಾಗುವುದಿಲ್ಲ, ರೀಚಾರ್ಜ್ ಮಾಡಲಾಗುವುದಿಲ್ಲ.
ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ಹೇರಿದ ಬಳಿಕ ಪೇಟಿಎಂ ಸಂಸ್ಥೆ ಕೂಡ ತನ್ನ ಫಾಸ್ಟ್ಯಾಗ್ ಗ್ರಾಹಕರಿಗೆ ಬೇರೆ ಟ್ಯಾಗ್ ಪಡೆಯುವಂತೆ ಸಲಹೆ ನೀಡುತ್ತಲೇ ಬಂದಿದೆ.
ಫಾಸ್ಟ್ಯಾಗ್ ಎಂದರೇನು?
ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆಂದು ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ನೀಡಲಾಗುವ ಪ್ರೀಪೇಯ್ಡ್ ಯಂತ್ರ. ರೇಡಿಯೋ ಫ್ರೀಕ್ವೆನ್ಸಿ ಐಡಿ ತಂತ್ರಜ್ಞಾನ ಬಳಸಲಾಗುತ್ತದೆ. ಫಾಸ್ಟ್ಯಾಗ್ ಖಾತೆಗೆ ಎಷ್ಟಾದರೂ ಹಣವನ್ನು ಮುಂಚಿತವಾಗಿ ರೀಚಾರ್ಜ್ ಮಾಡಬಹುದು. ಹೆದ್ದಾರಿಯಲ್ಲಿ ಟೋಲ್ ಬೂತ್ ಸಮೀಪ ಸ್ವಯಂಚಾಲಿತವಾಗಿ ಫಾಸ್ಟ್ಯಾಗ್ ಮೂಲಕ ಟೋಲ್ ಹಣ ಕಡಿತವಾಗುತ್ತದೆ.
ಇದನ್ನೂ ಓದಿ: ಬಚ್ಚನ್ ಪಕ್ಕದ ಮನೆ ಮಾರಾಟಕ್ಕೆ; ಸಾಲ ಕಟ್ಟಿಲ್ಲ ಎಂದು ಬಂಗಲೆ ಹರಾಜು; ಮೂಲ ಬೆಲೆ 25 ಕೋಟಿ ರೂ
ಫಾಸ್ಟ್ಯಾಗ್ ಎಲ್ಲಿ ಪಡೆಯಬಹುದು?
ಹೆದ್ದಾರಿ ಪ್ರಾಧಿಕಾರವು ಪ್ರಮುಖ 37 ಬ್ಯಾಂಕುಗಳಿಗೆ ಫಾಸ್ಟ್ಯಾಗ್ ನೀಡಲು ಅನುಮತಿಸಿದೆ. ಎಚ್ಡಿಎಫ್ಸಿ, ಐಸಿಐಸಿಐ, ಎಸ್ಬಿಐ ಹೀಗೆ ಎಲ್ಲಾ ಪ್ರಮುಖ ಬ್ಯಾಂಕುಗಳ ಮೂಲಕ ಫಾಸ್ಟ್ಯಾಗ್ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ