Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಹೊಸ ದಾಖಲೆ; ಇಲ್ಲಿದೆ ಇವತ್ತಿನ ದರಪಟ್ಟಿ
Bullion Market 2025 March 16th: ಚಿನ್ನದ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್ಗೆ 200 ರೂನಷ್ಟು ಏರಿಕೆ ಆಗಿದೆ. ಬೆಳ್ಳಿ ಬೆಲೆ ಮೂರು ರೂನಷ್ಟು ಹೆಚ್ಚಳವಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಬೆಂಗಳೂರಿನಲ್ಲಿ 8,967 ರೂಗೆ ಏರಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,220 ರೂಗೆ ಏರಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 103 ರೂ ಆಗಿದೆ. ಚೆನ್ನೈ ಮೊದಲಾದೆಡೆ ಅದರ ಬೆಲೆ 112 ರೂ ತಲುಪಿದೆ.

ಬೆಂಗಳೂರು, ಮಾರ್ಚ್ 16: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಎರಡೂ ಕೂಡ ಹೊಸ ದಾಖಲೆಯ ಮಟ್ಟಕ್ಕೆ ಜಿಗಿದಿವೆ. ಭಾರತದಲ್ಲಿ ಅಪರಂಜಿ ಚಿನ್ನದ ಬೆಲೆ 9,000 ರೂ ಮಟ್ಟಕ್ಕೆ ಸಮೀಪಿಸುತ್ತಿವೆ. 22 ಕ್ಯಾರಟ್ ಚಿನ್ನದ ಬೆಲೆ 8,200 ರೂ ಗಡಿ ದಾಟಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,700 ರೂ ಗಡಿ ದಾಟಿ ಹೋಗಿದೆ. ಈ ವಾರ ಚಿನ್ನದ ಬೆಲೆ ಗ್ರಾಮ್ಗೆ 250 ರೂಗಳಷ್ಟು ಏರಿಕೆ ಆಗಿದೆ. ಚಿನ್ನಕ್ಕಿಂತಲೂ ಬೆಳ್ಳಿ ಬೆಲೆ ಭರ್ಜರಿ ಹೆಚ್ಚಳ ಕಂಡಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ 99 ರೂ ಇದ್ದ ಒಂದು ಗ್ರಾಮ್ ಬೆಳ್ಳಿ ಬೆಲೆ ಈಗ 103 ರೂ ಮುಟ್ಟಿದೆ. ಇನ್ನು, ಜಾಗತಕವಾಗಿಯೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಟ್ರಂಪ್ ಟ್ಯಾರಿಫ್ ಇತ್ಯಾದಿ ಕಾರಣಕ್ಕೆ ಜಾಗತಿಕ ಅನಿಶ್ಚಿತ ಪರಿಸ್ಥಿತಿ ಉಂಟಾಗಿದ್ದು, ಜನರು ಷೇರು, ಕ್ರಿಪ್ಟೋ ಇತ್ಯಾದಿ ಬಿಟ್ಟು ಚಿನ್ನ, ಬೆಳ್ಳಿಯಂತಹ ನೈಜ ಸಂಪತ್ತಿನ ಮೇಲೆ ಹೂಡಿಕೆ ಮಾಡುತ್ತಿರುವ ಟ್ರೆಂಡ್ ಇದೆ. ಈ ಕಾರಣಕ್ಕೆ ಇವೆರಡು ಲೋಹಗಳಿಗೆ ಬೇಡಿಕೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 89,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 82,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,300 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 16ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,670 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,260 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,670 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 82,200 ರೂ
- ಚೆನ್ನೈ: 82,200 ರೂ
- ಮುಂಬೈ: 82,200 ರೂ
- ದೆಹಲಿ: 82,350 ರೂ
- ಕೋಲ್ಕತಾ: 82,200 ರೂ
- ಕೇರಳ: 82,200 ರೂ
- ಅಹ್ಮದಾಬಾದ್: 82,250 ರೂ
- ಜೈಪುರ್: 82,350 ರೂ
- ಲಕ್ನೋ: 82,350 ರೂ
- ಭುವನೇಶ್ವರ್: 82,200 ರೂ
ಇದನ್ನೂ ಓದಿ: ಚಿನ್ನದ ಬಾಂಡ್ ರಿಡೆಂಪ್ಶನ್ ದರವನ್ನು ಪ್ರತಿ ಯೂನಿಟ್‌ಗೆ 8,624 ರೂ. ನಿಗದಿಪಡಿಸಿದ ಆರ್‌ಬಿಐ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 4,180 ರಿಂಗಿಟ್ (81,760 ರುಪಾಯಿ)
- ದುಬೈ: 3,345 ಡಿರಾಮ್ (79,190 ರುಪಾಯಿ)
- ಅಮೆರಿಕ: 905 ಡಾಲರ್ (78,680 ರುಪಾಯಿ)
- ಸಿಂಗಾಪುರ: 1,242 ಸಿಂಗಾಪುರ್ ಡಾಲರ್ (80,950 ರುಪಾಯಿ)
- ಕತಾರ್: 3,365 ಕತಾರಿ ರಿಯಾಲ್ (80,260 ರೂ)
- ಸೌದಿ ಅರೇಬಿಯಾ: 3,400 ಸೌದಿ ರಿಯಾಲ್ (78,830 ರುಪಾಯಿ)
- ಓಮನ್: 354.50 ಒಮಾನಿ ರಿಯಾಲ್ (80,050 ರುಪಾಯಿ)
- ಕುವೇತ್: 273.70 ಕುವೇತಿ ದಿನಾರ್ (77,260 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 10,300 ರೂ
- ಚೆನ್ನೈ: 11,200 ರೂ
- ಮುಂಬೈ: 10,300 ರೂ
- ದೆಹಲಿ: 10,300 ರೂ
- ಕೋಲ್ಕತಾ: 10,300 ರೂ
- ಕೇರಳ: 11,200 ರೂ
- ಅಹ್ಮದಾಬಾದ್: 10,300 ರೂ
- ಜೈಪುರ್: 10,300 ರೂ
- ಲಕ್ನೋ: 10,300 ರೂ
- ಭುವನೇಶ್ವರ್: 11,200 ರೂ
- ಪುಣೆ: 10,300
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ