Gold Silver Price on 23 November: ಚಿನ್ನದ ಬೆಲೆಯಲ್ಲಿ ಇಲ್ಲ ಬದಲಾವಣೆ; ಬೆಳ್ಳಿ ತುಸು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2023, November 23rd: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,020 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 76 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 56,850 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,460 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 23 November: ಚಿನ್ನದ ಬೆಲೆಯಲ್ಲಿ ಇಲ್ಲ ಬದಲಾವಣೆ; ಬೆಳ್ಳಿ ತುಸು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Edited By:

Updated on: Nov 23, 2023 | 5:00 AM

ಬೆಂಗಳೂರು, ನವೆಂಬರ್ 23: ಕಳೆದ ಮೂರ್ನಾಲ್ಕು ದಿನದಿಂದ ಗ್ರಾಮ್​ಗೆ 30 ರೂನಷ್ಟು ಏರಿದ್ದ ಚಿನ್ನದ ಬೆಲೆಗಳು (Gold and silver Rates) ಸದ್ಯ ಯಥಾಸ್ಥಿತಿಯಲ್ಲಿವೆ. ಬೆಳ್ಳಿ ಬೆಲೆ ಇಂದು ತುಸು ಕಡಿಮೆ ಆಗಿದೆ. ಕಳೆದ 10 ದಿನಗಳಿಂದ ಚಿನ್ನದ ಬೆಲೆ ಗ್ರಾಮ್​ಗೆ 80 ರೂನಷ್ಟು ಏರಿದೆ. ಆರು ತಿಂಗಳ ಹಿಂದಿನ ಬೆಲೆಗೆ ಹೋಲಿಸಿದರೆ ಚಿನ್ನ ಸ್ವಲ್ಪವೇ ದುಬಾರಿ ಎನಿಸಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಸಾಕಷ್ಟು ಏರಿಳಿತವಾದರೂ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ ಎಂಬುದು ಗಮನಾರ್ಹ. ಮಲೇಷ್ಯಾದಲ್ಲಿ ಸಾಕಷ್ಟು ದಿನಗಳಿಂದ ಒಂದೇ ಬೆಲೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,460 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 23ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,020 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,020 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 746 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 56,850 ರೂ
  • ಚೆನ್ನೈ: 57,300 ರೂ
  • ಮುಂಬೈ: 56,850 ರೂ
  • ದೆಹಲಿ: 57,000 ರೂ
  • ಕೋಲ್ಕತಾ: 56,850 ರೂ
  • ಕೇರಳ: 56,850 ರೂ
  • ಅಹ್ಮದಾಬಾದ್: 56,900 ರೂ
  • ಜೈಪುರ್: 57,000 ರೂ
  • ಲಕ್ನೋ: 57,000 ರೂ
  • ಭುವನೇಶ್ವರ್: 56,850 ರೂ

ಇದನ್ನೂ ಓದಿ: ಏರ್ ಇಂಡಿಯಾಗೆ ಹತ್ತು ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ, ಯಾಕೆ ಗೊತ್ತಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,980 ರಿಂಗಿಟ್ (53,038 ರುಪಾಯಿ)
  • ದುಬೈ: 2,242.50 ಡಿರಾಮ್ (50,865 ರುಪಾಯಿ)
  • ಅಮೆರಿಕ: 615 ಡಾಲರ್ (51,237 ರುಪಾಯಿ)
  • ಸಿಂಗಾಪುರ: 831 ಸಿಂಗಾಪುರ್ ಡಾಲರ್ (51,670 ರುಪಾಯಿ)
  • ಕತಾರ್: 2,305 ಕತಾರಿ ರಿಯಾಲ್ (52,696 ರೂ)
  • ಸೌದಿ ಅರೇಬಿಯಾ: 2,310 ಸೌದಿ ರಿಯಾಲ್ (51,305 ರುಪಾಯಿ)
  • ಓಮನ್: 244 ಒಮಾನಿ ರಿಯಾಲ್ (52,798 ರುಪಾಯಿ)
  • ಕುವೇತ್: 193 ಕುವೇತಿ ದಿನಾರ್ (52,178 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,460 ರೂ
  • ಚೆನ್ನೈ: 7,900 ರೂ
  • ಮುಂಬೈ: 7,600 ರೂ
  • ದೆಹಲಿ: 7,600 ರೂ
  • ಕೋಲ್ಕತಾ: 7,600 ರೂ
  • ಕೇರಳ: 7,900 ರೂ
  • ಅಹ್ಮದಾಬಾದ್: 7,600 ರೂ
  • ಜೈಪುರ್: 7,600 ರೂ
  • ಲಕ್ನೋ: 7,600 ರೂ
  • ಭುವನೇಶ್ವರ್: 7,900 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us