Gold Silver Price on 13 October: ಚಿನ್ನದ ಬೆಲೆ ಗ್ರಾಂಗೆ 35 ರೂನಷ್ಟು ಏರಿಕೆ; ಬೆಳ್ಳಿ ಇನ್ನಷ್ಟು ದುಬಾರಿ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

Bullion Market 2023, October 13th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 54,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 58,910 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 72.60 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 54,000 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,150 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 13 October: ಚಿನ್ನದ ಬೆಲೆ ಗ್ರಾಂಗೆ 35 ರೂನಷ್ಟು ಏರಿಕೆ; ಬೆಳ್ಳಿ ಇನ್ನಷ್ಟು ದುಬಾರಿ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ
ಚಿನ್ನ
Edited By:

Updated on: Oct 13, 2023 | 5:00 AM

ಬೆಂಗಳೂರು, ಅಕ್ಟೋಬರ್ 13: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and silver Rates) ಗಣನೀಯವಾಗಿ ಇಳಿಯುವುದು ಮುಂದುವರಿದಿದೆ. ಶುಕ್ರವಾರ ಮತ್ತೆ ಬೆಲೆ ಜಿಗಿತವಾಗಿದೆ. ಭಾರತ ಹಾಗೂ ವಿದೇಶಗಳ ಬಹುತೇಕ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಕೂಡ ದುಬಾರಿ ಆಗಿವೆ. ಹೂಡಿಕೆದಾರರು ಚಿನ್ನದ ಮೇಲೆ ಮುಗಿಬೀಳುತ್ತಿರುವ ಟ್ರೆಂಡ್ ಇದೆ. ಇದೆಲ್ಲವೂ ಇಸ್ರೇಲ್ ಯುದ್ಧದ ಎಫೆಕ್ಟ್ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 54,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 58,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,260 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 54,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,150 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 13ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,910 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 726 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 54,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,910 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 715 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 54,000 ರೂ
  • ಚೆನ್ನೈ: 54,150 ರೂ
  • ಮುಂಬೈ: 54,000 ರೂ
  • ದೆಹಲಿ: 54,150 ರೂ
  • ಕೋಲ್ಕತಾ: 54,000 ರೂ
  • ಕೇರಳ: 54,000 ರೂ
  • ಅಹ್ಮದಾಬಾದ್: 54,050 ರೂ
  • ಜೈಪುರ್: 54,150 ರೂ
  • ಲಕ್ನೋ: 54,150 ರೂ
  • ಭುವನೇಶ್ವರ್: 54,000 ರೂ

ಇದನ್ನೂ ಓದಿ: Arecanut Price 12 Oct: ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ, ಕೋಕೋ ದರ ಹೀಗಿದೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,820 ರಿಂಗಿಟ್ (49,813 ರುಪಾಯಿ)
  • ದುಬೈ: 2,107.50 ಡಿರಾಮ್ (47,767 ರುಪಾಯಿ)
  • ಅಮೆರಿಕ: 575 ಡಾಲರ್ (47,865 ರುಪಾಯಿ)
  • ಸಿಂಗಾಪುರ: 796 ಸಿಂಗಾಪುರ್ ಡಾಲರ್ (48,537 ರುಪಾಯಿ)
  • ಕತಾರ್: 2,180 ಕತಾರಿ ರಿಯಾಲ್ (49,752 ರೂ)
  • ಸೌದಿ ಅರೇಬಿಯಾ: 2,180 ಸೌದಿ ರಿಯಾಲ್ (48,378 ರುಪಾಯಿ)
  • ಓಮನ್: 230.50 ಒಮಾನಿ ರಿಯಾಲ್ (49,836 ರುಪಾಯಿ)
  • ಕುವೇತ್: 182 ಕುವೇತಿ ದಿನಾರ್ (48,996 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,150 ರೂ
  • ಚೆನ್ನೈ: 7,550 ರೂ
  • ಮುಂಬೈ: 7,260 ರೂ
  • ದೆಹಲಿ: 7,260 ರೂ
  • ಕೋಲ್ಕತಾ: 7,260 ರೂ
  • ಕೇರಳ: 7,550 ರೂ
  • ಅಹ್ಮದಾಬಾದ್: 7,260 ರೂ
  • ಜೈಪುರ್: 7,260 ರೂ
  • ಲಕ್ನೋ: 7,260 ರೂ
  • ಭುವನೇಶ್ವರ್: 7,550 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us