Gold Silver Price on 26th September: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಬೆಳ್ಳಿ ಬೆಲೆಯಲ್ಲಿ ಏರಿಳಿತ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 September 26th: ಚಿನ್ನದ ಬೆಲೆ ಸತತ ನಾಲ್ಕು ಬಾರಿ ಹೆಚ್ಚಳವಾಗಿದೆ. ಗ್ರಾಮ್​ಗೆ 10 ಪೈಸೆ ಬೆಲೆ ಹೆಚ್ಚಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 7,703 ರೂ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 3 ರೂನಷ್ಟು ಹೆಚ್ಚಾಗಿ 90 ರೂ ಗಡಿ ದಾಟಿದೆ.

Gold Silver Price on 26th September: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಬೆಳ್ಳಿ ಬೆಲೆಯಲ್ಲಿ ಏರಿಳಿತ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2024 | 10:38 AM

ಬೆಂಗಳೂರು, ಸೆಪ್ಟಂಬರ್ 26: ಭಾರತದಲ್ಲಿ ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಕಳೆದ ಮೂರು ದಿನಕ್ಕೆ ಹೋಲಿಸಿದರೆ ಇಂದು ಗುರುವಾರ ಚಿನ್ನದ ಬೆಲೆಯಲ್ಲಿ ಅಲ್ಪ ಹೆಚ್ಚಳವಾಗಿದೆ. ಗ್ರಾಮ್​ಗೆ ಒಂದು ರೂನಷ್ಟು ಮಾತ್ರ ಬೆಲೆ ಏರಿಕೆ ಆಗಿದೆ. ವಿದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗಿನ ಏರಿಳಿತಗಳಾಗಿವೆ. ಕೆಲವೆಡೆ ಬೆಲೆ ಹೆಚ್ಚಳವಾದರೆ ಕೆಲವೆಡೆ ಇಳಿಕೆ ಆಗಿದೆ. ಭಾರತದಲ್ಲಿ ಬೆಳ್ಳಿ ಬೆಲೆಯೂ ಏರಿಳಿತ ಕಂಡಿದೆ. ಮುಂಬೈ ಮೊದಲಾದ ಕೆಲವೆಡೆ ಬೆಳ್ಳಿ ಬೆಲೆ ಗ್ರಾಮ್​ಗೆ 10 ಪೈಸೆ ಕಡಿಮೆ ಆಗಿದೆ. ಚೆನ್ನೈ ಮೊದಲಾದ ಕೆಲವೆಡೆ 10 ಪೈಸೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 90 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,610 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,030 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,270 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 70,610 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,010 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 26ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,610 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,030 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 927 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 70,610 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,030 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 901 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 70,610 ರೂ
  • ಚೆನ್ನೈ: 70,610 ರೂ
  • ಮುಂಬೈ: 70,610 ರೂ
  • ದೆಹಲಿ: 70,760 ರೂ
  • ಕೋಲ್ಕತಾ: 70,610 ರೂ
  • ಕೇರಳ: 70,610 ರೂ
  • ಅಹ್ಮದಾಬಾದ್: 70,660 ರೂ
  • ಜೈಪುರ್: 70,760 ರೂ
  • ಲಕ್ನೋ: 70,760 ರೂ
  • ಭುವನೇಶ್ವರ್: 70,610 ರೂ

ಇದನ್ನೂ ಓದಿ: ಚಿನ್ನದ ಬೆಲೆ ಗಗನದತ್ತ; ಹೊಸ ಮೈಲಿಗಲ್ಲುಗಳನ್ನು ದಾಟಲು ಕಾರಣವಾಗಿರುವ ವಿದ್ಯಮಾನಗಳೇನು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,460 ರಿಂಗಿಟ್ (70,090 ರುಪಾಯಿ)
  • ದುಬೈ: 2,945 ಡಿರಾಮ್ (67,100 ರುಪಾಯಿ)
  • ಅಮೆರಿಕ: 800 ಡಾಲರ್ (66,950 ರುಪಾಯಿ)
  • ಸಿಂಗಾಪುರ: 1,068 ಸಿಂಗಾಪುರ್ ಡಾಲರ್ (69,420 ರುಪಾಯಿ)
  • ಕತಾರ್: 2,980 ಕತಾರಿ ರಿಯಾಲ್ (68,400 ರೂ)
  • ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (67,810 ರುಪಾಯಿ)
  • ಓಮನ್: 317 ಒಮಾನಿ ರಿಯಾಲ್ (68,910 ರುಪಾಯಿ)
  • ಕುವೇತ್: 238.70 ಕುವೇತಿ ದಿನಾರ್ (65,410 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,010 ರೂ
  • ಚೆನ್ನೈ: 10,110 ರೂ
  • ಮುಂಬೈ: 9,270 ರೂ
  • ದೆಹಲಿ: 9,510 ರೂ
  • ಕೋಲ್ಕತಾ: 9,510 ರೂ
  • ಕೇರಳ: 10,110 ರೂ
  • ಅಹ್ಮದಾಬಾದ್: 9,510 ರೂ
  • ಜೈಪುರ್: 9,510 ರೂ
  • ಲಕ್ನೋ: 9,510 ರೂ
  • ಭುವನೇಶ್ವರ್: 10,110 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ