Gold Rates 05 November: ಹತ್ತು ಗ್ರಾಮ್ ಚಿನ್ನದ ಬೆಲೆ ಒಂದೇ ದಿನದಲ್ಲಿ 5,900 ರೂ ಏರಿಕೆ

Gold Price 05 November 2026: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಕೆಯಾಗಿವೆ. ಚಿನ್ನದ ಬೆಲೆ ಗ್ರಾಮ್​ಗೆ 590 ರೂ ಹೆಚ್ಚಿದೆ. ಬೆಳ್ಳಿ ಬೆಲೆ 10 ರೂ ಜಾಸ್ತಿಯಾಗಿದೆ. ಆಭರಣ ಚಿನ್ನದ ಬೆಲೆ 12,825 ರೂನಿಂದ 13,385 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 14,602 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 210 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 215 ರೂ ಇದೆ.

Gold Rates 05 November: ಹತ್ತು ಗ್ರಾಮ್ ಚಿನ್ನದ ಬೆಲೆ ಒಂದೇ ದಿನದಲ್ಲಿ 5,900 ರೂ ಏರಿಕೆ
ಚಿನ್ನ
Image Credit source: PTI

Updated on: Nov 05, 2026 | 10:53 AM

ನವದೆಹಲಿ, ನವೆಂಬರ್ 5: ಚಿನ್ನದ ಬೆಲೆ ಒಮ್ಮೆಲೇ ಹೈ ಜಂಪ್ ಆಗಿದೆ. ಸೋಮವಾರದಿಂದ ಬುಧವಾರದವರೆಗೆ ಮೂರು ದಿನದಲ್ಲಿ 95 ರೂ ಹೆಚ್ಚಿದ್ದ ಚಿನ್ನದ ಬೆಲೆ ಗುರುವಾರ ಒಂದೇ ದಿನ ಬರೋಬ್ಬರಿ 590 ರೂ ಜಿಗಿದಿದೆ. ಇದು ಇತ್ತೀಚಿನ ದಿನಗಳಲ್ಲಿ ಚಿನ್ನ ಕಂಡ ಅತಿದೊಡ್ಡ ಬೆಲೆ ಏರಿಕೆ. ಆಭರಣ ಚಿನ್ನದ ಬೆಲೆ 13,000 ರೂ ಮೇಲೇರಿದೆ. ಅಪರಂಜಿ ಚಿನ್ನದ ಬೆಲೆ 14,000 ರೂ ಗಡಿ ದಾಟಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ 10 ರೂ ಹೆಚ್ಚಾಗಿದೆ. ಎಂಸಿಎಕ್ಸ್ ಫ್ಯೂಚರ್ಸ್, ಸ್ಪಾಟ್ ದರಗಳೂ ಕೂಡ ಹೆಚ್ಚಳಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,46,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 21,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 21,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 21,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,602
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,385
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,952
  • ಬೆಳ್ಳಿ ಬೆಲೆ 1 ಗ್ರಾಂಗೆ: 210 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,385 ರೂ
  • ಚೆನ್ನೈ: 13,385 ರೂ
  • ಮುಂಬೈ: 13,385 ರೂ
  • ದೆಹಲಿ: 13,400
  • ಕೋಲ್ಕತಾ: 13,385 ರೂ
  • ಕೇರಳ: 13,385 ರೂ
  • ಅಹ್ಮದಾಬಾದ್: 13,390 ರೂ
  • ಜೈಪುರ್: 13,400
  • ಲಕ್ನೋ: 13,400
  • ಭುವನೇಶ್ವರ್: 13,385 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 14,567 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 190 ರೂ

ಭಾರತದಲ್ಲಿ ಸ್ಪಾಟ್ ದರಗಳು

  • ಚಿನ್ನ 1 ಗ್ರಾಮ್​ಗೆ 14,125 ರೂ
  • ಬೆಳ್ಳಿ 1 ಗ್ರಾಮ್​ಗೆ 185 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 132.95 ಡಾಲರ್ (12,559 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.702 ಡಾಲರ್ (161 ರುಪಾಯಿ)

ಇದನ್ನೂ ಓದಿ: ನೂರು ಕೋಟಿ ರೂ ಸ್ಟಾಕಲ್ ಹಗರಣ; ಹೂಡಿಕೆದಾರರಿಗೆ ಗೊತ್ತಿಲ್ಲದೇ ಆಪಲ್, ಎನ್​ವಿಡಿಯೋ ಷೇರು ಮಾರಿ ನಷ್ಟ ತಂದಿತ್ತ ಆರೋಪ

Loading...

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 14,602 ರುಪಾಯಿ
  • ಮಲೇಷ್ಯಾ: 550 ರಿಂಗಿಟ್ (12,837 ರುಪಾಯಿ)
  • ದುಬೈ: 487.50 ಡಿರಾಮ್ (12,550 ರುಪಾಯಿ)
  • ಅಮೆರಿಕ: 133.50 ಡಾಲರ್ (12,619 ರುಪಾಯಿ)
  • ಸಿಂಗಾಪುರ: 180.30 ಸಿಂಗಾಪುರ್ ಡಾಲರ್ (13,354 ರುಪಾಯಿ)
  • ಕತಾರ್: 488 ಕತಾರಿ ರಿಯಾಲ್ (12,655 ರೂ)
  • ಸೌದಿ ಅರೇಬಿಯಾ: 502 ಸೌದಿ ರಿಯಾಲ್ (12,643 ರುಪಾಯಿ)
  • ಓಮನ್: 51.75 ಒಮಾನಿ ರಿಯಾಲ್ (12,707 ರುಪಾಯಿ)
  • ಕುವೇತ್: 40.69 ಕುವೇತಿ ದಿನಾರ್ (12,495 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 210 ರೂ
  • ಚೆನ್ನೈ: 215 ರೂ
  • ಮುಂಬೈ: 210 ರೂ
  • ದೆಹಲಿ: 210 ರೂ
  • ಕೋಲ್ಕತಾ: 210 ರೂ
  • ಕೇರಳ: 215 ರೂ
  • ಅಹ್ಮದಾಬಾದ್: 210 ರೂ
  • ಜೈಪುರ್: 210 ರೂ
  • ಲಕ್ನೋ: 210 ರೂ
  • ಭುವನೇಶ್ವರ್: 215 ರೂ
  • ಪುಣೆ: 210

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us