Gold Rates 11 November: ಬಂಗಾರದ ಬೆಲೆ ಗ್ರಾಮ್​ಗೆ 195 ರೂ ಕುಸಿತ; ಇಲ್ಲಿದೆ ದರಪಟ್ಟಿ

Gold Price 11 November 2026: ಚಿನ್ನ, ಬೆಳ್ಳಿ ಬೆಲೆಗಳು ಬುಧವಾರ ಇಳಿದಿವೆ. ಚಿನ್ನದ ಬೆಲೆ 195 ರೂ, ಬೆಳ್ಳಿ ಬೆಲೆ 5 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 13,210 ರೂನಿಂದ 13,015 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 14,198 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 200 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 200 ರೂ ಇದೆ.

Gold Rates 11 November: ಬಂಗಾರದ ಬೆಲೆ ಗ್ರಾಮ್​ಗೆ 195 ರೂ ಕುಸಿತ; ಇಲ್ಲಿದೆ ದರಪಟ್ಟಿ
ಚಿನ್ನ
Image Credit source: PTI

Updated on: Nov 11, 2026 | 2:24 PM

ನವದೆಹಲಿ, ನವೆಂಬರ್ 11: ಚಿನ್ನದ ಬೆಲೆ ಸತತ ಎರಡನೇ ದಿನ ಕೆಳಗಿಳಿದಿದೆ. ನಿನ್ನೆ ಗ್ರಾಮ್​ಗೆ 45 ರೂ ಕಡಿಮೆಗೊಂಡಿದ್ದ ಬಂಗಾರದ ಬೆಲೆ ಇವತ್ತು ಬುಧವಾರ 195 ರೂಗಳಷ್ಟು ತಗ್ಗಿದೆ. ಎಂಸಿಎಕ್ಸ್ ಸ್ಪಾಟ್ ಮತ್ತು ಫ್ಯೂಚರ್ ಬೆಲೆಗಳೂ ಕಡಿಮೆಗೊಂಡಿವೆ. ಅಂತರರಾಷ್ಟ್ರೀಯ ಸ್ಪಾಟ್ ದರಗಳೂ ಕಡಿಮೆಗೊಂಡಿವೆ. ಬೆಳ್ಳಿ ಬೆಲೆಯೂ ಐದು ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,41,980 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 20,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 20,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 20,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 11ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,198
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,015
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,649
  • ಬೆಳ್ಳಿ ಬೆಲೆ 1 ಗ್ರಾಂಗೆ: 200 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,015 ರೂ
  • ಚೆನ್ನೈ: 13,015 ರೂ
  • ಮುಂಬೈ: 13,015 ರೂ
  • ದೆಹಲಿ: 13,030
  • ಕೋಲ್ಕತಾ: 13,015 ರೂ
  • ಕೇರಳ: 13,015 ರೂ
  • ಅಹ್ಮದಾಬಾದ್: 13,020 ರೂ
  • ಜೈಪುರ್: 13,030
  • ಲಕ್ನೋ: 13,030
  • ಭುವನೇಶ್ವರ್: 13,015 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 14,164 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 187 ರೂ

ಭಾರತದಲ್ಲಿ ಸ್ಪಾಟ್ ದರಗಳು

  • ಚಿನ್ನ 1 ಗ್ರಾಮ್​ಗೆ 14,036 ರೂ
  • ಬೆಳ್ಳಿ 1 ಗ್ರಾಮ್​ಗೆ 186 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 130.47 ಡಾಲರ್ (12,227 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.702 ಡಾಲರ್ (159 ರುಪಾಯಿ)

ಇದನ್ನೂ ಓದಿ: ಇಪಿಎಫ್​ಒ ವಿಶ್ವಸ್ತ ಮಂಡಳಿ ಸಭೆ ನವೆಂಬರ್ 19ಕ್ಕೆ; ಕನಿಷ್ಠ ಇಪಿಎಸ್ ಪಿಂಚಣಿ ಏರಿಸುವ ಸಂಬಂಧ ಚರ್ಚೆ

Loading...

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 14,198 ರುಪಾಯಿ
  • ಮಲೇಷ್ಯಾ: 543 ರಿಂಗಿಟ್ (12,499 ರುಪಾಯಿ)
  • ದುಬೈ: 485 ಡಿರಾಮ್ (12,372 ರುಪಾಯಿ)
  • ಅಮೆರಿಕ: 133 ಡಾಲರ್ (12,475 ರುಪಾಯಿ)
  • ಸಿಂಗಾಪುರ: 176.70 ಸಿಂಗಾಪುರ್ ಡಾಲರ್ (12,930 ರುಪಾಯಿ)
  • ಕತಾರ್: 489 ಕತಾರಿ ರಿಯಾಲ್ (12,570 ರೂ)
  • ಸೌದಿ ಅರೇಬಿಯಾ: 501 ಸೌದಿ ರಿಯಾಲ್ (12,509 ರುಪಾಯಿ)
  • ಓಮನ್: 51.80 ಒಮಾನಿ ರಿಯಾಲ್ (12,607 ರುಪಾಯಿ)
  • ಕುವೇತ್: 41.53 ಕುವೇತಿ ದಿನಾರ್ (12,625 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 200 ರೂ
  • ಚೆನ್ನೈ: 200 ರೂ
  • ಮುಂಬೈ: 200 ರೂ
  • ದೆಹಲಿ: 200 ರೂ
  • ಕೋಲ್ಕತಾ: 200 ರೂ
  • ಕೇರಳ: 200 ರೂ
  • ಅಹ್ಮದಾಬಾದ್: 200 ರೂ
  • ಜೈಪುರ್: 200 ರೂ
  • ಲಕ್ನೋ: 200 ರೂ
  • ಭುವನೇಶ್ವರ್: 200 ರೂ
  • ಪುಣೆ: 200

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us