Gold Silver Price Today | ಬೆಂಗಳೂರು: ನಿನ್ನೆ ಕೂಡ ಚಿನ್ನ, ಬೆಳ್ಳಿ ದರ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಅದೇ ರೀತಿ ಇಂದು ಸಹ ( ಸೆಪ್ಟೆಂಬರ್ 9, ಗುರುವಾರ) ಚಿನ್ನ (Gold Price), ಬೆಳ್ಳಿ ದರದಲ್ಲಿ (Silver Price) ಇಳಿಕೆಯಾಗಿದೆ. ಗಣೇಶ ಹಬ್ಬಕ್ಕೆಂದು ಚಿನ್ನಾಭರಣ ಖರೀದಿಸುವ ಪ್ಲಾನ್ ಮಾಡಿರಬಹುದು, ಇಲ್ಲವೇ ಪೂಜಾ ಸಾಮಗ್ರಿಗಳಿಗಾಗಿ ಬೆಳ್ಳಿಯನ್ನು ಕೊಳ್ಳಬೇಕೆಂದು ಯೋಚಿಸಿರಬಹುದು. ಚಿನ್ನ, ದರ ಇಳಿಕೆ ಕಂಡಿರುವುದು ಗ್ರಾಹಕರಿಗೆ ಸಮಾಧಾನ ಖುಷಿ ನೀಡುವ ವಿಚಾರ. ಹಾಗಾಗಿ ಚಿನ್ನ, ಬೆಳ್ಳಿ ಆಭರಣಗಳನ್ನು ಅಥವಾ ಸಾಮಗ್ರಿಗಳನ್ನು ಖರೀಸಿದುವ ಕುರಿತಾಗಿ ಯೋಚಿಸಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,100 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,41,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 3,000 ರೂಪಾಯಿ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,110 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,81,100 ರೂಪಾಯಿ ನಿಗದಿ ಮಾಡಲಾಗಿದೆ. ಸುಮಾರು 3,300 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 64,800 ರೂಪಾಯಿ ನಿಗದಿಯಾಗಿದೆ. ಸುಮಾರು 200 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.
ಸಭೆ, ಸಮಾರಂಭದ ಜತೆಗೆ ಹಬ್ಬ- ಹರಿದಿನಗಳು ಎದುರಿಗಿದ್ದಾಗ ಆಭರಣ ಕೊಳ್ಳಬೇಕು ಅನ್ನಿಸುವುದು ಸಹಜ. ಹಬ್ಬದ ಶುಭ ದಿನದಲ್ಲಿ ರಂಗು ರಂಗಿನ ಉಡುಗೆ ಧರಿಸಿ ಚಿನ್ನಾಭರಣ ತೊಟ್ಟು ಅಲಂಕಾರಗೊಳ್ಳಬೇಕು ಎಂಬೆಲ್ಲಾ ಆಸೆಗಳಿರಬಹುದು. ಇದು ಒಂದು ಕಡೆಯಾದರೆ, ಚಿನ್ನಾಭರಣ ಕಷ್ಟಕಾಲದಲ್ಲಿ ನೆರವಾಗುವುದರಿಂದ ಕೈಯ್ಯಲ್ಲಿ ಹಣವಿದ್ದಾಗ ಚಿನ್ನವನ್ನು ಖರೀದಿಸಿಡುವವರೂ ಇದ್ದಾರೆ. ಹಾಗಾಗಿಯೇ ಚಿನ್ನ, ಬೆಳ್ಳಿ ದರ ಎಷ್ಟಿದೆ? ಎಂಬ ಕುತೂಹಲ ಕೆರಳುವುದು.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,520 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,45,200 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 2,200 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ48,570 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,85,700 ರೂಪಾಯಿ ನಿಗದಿ ಮಾಡಲಾಗಿದೆ. ಸುಮಾರು 2,400 ರೂಪಾಯಿ ಇಳಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆ 69,100 ರೂಪಾಯಿ ಇದೆ. ಸುಮಾರು 500 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,250 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 300 ರೂಪಾಯಿ ಇಳಿಕೆ ಕಂಡು ಬಂದಿದೆ. 100 ಗ್ರಾಂ ಚಿನ್ನದ ದರ 4,62,500 ರೂಪಾಯಿ ನಿಗದಿಯಾಗಿದೆ. ಸುಮಾರು 3,000 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,450 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,04,500 ರೂಪಾಯಿ ನಿಗದಿಯಾಗಿದೆ. ಸುಮಾರು 3,400 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, 200 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 64,800 ರೂಪಾಯಿ ನಿಗದಿಯಾಗಿದೆ.
ಇದನ್ನೂ ಓದಿ:
Gold Rate Today: ಬೆಂಗಳೂರು ಸೇರಿದಂತೆ ಹಲವೆಡೆ ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಏರಿಕೆ!
Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಖರೀದಿಸಲು ಸುಸಮಯ
(Gold Silver Price fall down Today On 2021 September 9 check gold price in Bangalore Delhi Mumbai And Major City)
Published On - 7:57 am, Thu, 9 September 21