Edible Oil: ಭಾರತದ ಖಾದ್ಯ ತೈಲ ಆಮದು 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ
ಅಡುಗೆ ತೈಲ ಆಮದು ಆರು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ. ಅದರ ಹಿಂದಿನ ಕಾರಣ ಏನು ಎಂಬ ವಿವರ ಇಲ್ಲಿದೆ.
ಕೊವಿಡ್- 19 ಮತ್ತು ಬೇಡಿಕೆಯಲ್ಲಿ ಇಳಿಕೆ ಆಗಿರುವ ಕಾರಣಕ್ಕೆ ಭಾರತದ ಖಾದ್ಯ ತೈಲದ ಆಮದು ಪ್ರಮಾಣ ಸತತ ಎರಡನೇ ವರ್ಷವೂ ಕುಗ್ಗಬಹುದು, ಆರು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಯಬಹುದು ಎಂದು ಉದ್ಯಮದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಸಸ್ಯಜನ್ಯ ಎಣ್ಣೆಗಳ ಆಮದುದಾರರಿಂದ ಕಡಿಮೆ ಖರೀದಿ ಆಗಿರುವುದರಿಂದ ಆ ಅಂಶವು ಮಲೇಷ್ಯಾದ ತಾಳೆ ಎಣ್ಣೆ, ಯುಎಸ್ ಸೋಯಾ ಆಯಿಲ್ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಯ ಮೇಲೆ ತೂಗುತ್ತದೆ. ಕಳೆದ ವರ್ಷ ಕೊವಿಡ್- 19 ಏಕಾಏಕಿ ಕಾಣಿಸಿಕೊಳ್ಳುವ ಮುನ್ನ ಪ್ರತಿವರ್ಷ ಭಾರತದ ಬಳಕೆ ಏರುತ್ತಾ ಸಾಗಿತ್ತು. ಕಳೆದ ಅಕ್ಟೋಬರ್ 31ಕ್ಕೆ ಕೊನೆಗೊಂಡ ಮಾರ್ಕೆಟಿಂಗ್ ವರ್ಷದಲ್ಲಿ 21 ಮಿಲಿಯನ್ ಟನ್‌ಗಳಿಗೆ ಇಳಿದಿದೆ. ಒಂದು ವರ್ಷದ ಹಿಂದೆ ಇದು 22.5 ಮಿಲಿಯನ್ ಆಗಿತ್ತು ಎಂದು ವ್ಯಾಪಾರ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸಕ್ತ 2020/21ರ ಮಾರ್ಕೆಟಿಂಗ್ ವರ್ಷದಲ್ಲಿ ಬೇಡಿಕೆ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ಏಕೆಂದರೆ ಅದಕ್ಕೆ ಕಾರಣ ದಾಖಲೆಯ ಹೆಚ್ಚಿನ ಬೆಲೆಗಳು ಎಂದು ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎ) ಕಾರ್ಯನಿರ್ವಾಹಕ ನಿರ್ದೇಶಕರಾದ ಬಿವಿ ಮೆಹ್ತಾ ಹೇಳಿದ್ದಾರೆ. 2020/21ರಲ್ಲಿ ಭಾರತದ ಖಾದ್ಯ ತೈಲ ಆಮದು 13.1 ಮಿಲಿಯನ್ ಟನ್‌ಗಳಿಗೆ ಇಳಿಯಬಹುದು. ಇದು ಕಳೆದ ವರ್ಷದ 13.2 ಮಿಲಿಯನ್ ಇತ್ತು. ಈ ಬಾರಿ ಅದಕ್ಕಿಂತಲೂ ಇಳಿದು, ಆರು ವರ್ಷಗಳಲ್ಲಿ ಕಡಿಮೆ ಎಂದು ಮೆಹ್ತಾ ಹೇಳಿದ್ದಾರೆ.
“ಭಾರತವು ಅತ್ಯಂತ ಬೆಲೆ ಸೂಕ್ಷ್ಮ ಮಾರುಕಟ್ಟೆಯಾಗಿದೆ. ಮತ್ತು ಪ್ರಸ್ತುತ ಹೆಚ್ಚಿನ ಬೆಲೆಗಳು ಬೇಡಿಕೆಯನ್ನು ಮತ್ತಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ” ಎಂದು ಅವರು ಆನ್‌ಲೈನ್ ಸಮ್ಮೇಳನದಲ್ಲಿ ಹೇಳಿದ್ದಾರೆ. ಆಮದುಗಳು ಭಾರತದ ಬೇಡಿಕೆಯ ಮೂರನೇ ಎರಡರಷ್ಟು ಭಾಗವನ್ನು ಪೂರೈಸುತ್ತವೆ, ಪಾಮ್ ಎಣ್ಣೆ ಮುಖ್ಯವಾಗಿ ಅಗ್ರ ಉತ್ಪಾದಕರಾದ ಇಂಡೋನೇಷ್ಯಾ ಮತ್ತು ಮಲೇಷಿಯಾದಿಂದ ಬರುತ್ತದೆ. ಸೋಯಾ ಮತ್ತು ಸೂರ್ಯಕಾಂತಿಯಂತಹ ಇತರ ತೈಲಗಳು ಅರ್ಜೆಂಟೀನಾ, ಬ್ರೆಜಿಲ್, ಉಕ್ರೇನ್ ಮತ್ತು ರಷ್ಯಾದಿಂದ ಬರುತ್ತವೆ.
ಆದರೆ, ಈ ಮಾರ್ಕೆಟಿಂಗ್ ವರ್ಷದಲ್ಲಿ ಪಾಮ್ ಆಮದು ವರ್ಷದಲ್ಲಿ ಶೇ 8ರಷ್ಟು ಏರಿಕೆಯಾಗಿ, 7.8 ದಶಲಕ್ಷ ಟನ್‌ಗಳಿಗೆ ಏರಿಕೆಯಾಗಬಹುದು ಎಂದು ಅವರು ಹೇಳಿದ್ದಾರೆ. ಭಾರತವು ಸಂಸ್ಕರಿಸಿದ ತಾಳೆ ಎಣ್ಣೆಯ ಆಮದನ್ನು ಅನುಮತಿಸಿತು ಮತ್ತು ಕಚ್ಚಾ ವಿಧದ ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡಿ, ದೇಶೀಯ ಬೆಲೆಗಳನ್ನು ಕಡಿಮೆ ಮಾಡಿತು. ಕಳೆದ ವರ್ಷದಲ್ಲಿ ದೇಶೀಯ ಬೆಲೆಗಳು ದ್ವಿಗುಣಗೊಂಡಿವೆ.
ಸೋಯಾಬೀನ್ ಮತ್ತು ನೆಲಗಡಲೆ ಉತ್ಪಾದನೆಯು ಹೆಚ್ಚಾದ ನಂತರ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ 1 ಮಿಲಿಯನ್ ಟನ್‌ಗಳಷ್ಟು ಏರಿಕೆಯಾಗಿ, 9 ಮಿಲಿಯನ್ ಟನ್‌ಗಳಷ್ಟು ಹೆಚ್ಚಿದ ದೇಶೀಯ ಉತ್ಪಾದನೆಯಿಂದ ಭಾರತವು ಖಾದ್ಯ ತೈಲದ ಖರೀದಿಗಳನ್ನು ಮಿತಿಗೊಳಿಸಿದೆ ಎಂದು ಮೆಹ್ತಾ ಹೇಳಿದ್ದಾರೆ.
ಇದನ್ನೂ ಓದಿ: Edible oil: ಅಡುಗೆಗೆ ಬಳಸುವ ಎಣ್ಣೆ ಬೆಲೆಯಲ್ಲಿ ಆಗಲಿದೆ ಇಳಿಕೆ; ಕೇಂದ್ರ ಸರ್ಕಾರ ಕೈಗೊಂಡಿದೆ ಮಹತ್ತರ ತೀರ್ಮಾನ
(Edible Oil Import To India Could Be 6 Year Low Here Is The Details)