Edible oil: ಅಡುಗೆಗೆ ಬಳಸುವ ಎಣ್ಣೆ ಬೆಲೆಯಲ್ಲಿ ಆಗಲಿದೆ ಇಳಿಕೆ; ಕೇಂದ್ರ ಸರ್ಕಾರ ಕೈಗೊಂಡಿದೆ ಮಹತ್ತರ ತೀರ್ಮಾನ

ಅಡುಗೆಗೆ ಬಳಸುವ ಎಣ್ಣೆ, ಖಾದ್ಯ ತೈಲದಲ್ಲಿ ಬೆಲೆ ಇಳಿಕೆ ಆಗಲಿದೆ. ಏಕೆಂದರೆ, ಕೇಂದ್ರ ಸರ್ಕಾರವು ಖಾದ್ಯ ತೈಲದ ಆಮದಿನ ಮೇಲೆ ಟನ್​ಗೆ 112 ಯುಎಸ್​ಡಿ ತನಕ ಸುಂಕ ಕಡಿಮೆ ಮಾಡಿದೆ.

Edible oil: ಅಡುಗೆಗೆ ಬಳಸುವ ಎಣ್ಣೆ ಬೆಲೆಯಲ್ಲಿ ಆಗಲಿದೆ ಇಳಿಕೆ; ಕೇಂದ್ರ ಸರ್ಕಾರ ಕೈಗೊಂಡಿದೆ ಮಹತ್ತರ ತೀರ್ಮಾನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 17, 2021 | 10:20 PM

ಕೇಂದ್ರ ಸರ್ಕಾರವು ತಾಳೆಎಣ್ಣೆಯೂ ಸೇರಿದಂತೆ ಖಾದ್ಯ ತೈಲಗಳ ಆಮದಿನ ಮೇಲಿನ ಸುಂಂಕವನ್ನು ಇಳಿಕೆ ಮಾಡಿದೆ. ಒಂದು ಟನ್​ಗೆ 112 ಅಮೆರಿಕನ್​ ಡಾಲರ್​ ತನಕ ಇಳಿಕೆ ಮಾಡಿದೆ. ಈ ನಡೆಯಿಂದಾಗಿ ದೇಶೀಯವಾಗಿ ಖಾದ್ಯ ತೈಲಗಳ ದರಗಳಲ್ಲಿ ಇಳಿಕೆ ಆಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಕೇಂದ್ರೀಯ ನೇರ ತೆರಿಗೆ ಮಂಡಳಿ ಹಾಗೂ ಸೀಮಾಸುಂಕ (ಸಿಬಿಐಸಿ) ಅಧಿಸೂಚನೆಯನ್ನು ಹೊರಡಿಸುವ ಮೂಲಕವಾಗಿ ಕಚ್ಚಾ ತಾಳೆ ಎಣ್ಣೆ ಮೇಲಿನ ಆಮದು ತೆರಿಗೆಯನ್ನು ಟನ್​ಗೆ 86 ಯುಎಸ್​ಡಿ ಕಡಿಮೆ ಮಾಡಿದೆ. ಆರ್​ಬಿಡಿ ಮತ್ತು ಕಚ್ಚಾ ಪಾಮೋಲಿಮನ್ ತಲಾ 112 ಯುಎಸ್​ಡಿ ಇಳಿಸಿದೆ. ಇದರ ಜತೆಗೆ ಕಚ್ಚಾ ಸೋಯಾಬಿನ್ ತೈಲದ ಎಣ್ಣೆ ಮೂಲ ಆಮದು ದರವನ್ನು ಟನ್​ಗೆ 37 ಯುಎಸ್​ಡಿಗೆ ಕಡಿಮೆ ಮಾಡಿದೆ. ಈ ಬದಲಾವಣೆಯು ಜೂನ್ 17, 2021ರ ಗುರುವಾರದಿಂದ ಜಾರಿಗೆ ಬರಲಿದೆ. ಯಾವಾಗ ಆಮದು ಮೂಲ ಬೆಲೆ ಮೇಲೆ ಪಾವತಿಸುವ ತೆರಿಗೆಯೇ ಕಡಿಮೆ ಆಗುತ್ತದೋ ಆಗ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯು ಕಡಿಮೆ ಆಗುತ್ತದೆ ಎಂದು ತೆರಿಗೆ ತಜ್ಞರು ಅಭಿಪ್ರಾಯ ಪಡುತ್ತಾರೆ.

ಭಾರತದಲ್ಲಿ ದೇಶೀಯವಾಗಿ ತಯಾರಾಗುವ ಖಾದ್ಯ ತೈಲಕ್ಕೂ ಹಾಗೂ ಬಳಕೆ ಮಾಡಿಕೊಳ್ಳವ ಪ್ರಮಾಣಕ್ಕೂ ಮಧ್ಯೆ ಭಾರೀ ವ್ಯತ್ಯಾಸ ಇದೆ. ಆ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಮೇಲೇರುತ್ತಲೇ ಸಾಗಿದೆ ಎನ್ನುತ್ತಾರೆ ವಿಷಯ ತಜ್ಞರು. ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಖಾದ್ಯ ತೈಲದ ಬೆಲೆ ಹತ್ತಿರ ಹತ್ತಿರ ದುಪ್ಪಟ್ಟಿಗಿಂತ ಹೆಚ್ಚೇ ಆಗಿದೆ. ಭಾರತಕ್ಕೆ ಅಗತ್ಯ ಇರುವ ಖಾದ್ಯ ತೈಲದಲ್ಲಿ ಮೂರನೇ ಎರಡು ಭಾಗದಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕಳೆದ ತಿಂಗಳಿಂದ ಖಾದ್ಯ ಎಣ್ಣೆ ಬೆಲೆಯಲ್ಲಿ ಇಳಿಕೆ ಆಗುತ್ತಾ ಬರುತ್ತಿದೆ. ಹಲವು ಮಧ್ಯಮಾವಧಿ ಹಾಗೂ ದೀರ್ಘಾವಧಿ ಕ್ರಮಗಳ ಮೂಲಕ ದೇಶವು ಈ ಸೆಗ್ಮೆಂಟ್​ನಲ್ಲಿ ಸ್ವಾವಲಂಬಿ ಆಗಲು ಪ್ರಯತ್ನಿಸುತ್ತಿದೆ ಎಂದು ಸರ್ಕಾರ ಹೇಳಿದೆ.

ದತ್ತಾಂಶಗಳ ಪ್ರಕಾರವಾಗಿ ಹೇಳಬೇಕು ಅಂದರೆ, ಒಟ್ಟಾರೆಯಾಗಿ ಖಾದ್ಯ ಮತ್ತು ಖಾದ್ಯೇತರ ತೈಲಗಳು 2020ರ ನವೆಂಬರ್​ನಿಂದ 2021ರ ಮೇ ತಿಂಗಳ ಮಧ್ಯೆ 76,77,998 ಟನ್​ಗಳು ಆಮದಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 70,61,749 ಟನ್​ಗಳು ಆಗಿದ್ದವು. ಅಂದರೆ ಶೇಕಡಾ 9ರಷ್ಟು ಹೆಚ್ಚಾಗಿ ಆಮದಾಗಿದೆ. ಅಂದಹಾಗೆ ಖಾದ್ಯ ಎಣ್ಣೆಯ ಲೆಕ್ಕಾಚಾರದ ವರ್ಷ ಎಂದು ನವೆಂಬರ್​ನಿಂದ ಅಕ್ಟೋಬರ್​ ತಿಂಗಳನ್ನು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Cooking oil: ಅಡುಗೆಗೆ ಬಳಸುವ ಎಣ್ಣೆ ಬೆಲೆಯಲ್ಲಿ ವರ್ಷದಲ್ಲಿ ಶೇ 62ರಷ್ಟು ಏರಿಕೆ; ಒಂದಲ್ಲ, ಎರಡರಲ್ಲೂ ಇದು ಎಲ್ಲದರ ಕಥೆ

(Indian govt slashes tariff on edible oil with effect from June 17th, 2021)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್